ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯಾನಕ ವಿಡಿಯೋ: ಸುಡುವ ಟೈರ್ ಎಸೆದ ತಮಿಳುನಾಡು ರೆಸಾರ್ಟ್ ಕಾರ್ಮಿಕರು: ಆನೆ ಸಾವು

|
Google Oneindia Kannada News

ಚೆನ್ನೈ, ಜನವರಿ 22: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿರುವ ಖಾಸಗಿ ರೆಸಾರ್ಟ್‌ನ ಸಿಬ್ಬಂದಿಯೊಬ್ಬರು ಸುಡುವ ಟೈರ್ ಅನ್ನು ಆನೆ ಮೇಲೆ ಎಸೆದಿದ್ದರಿಂದ ದಾರಿ ತಪ್ಪಿ ಬಂದಿದ್ದ ಕಾಡು ಆನೆ ಸಾವನ್ನಪ್ಪಿದೆ. ಇದು ಮಾನವನ ಕ್ರೌರ್ಯದ ಪರಮಾವಧಿ ಎಂದು ಹೇಳಬಹುದು.

ಟೈರ್ ಎಸೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಆನೆಯ ಕಿವಿಯಲ್ಲಿ ರಕ್ತಸ್ರಾವವಾಗಿದ್ದು, ಮಸಿನಗುಡಿಯಲ್ಲಿ ಕೆಲವು ಅರಣ್ಯ ಇಲಾಖೆ ಕಾವಲುಗಾರರಿಗೆ ಪತ್ತೆಯಾಗಿದೆ. ಆದರೆ ಅದನ್ನು ಮುದುಮಲೈ ಅರಣ್ಯ ವ್ಯಾಪ್ತಿಯಲ್ಲಿರುವ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯುವ ಮೊದಲೇ ಅದು ಸತ್ತುಹೋಗಿತ್ತು. ಶವಪರೀಕ್ಷೆ ನಡೆಸಿದಾಗ ಸುಟ್ಟಗಾಯಗಳಿಂದಾಗಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಜಿಹಾದಿ ಗ್ಯಾಂಗ್ ಸದಸ್ಯನ ಬಂಧನತಮಿಳುನಾಡಿನಲ್ಲಿ ಜಿಹಾದಿ ಗ್ಯಾಂಗ್ ಸದಸ್ಯನ ಬಂಧನ

ಅರಣ್ಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ಕೃತ್ಯ ಮಾಡಿದ ಇಬ್ಬರು ವ್ಯಕ್ತಿಗಳನ್ನು ರೆಸಾರ್ಟ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ರೆಸಾರ್ಟ್ ಮಾಲೀಕರಾದ ರೇಮಂಡ್ ಮತ್ತು ಸಿಬ್ಬಂದಿ ಪ್ರಶಾಂತ್ ಅವರನ್ನು ಬಂಧಿಸಲಾಗಿದೆ. ತನಿಖೆಯ ವೇಳೆ, ಆನೆಯ ಮೇಲೆ ಸುಡುವ ಟೈರ್ ಎಸೆಯುವ ವಿಡಿಯೋಗಳು ಅವರ ಫೋನ್‌ಗಳಲ್ಲಿ ಕಂಡುಬಂದಿವೆ.

Horror Video: Tamil Nadu Resort Workers Throwed Burning Tires: Elephant Death

ಘಟನೆಯ ತುಣುಕನ್ನು ಅರಣ್ಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ. ಆನೆಯ ಮೇಲೆ ಕಟ್ಟಡದಿಂದ ಸುಡುವ ಟೈರ್ ಅನ್ನು ಎಸೆಯಲಾಗಿದ್ದು, ಕಿವಿಗೆ ಗಾಯವಾಗಿದೆ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ನೋವು ತಾಳಲಾರದೆ ಆನೆ ಓಡಿಹೋಗಿದೆ.

ರೆಸಾರ್ಟ್ ಕಾರ್ಮಿಕರು ಆನೆಯ ಕಡೆಗೆ ಬೆಂಕಿಯನ್ನು ಎಸೆಯುವ ಮೂಲಕ ಅದನ್ನು ಹೆದರಿಸಲು ಪ್ರಯತ್ನಿಸಿರುವ ಹಾಗೆ ಕಂಡು ಬರುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅದು ಕೋಲು ಅಥವಾ ಇನ್ನಾವುದೇ ವಸ್ತುವಾಗಿದ್ದರೆ ಅದು ಆನೆಗೆ ಬಡಿದು ಬೀಳುತ್ತಿತ್ತು. ಆದರೆ ಅದು ಟೈರ್ ಆಗಿದ್ದರಿಂದ, ಅದು ಆನೆಯ ಕಿವಿಯಲ್ಲಿ ಹೊತ್ತು ಸಿಲುಕಿಕೊಂಡಿದೆ.

ನಂತರ, ಆನೆ ಓಡಿ ಹೋಗಿ ಡ್ಯಾಂ ಬಳಿ ಬಿದ್ದಿರುವುದು ಕಂಡುಬಂದಿದೆ. ಅರಣ್ಯ ಇಲಾಖೆಯ ಪಶುವೈದ್ಯರು ಅದನ್ನು ಚೇತರಿಸಿಕೊಳ್ಳುವಂತೆ ಪ್ರಯತ್ನಿಸಿದ್ದು, ಆದರೆ ವ್ಯರ್ಥವಾಯಿತು.

ಕೀವು ತುಂಬಿದ ಸೆಪ್ಟಿಕ್ ಫಿಸ್ಟುಲಾ ಮತ್ತು ತೀವ್ರವಾದ ರಕ್ತಹೀನತೆ, ಹೈಪೋವೊಲೆಮಿಯಾಕ್ಕೆ ಕಾರಣವಾಗುವ ರಕ್ತದ ತೀವ್ರ ಹರಿದಿದ್ದರಿಂದಾಗಿ 50 ವರ್ಷದ ಆನೆ ಸಾವಿಗೀಡಾಯಿತು, ಆದರೂ ಕಿವಿಯಲ್ಲಿ ಸುಟ್ಟ ಗಾಯಗಳು ಆನೆಯ ಸಾವಿಗೆ ಕಾರಣವಾಗಲಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ.

English summary
A wild elephant was killed by an act of human cruelty as a burning tyre was hurled at it by the staff of a private resort in Masinagudi in Nilgiris district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X