ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಗಜ ಚಂಡಮಾರುತಕ್ಕೆ 11 ಮಂದಿ ಬಲಿ

|
Google Oneindia Kannada News

Recommended Video

Cyclone Gaja :ತಮಿಳುನಾಡಿನಲ್ಲಿ ಗಜ ಚಂಡಮಾರುತಕ್ಕೆ ಆರು ಮಂದಿ ಬಲಿ | Oneindia Kannada

ಚೆನ್ನೈ, ನವೆಂಬರ್ 16: ಗಜ ಚಂಡ ಮಾರುತ ತಮಿಳುನಾಡಿಗೆ ತಲುಪಿದ್ದು ಶುಕ್ರವಾರ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.

ಕಡಲೂರು ನಲ್ಲಿ ಎರಡು ಮಂದಿ, ತಾಂಜಾವೂರ್ ನಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಚಂಡಮಾರುತವು 120 ಕೆಎಂಪಿಎಚ್ ವೇಗದಲ್ಲಿ ಆವರಿಸುತ್ತಿದೆ.

ತ.ನಾಡು ಕಡಲ ಪ್ರದೇಶಕ್ಕೆ 'ಗಜ' ಚಂಡಮಾರುತ; ಸನ್ನದ್ಧ ಸ್ಥಿತಿಯಲ್ಲಿ ಸಾವಿರಾರು ಮಂದಿ ತ.ನಾಡು ಕಡಲ ಪ್ರದೇಶಕ್ಕೆ 'ಗಜ' ಚಂಡಮಾರುತ; ಸನ್ನದ್ಧ ಸ್ಥಿತಿಯಲ್ಲಿ ಸಾವಿರಾರು ಮಂದಿ

ತಮಿಳುನಾಡು ನೈಸರ್ಗಿಕ ಮತ್ತು ವಿಕೋಪ ಕೇಂದ್ರದ ವರದಿ ಪ್ರಕಾರ ತಗ್ಗು ಪ್ರದೇಶದಲ್ಲಿರುವ 76,290ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 300ಕ್ಕೂ ಹೆಚ್ಚು ನಿರಾಶ್ರಿತರ ಕೇಂದ್ರಗಳಲ್ಲಿ ಇರಿಸಲಾಗಿದೆ.ನಾಗಪಟ್ಟಣಂ, ಪುದುಕೊಟ್ಟಯ್, ತಿರುವರೂರ್ ನಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ.

ಚಂಡಮಾರುತ ಪಶ್ಚಿಮಕ್ಕೆ ಮಥ ಬದಲಾಯಿಸಲಿದ್ದು ಮುಂದಿನ ಆರು ಗಂಟೆಗಳ ಕಾಲ ಆರ್ಭಟ ಕಡಿಮೆ ಇರಲಿದೆ.ನಾಗಪಟ್ಟಣಂನಲ್ಲಿ ಹೆಚ್ಚು ಮಳೆಯಿಂದಾಗಿ ಭೂ ಕುಸಿತ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕೆಲಸ ಮಾಡುತ್ತಿದೆ.

ದಕ್ಷಿಣ ರೈಲ್ವೆಯು ಚೆನ್ನೈನಿಂದ ನಾಗಪಟ್ಟಣಂ ತೆರಳಲಿರುವ ನಾಲ್ಕು ರೈಲು ಸೇವೆಯನ್ನು ರದ್ದುಗೊಳಿಸಿದೆ. ಹಾಗೆಯೇ ತಾಂಜಾವೂರ್, ತಿರುವರೂರ್, ನಾಗಪಟ್ಟಣಂಗೆ ತೆರಳುತ್ತಿದ್ದ ನಾಲ್ಕು ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ.

ತಮಿಳುನಾಡಿನ ಯಾವ್ಯಾವ ಭಾಗದಲ್ಲಿ ಎಷ್ಟು ಮಳೆ

ತಮಿಳುನಾಡಿನ ಯಾವ್ಯಾವ ಭಾಗದಲ್ಲಿ ಎಷ್ಟು ಮಳೆ

ತಮಿಳುನಾಡುನಲ್ಲಿ ಈಗಾಗಲೇ ಆರು ಮಂದಿ ಮೃತಪಟ್ಟಿದ್ದು 81 ಸಾವಿರಕ್ಕೂ ಹೆಚ್ಚು ಜನರನ್ನು ತಗ್ಗು ಪ್ರದೇಶದಿಂದ ಸ್ಥಳಾಂತರಿಸಲಾಗಿದೆ. ಕಡಲೂರು, ನಾಗಪಟ್ಟಣ, ತೋಂಡಿ, ಪಂಬನ್ ಕರೈಕಲ್, ಪುದುಚೆರಿಯಲ್ಲಿ ಸುಮಾರು 3ರಿಂದ 8 ಸೆಂ.ಮೀ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 5.30ರವರೆಗೆ ನಾಗಪಟ್ಟಣದಲ್ಲಿ 5 ಸೆಂ,ಮೀ ಮಳೆಯಾಗಿದೆ ಎಂದು ಚೆನ್ನೈ ಹವಾಮಾನ ಇಲಾಖೆ ವರದಿ ಮಾಡಿದೆ.

ಗಜ ಪಥ ಬದಲು: ಬೆಂಗಳೂರಿಗೆ ಚಂಡಮಾರುತ ಭೀತಿ ಇಲ್ಲ ಗಜ ಪಥ ಬದಲು: ಬೆಂಗಳೂರಿಗೆ ಚಂಡಮಾರುತ ಭೀತಿ ಇಲ್ಲ

471 ನಿರಾಶ್ರಿತ ಕೇಂದ್ರಗಳಿಗೆ 81 ಸಾವಿರ ಮಂದಿ ಸ್ಥಳಾಂತರ

471 ನಿರಾಶ್ರಿತ ಕೇಂದ್ರಗಳಿಗೆ 81 ಸಾವಿರ ಮಂದಿ ಸ್ಥಳಾಂತರ

ಗಜ ಚಂಡ ಮಾರುತದಿಂದಾಗಿ ಮಂದಿ ಸಾವನ್ನಪ್ಪುತ್ತಿದ್ದಾರೆ, ತಮಿಳುನಾಡು ಕರಾವಳಿ ಭಾಗದಲ್ಲಿರುವ ಜನರನ್ನು 471 ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ನಾಗಪಟ್ಟಣಂ, ಪುದುಕೊಟ್ಟಯ್, ಕಡಲೂರು, ತಾಂಜಾವೂರ್ ಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ.

ವಾಯುಭಾರ ಕುಸಿತ: ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ 'ಗಜ'ಮಳೆ ವಾಯುಭಾರ ಕುಸಿತ: ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ 'ಗಜ'ಮಳೆ

ತಮಿಳುನಾಡಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ತಮಿಳುನಾಡಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಗಜ ಚಂಡ ಮಾರುತ ಅಪಾಯವನ್ನು ತಂದೊಡ್ಡುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ. ತಮಿಳುನಾಡು ನೈಸರ್ಗಿಕ ವಿಕೋಪ ಕೇಂದ್ರವು ಒಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದರು, ಗಜ ಚಂಡ ಮಾರುತ ಅಪ್ಪಳಿಸುವ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ವಿವರವಾಗಿ ನೀಡಿದ್ದಾರೆ.

ಗಜ ಚಂಡಮಾರುತ ಎಫೆಕ್ಟ್: ಬೆಂಗಳೂರಲ್ಲಿ ಮೂರು ದಿನ ಮಳೆ ಸಾಧ್ಯತೆ ಗಜ ಚಂಡಮಾರುತ ಎಫೆಕ್ಟ್: ಬೆಂಗಳೂರಲ್ಲಿ ಮೂರು ದಿನ ಮಳೆ ಸಾಧ್ಯತೆ

ಗಜ ಚಂಡ ಮಾರುತ: ವಿದ್ಯುತ್ ಸಂಪರ್ಕ ಕಡಿತ

ಗಜ ಚಂಡ ಮಾರುತ: ವಿದ್ಯುತ್ ಸಂಪರ್ಕ ಕಡಿತ

ಗಲ ಚಂಡ ಮಾರುತ ಚೆನ್ನೈಗೆ ಅಪ್ಪಳಿಸಿರುವ ಕಾರಣ ಮರಗಳು ಧರೆಗುರುಳಿವೆ, ವಿದ್ಯುತ್ ಕಂಬಗಳು ನೆಲ ಕಂಡಿವೆ ಹಾಗಾಗಿ ವೇದಾರಣ್ಯ, ಮನ್ನಾರ್‌ಗುಡಿ, ಇರುಲ್ ನೀಕಿ, ತಿರುವರೂರ್ ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತ ಮಾಡಲಾಗಿದೆ.

English summary
Two Cuddalore residents and four people in Thanjavur were killed on Friday as the severe cyclonic storm 'Gaja' made a landfall in Tamil Nadu with wind speed gusting up to 120 kmph.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X