ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಲ್ಲಿ ಕುಂಭದ್ರೋಣ ಮಳೆ, ಜನಜೀವನ ಚಿತ್ರಾನ್ನ

|
Google Oneindia Kannada News

ಚೆನ್ನೈ, ನವೆಂಬರ್, 24: ಚೆನ್ನೈಯನ್ನು ತೊಯ್ದು ತೊಪ್ಪೆ ಮಾಡಿದ್ದ ಮಳೆರಾಯ ಎರಡು ದಿನದ ಬಿಡುವು ಬಿಟ್ಟು ಮತ್ತೆ ಬಂದಿದ್ದಾನೆ. ಈ ಬಾರಿ ಕಳೆದ ಬಾರಿಗಿಂತಲೂ ಜೋರಾಗಿ ಅಪ್ಪಳಿಸುತ್ತಿದ್ದಾನೆ. ಧಾರಾಕಾರ ಮಳೆ ಪರಿಣಾಮ ಚೆನ್ನೈ ಮಹಾನಗರ ಸಮುದ್ರವಾಗಿ ಮಾರ್ಪಟ್ಟಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕಳೆದ ಎರಡು ವಾರಗಳಿಂದ ಮಳೆ ಸುರಿಯುತ್ತಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ, ತೂತುಕುಡಿ, ತಿರುವಣ್ಣಾಮಲೈ, ಕಾಂಚಿಪುರಂ, ತಿರುವಳ್ಳಪುರಂ, ಕುಡಲೂರು ಸೇರಿದಂತೆ ಹಲವು ಜಿಲ್ಲೆಗಳು ಜಲಾವೃತವಾಗಿವೆ.[ಈ ಪರಿಯ ಜಿಟಿಜಿಟಿ ಮಳೆ ನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ!]

ತಮಿಳುನಾಡಿನಲ್ಲಿ ಸೇನೆ ಮತ್ತು ಅಲ್ಲಿನ ಆಡಳಿತ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಕೇಂದ್ರ ಸರ್ಕಾರ ಸಹ ತುರ್ತು ಪರಿಹಾರಕ್ಕೆ 936 ಕೋಟಿ ರು. ಬಿಡುಗಡೆ ಮಾಡಿದೆ. ತಮಿಳುನಾಡಿನ ಜಲಪ್ರಳಯದ ಚಿತ್ರಗಳನ್ನು ನೋಡಿಕೊಂಡು ಬನ್ನಿ....

ಶಾಲಾ ಕಾಲೇಜಿಗಳಿಗೆ ರಜೆ

ಶಾಲಾ ಕಾಲೇಜಿಗಳಿಗೆ ರಜೆ

ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಬಹುತೇಕ ಪ್ರದೇಶಗಳಲ್ಲಿ ಜಲಪ್ರಳಯವೇ ಉಂಟಾದಂತಾಗಿದೆ. ದೈನಂದಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು-ನಾಲ್ಕು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಒಂದೇ ದಿನ 9 ಸೆಂಮೀ ಮಳೆ

ಒಂದೇ ದಿನ 9 ಸೆಂಮೀ ಮಳೆ

ಚೆನ್ನೈಯಲ್ಲಿ ನಿನ್ನೆ ಒಂದೇ ದಿನ ದಾಖಲೆಯ 9 ಸೆ.ಮೀ. ಮಳೆ ಬಿದ್ದಿದೆ. ಬಹುತೇಕ ಜಿಲ್ಲೆಗಳಲ್ಲಿ ವಿದ್ಯುತ್, ದೂರ ಸಂಪರ್ಕ ಕಡಿತಗೊಂಡು ಈ ಪ್ರದೇಶಗಳಲ್ಲಿ ಬಾಹ್ಯ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ. ಗ್ರಾಮೀಣ ಭಾಗದಲ್ಲಿ ರಸ್ತೆ ಸಂಪರ್ಕಗಳು ಸಂಪೂರ್ಣವಾಗಿ ಕಡಿತಗೊಂಡಿವೆ

ಸಾವಿರಾರು ಕೋಟಿ ನಷ್ಟ

ಸಾವಿರಾರು ಕೋಟಿ ನಷ್ಟ

ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಮೂಲಭೂತ ವಸ್ತುಗಳ ಸರಬರಾಜಿಗೂ ತೊಂದರೆಯಾಗಿದೆ. ದಿನಬಳಕೆ ಅಗತ್ಯ ವಸ್ತುಗಳು ದೊರಕದೆ ಜನರು ಪರಿತಪಿಸುವಂತಾಗಿದೆ.

ಆಂಧ್ರ ಪ್ರದೇಶದಲ್ಲೂ ಮಳೆ ಆರ್ಭಟ

ಆಂಧ್ರ ಪ್ರದೇಶದಲ್ಲೂ ಮಳೆ ಆರ್ಭಟ

ತಿರುಪತಿಯಲ್ಲಿ ಮಳೆ ಧಾರಕಾರವಾಗಿ ಸುರಿಯುತ್ತಿದೆಯಾದರೂ, ವೆಂಕಟೇಶ್ವರನ ದರ್ಶನಕ್ಕೆ ಸದ್ಯಕ್ಕೆ ಯಾವ ತೊಂದರೆ ಇಲ್ಗ. ದೇವಾಲಯದ ಆಡಳಿತ ಮಂಡಳಿ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ.

ವಿದ್ಯುತ್ ಸಂಪರ್ಕ ಸ್ಥಗಿತ

ವಿದ್ಯುತ್ ಸಂಪರ್ಕ ಸ್ಥಗಿತ

ತಮಿಳುನಾಡಿನ ಗ್ರಾಮೀಣ ಭಾಗಗಳು ಮತ್ತು ಸಮುದ್ರ ತೀರ ಪ್ರದೇಶಗಳು ಮಳೆ ಹೊಡೆತಕ್ಕೆ ಸಂಪೂರ್ಣವಾಗಿ ನಲುಗಿ ಹೋಗಿವೆ.

ನದಿಯಾದ ರಸ್ತೆ

ನದಿಯಾದ ರಸ್ತೆ

ಚೆನ್ನೈ ನ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದೆ, ಸುಮಾರು 4-5 ಅಡಿ ನೀರು ನಿಂತಿದೆ ಎಂದರೆ ಮಳೆಯ ಆರ್ಭಟವನ್ನು ಲೆಕ್ಕ ಹಾಕಬಹುದು.

ರೈಲು ಸಂಚಾರ ಸ್ಥಗಿತ

ರೈಲು ಸಂಚಾರ ಸ್ಥಗಿತ

ಧಾರಾಕಾರ ಮಳೆ ಹಿನ್ನೆಲೆಯಲ್ಲಿ ರೈಲು ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಚೆನ್ನೈ ನಿಂದ ಹೊರಡುವ ಮತ್ತು ಆಗಮಿಸುವ ರೈಲುಗಳಲ್ಲಿ ಬದಲಾವಣೆ ಮಾಡಲಾಗಿದೆ. ವಿಮಾನ ಯಾನ ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ.

ಸಂಚಾರ ದುಸ್ತರ

ಸಂಚಾರ ದುಸ್ತರ

ನಿರಂತರ ಮಳೆಯಿಂದ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳ ತೀರದು.

ರಕ್ಷಣಾ ಕಾರ್ಯ

ರಕ್ಷಣಾ ಕಾರ್ಯ

ಸಂತ್ರಸ್ತರನ್ನು ರಕ್ಷಣೆ ಮಾಡಲು ಸೇನೆ ಹಗಲಿರುಳು ಶ್ರಮಿಸುತ್ತಿದೆ. ಒಂದು ಕಡೆಯಿಂದ ಮತ್ತೊಂದೆಡೆ ಬೋಟಿಂಗ್ ಮಾಡುತ್ತ ಹೊರಟ ಸೈನಿಕರ ತಂಡ.

ಜಲಪ್ರಳಯ

ಜಲಪ್ರಳಯ

ಜಲಪ್ರಳಯ ಅನ್ನದೇ ಬೇರೆ ಏನು ಹೇಳಲು ಸಾಧ್ಯವಿಲ್ಲ. ಧಾರಾಕಾರ ಮಳೆಯನ್ನು ಮೀರಿ ಮಹಿಳೆಯೊಬ್ಬರು ಮನೆ ಕಡೆ ತೆರಳಲು ಪ್ರಯತ್ನ ಮಾಡುತ್ತಿರುವ ದೃಶ್ಯ.

ಮಳೆ ನಿರಂತರ

ಮಳೆ ನಿರಂತರ

ವಾಯುಭಾರ ಕುಸಿತದ ಪರಿಣಾಮ ನಿರಂತರವಾಗಿ ವರ್ಷಧಾರೆ ಸುರಿಯುತ್ತಿರುವುದರಿಂದ ರಸಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.

ತೆಪ್ಪ ಬಳಸಿ ಸಂಚಾರ

ತೆಪ್ಪ ಬಳಸಿ ಸಂಚಾರ

ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಲು ಅಥವಾ ಸುರಕ್ಷಿತ ಸ್ಥಳಕ್ಕೆ ಧಾವಿಸಲು ಜನರು ತೆಪ್ಪ ಬಳಸಬೇಕಾದ ಪರಿಸ್ಥಿತಿ ಬಂದೊದಗಿದೆ.

English summary
News In Pics: As Northeast Monsoon remains active over Chennai, the city has received more than 1000 mm of rainfall so far this November. Heavy rainfall will continue over Chennai till Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X