ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸರವಣ ಭವನ ಮಾಲೀಕ ಸಾವು

|
Google Oneindia Kannada News

ಚೆನ್ನೈ, ಜುಲೈ 18: ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸರವಣ ಭವನದ ಮಾಲೀಕ ರಾಜಗೋಪಾಲ್ ಮೃತಪಟ್ಟಿದ್ದಾರೆ.

ಅವರು ಇತ್ತೀಚೆಗಷ್ಟೇ ಪೊಲೀಸರಿಗೆ ಶರಣಾಗಿದ್ದಾಗಿದ್ದರು. ಮೂಲಗಳ ಪ್ರಕಾರ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಕಳೆದವಾರ ಶರಣಾಗಿದ್ದ ಪಿ ರಾಜಗೋಪಾಲ್ ಅವರನ್ನು ಅನಾರೋಗ್ಯದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಜೈಲು ಸೇರಬೇಕಿದ್ದ ಸರವಣ ಭವನ ಮಾಲೀಕನಿಗೆ ತೀವ್ರ ಹೃದಯಾಘಾತ ಜೈಲು ಸೇರಬೇಕಿದ್ದ ಸರವಣ ಭವನ ಮಾಲೀಕನಿಗೆ ತೀವ್ರ ಹೃದಯಾಘಾತ

ರಾಜಗೋಪಾಲ್ ಅವರು ನ್ಯಾಯಾಲಯಕ್ಕೆ ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡಲು ಸುಪ್ರೀಂಕೋರ್ಟ್ ಈ ಹಿಂದೆ ನಿರಾಕರಿಸಿತ್ತು.

Heart attack Sarvana Bhavan owner dies

ಎನ್ ವಿ ರಾಮಣ್ಣ ನೇತೃತ್ವದ ಪೀಠ ಶರವಣ ಭವನ ಮಾಲಿಕ ರಾಜಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಿರಿಸಿದ್ದರು, 2001 ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷಗೆ ಗುರಿಯಾಗಿರುವ ರಾಜಾ ಗೋಪಾಲ್ ಜುಲೈ 7 ರಂದು ಕೋರ್ಟ್ ಗೆ ಶರಣಾಗಬೇಕಿತ್ತು ಆದರೆ ಆತ ಶರಣಾಗಿರಲಿಲ್ಲ. ಕಳೆದ ಕೆಲವು ದಿನಗಳಿಂದ ಇಲ್ಲಿನ ಅಶೋಕನಗರದ ಮನೆಯಲ್ಲಿ ವಾಸವಿದ್ದ ರಾಜಗೋಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಅನಾರೋಗ್ಯದ ನಿಮಿತ್ತ ಜೀವಾವಧಿ ಶಿಕ್ಷೆ ಅನುಭವಿಸಲು ಸಮಯವಕಾಶ ಕೇಳಿದ್ದ ರಾಜಗೋಪಾಲ್‌ ಬೇಡಿಕೆಯನ್ನು ಕೋರ್ಟ್ ನಿರಾಕರಿಸಿದ್ದ ಹಿನ್ನೆಲೆಯಲ್ಲಿ, ಇತ್ತೀಚೆಗೆ ವೆಂಟಿಲೇಟರ್‌ನೊಂದಿಗೆ ಮದ್ರಾಸ್ ಹೈಕೋರ್ಟಿಗೆ ಅವರು ಹಾಜರಾಗಿದ್ದರು.

2001ರಲ್ಲಿ ತಮ್ಮ ಸುಪ್ರಸಿದ್ಧ ಶರವಣ ಭವನ ಹೊಟೇಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಾಂತಕುಮಾರ್ ಅವರ ಪತ್ನಿಯನ್ನು ಮದುವೆಯಾಗಲು ಇಚ್ಛಿಸಿದ್ದರು ರಾಜಗೋಪಾಲ್. ಇದಕ್ಕೆ ಶಾಂತಕುಮಾರ್ ಅಡ್ಡಿಯಾಗಿದ್ದರು ಎನ್ನುವ ಕಾರಣಕ್ಕೆ, ಅವರನ್ನು ಅಪಹರಣಗೈದು, ಕೊಲೆಗೆ ಸುಫಾರಿ ಕೊಟ್ಟಿದ್ದರು.

English summary
Due to Heart attack Sarvana Bhavan owner Rajagopal died. also known as the dosa king, was put on a ventilator on Saturday night after he suffered a massive cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X