• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕದಂಬೂರ್ ಹಿಲ್ಸ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಖಾಸಗಿ ಹೆಲಿಕಾಪ್ಟರ್

|
Google Oneindia Kannada News

ಚೆನ್ನೈ, ಜನವರಿ 08: ಕರ್ನಾಟಕದಿಂದ ಕೇರಳಕ್ಕೆ ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಕದಂಬೂರು ಹಿಲ್ಸ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ಶನಿವಾರ ನಡೆದಿದೆ.

ಚಿಕಿತ್ಸೆಗಾಗಿ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಕರ್ನಾಟಕದಿಂದ ಕೇರಳಕ್ಕೆ ದಂಪತಿ ಹೊರಟಿದ್ದರು, ಹೆಲಿಕಾಪ್ಟರ್‌ನಲ್ಲಿ ನಾಲ್ಕು ಮಂದಿ ಇದ್ದರು. ಹವಾಮಾನ ವೈಪರಿತ್ಯದಿಂದಾಗಿ ತಮಿಳುನಾಡಿನ ಪವಲಕುಟ್ಟೈ ಹಳ್ಳಿಯಲ್ಲಿರುವ ಕದಂಬೂರು ಹಿಲ್ಸ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

Breaking: ಹೆಲಿಕಾಪ್ಟರ್ ಪತನ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿಧನBreaking: ಹೆಲಿಕಾಪ್ಟರ್ ಪತನ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿಧನ

ಪೈಲಟ್ ಹಾಗೂ ಎಂಜಿನಿಯರ್ ಸೇರಿ ನಾಲ್ವರು ಹೆಲಿಕಾಪ್ಟರ್‌ನಲ್ಲಿದ್ದರು, ಸತ್ಯಮಂಗಲಂ ಹುಲಿ ಸಂರಕ್ಷಿಥಾರಣ್ಯಕ್ಕೆ ಬರುವಾಗ ಹವಾಮಾನ ಬದಲಾವಣೆಯಾಗಿತ್ತು, ಹೀಗಾಗಿ ಬೆಳಗ್ಗೆ 10.30ರ ವೇಳೆಗೆ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ನಾಲ್ವರೂ ಸುರಕ್ಷಿತವಾಗಿದ್ದಾರೆ. ಹವಾಮಾನ ಸರಿಯಾದ ಬಳಿಕ ತಮ್ಮ ಪಯಣವನ್ನು ಮುಂದುವರೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ, ಜನರಲ್ ಬಿಪಿನ್ ರಾವರ್ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿ 14 ಮಂದಿ ಮುಂದಿ ಮೃತಪಟ್ಟಿದ್ದರು. ಜನರಲ್ ಬಿಪಿನ್ ರಾವತ್ ಅವರೊಂದಿಗೆ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್‌ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯ್ಕ್ ಗುರುಸೇವಕ್ ಸಿಂಗ್, ನಾಯ್ಕ್ ಜಿತೇಂದರ್ ಕುಮಾರ್, ನಾಯ್ಕ್ ವಿವೇಕ್ ಕುಮಾರ್, ನಾಯ್ಕ್ ಬಿ ಸಾಯಿ ತೇಜಾ, ಹವಾಲ್ದಾರ್ ಸತ್ಪಾಲ್ ಮತ್ತು ಪೈಲಟ್‌ಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು.

English summary
A private helicopter with four persons on board made an emergency landing on a farm land at Pavalakuttai village in Kadambur hills in Erode district on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion