ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದ ಮುಂಚೂಣಿ ಕಾರ್ಯಕರ್ತರಲ್ಲಿ ಸಾವಿನ ಪ್ರಮಾಣ ಶೇ.95ರಷ್ಟು ಕಡಿಮೆ

|
Google Oneindia Kannada News

ಚೆನ್ನೈ, ಜುಲೈ 07: ಕೊರೊನಾ ಲಸಿಕೆ ಪಡೆದ ಮುಂಚೂಣಿ ಆರೋಗ್ಯ ಕಾರ್ಯಕರ್ತರಲ್ಲಿ ಸಾವಿನ ಪ್ರಮಾಣ ಶೇ.95ರಷ್ಟು ಕಡಿಮೆ ಎಂದು ಅಧ್ಯಯನ ತಿಳಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕೊರೊನಾ ಲಸಿಕೆಯ ಪ್ರಭಾವದ ಕುರಿತು ಅಧ್ಯಯನ ನಡೆಸಿತ್ತು, ಅದರಲ್ಲಿ ಎರಡೂ ಲಸಿಕೆ ಪಡೆದ ಮುಂಚೂಣಿ ಕಾರ್ಯಕರ್ತರಲ್ಲಿ ಕೊರೊನಾ ಸೋಂಕು ತಗುಲಿದರೂ ಸಾವಿನ ಪ್ರಮಾಣ ಶೇ.95ರಷ್ಟು ಕಡಿಮೆ ಎಂದು ಹೇಳಿದೆ.

ಎಂಥಾ ಅಚ್ಚರಿ: ಕೊರೊನಾ ಲಸಿಕೆ ಪಡೆದ ಬಳಿಕ ಮರಳಿತು ಕಣ್ಣಿನ ದೃಷ್ಟಿಎಂಥಾ ಅಚ್ಚರಿ: ಕೊರೊನಾ ಲಸಿಕೆ ಪಡೆದ ಬಳಿಕ ಮರಳಿತು ಕಣ್ಣಿನ ದೃಷ್ಟಿ

ತಮಿಳುನಾಡಿನಲ್ಲಿರಾಜ್ಯ ಪೊಲೀಸ್ ಸಿಬ್ಬಂದಿ ಮೇಲೆ ಸಮೀಕ್ಷೆ ನಡೆಸಲಾಗಿದ್ದು, ಲಸಿಕೆಗಳು ಶೇ.82ರಷ್ಟು ಪರಿಣಾಮಕಾರಿ ಎಂಬುದು ಬಹಿರಂಗಗೊಂಡಿದೆ.

Frontline Workers Reveals 2 Doses Of COVID Vaccine 95 Percent Effective In Preventing Deaths

ಒಂದು ಡೋಸ್ ಲಸಿಕೆ ಶೇ.82ರಷ್ಟು ಪರಿಣಾಮಕಾರಿಯಾಗಿದ್ದರೆ ಎರಡೂ ಡೋಸ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಎಂದು ತಿಳಿಸಲಾಗಿದೆ. ಅಧ್ಯಯನವನ್ನು 117,524 ಮಂದಿ ಪೊಲೀಸ್‌ ಸಿಬ್ಬಂದಿ ಮೇಲೆ ನಡೆಸಲಾಗಿದೆ, ತಮಿಳುನಾಡಿನಲ್ಲಿ 1,17,524 ಮಂದಿ ಪೊಲೀಸ್ ಸಿಬ್ಬಂದಿಯಲ್ಲಿ 32,792 ಮಂದಿ ಮೊದಲ ಡೋಸ್ ಹಾಗೂ 67,673 ಮಂದಿ ಎರಡು ಡೋಸ್ ಲಸಿಕೆ ಹಾಗೂ 17,059 ಪೊಲೀಸ್ ಸಿಬ್ಬಂದಿ ಒಂದು ಲಸಿಕೆಯನ್ನೂ ಪಡೆದಿಲ್ಲ.

ಏಪ್ರಿಲ್ 13ರಿಂದ ಮೇ 14ರವರೆಗೆ 31 ಮಂದಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ, ಅದರಲ್ಲಿ ನಾಲ್ಕು ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದರು, ಏಳು ಮಂದಿ ಮೊದಲ ಡೋಸ್ ಪಡೆದಿದ್ದರು, 20 ಮಂದಿ ಲಸಿಕೆ ಪಡೆದಿರಲಿಲ್ಲ.

ಕೊರೊನಾ ಲಸಿಕೆಯು ಕೊರೊನಾದಿಂದ ಸಾವು ಸಂಭವಿಸದಂತೆ ನೋಡಿಕೊಳ್ಳುತ್ತದೆ, ಒಂದು ಡೋಸ್ ಲಸಿಕೆ ಶೇ.82ರಷ್ಟು ಪರಿಣಾಮಕಾರಿಯಾಗಿದ್ದರೆ, ಎರಡು ಡೋಸ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದೆ ಎಂಬುದು ಸಾಬೀತಾಗಿದೆ.

English summary
Former Union Minister PR Kumaramangalam's wife was murdered at Delhi home, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X