• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದೂ ಧರ್ಮದ ಪ್ರಸಿದ್ಧ ದೇವಾಲಯ ಚಿದಂಬರಂ ಬಗ್ಗೆ ಗಾಲಿ ರೆಡ್ಡಿ

By ಗಾಲಿ ಜನಾರ್ಧನ ರೆಡ್ಡಿ
|

ತಮಿಳುನಾಡಿನ ದೇಗುಲ ದರ್ಶನ ಪ್ರವಾಸದಲ್ಲಿರುವ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಪ್ರವಾಸ, ದೇಗುಲದ ಇತಿಹಾಸ ಹಾಗೂ ಶಿವನ ಮಹತ್ವದ ಬಗ್ಗೆ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.. ಗಾಲಿ ರೆಡ್ಡಿ ಅವರ ಬರಹ ನಿಮ್ಮ ಮುಂದೆ....

ಭಗವಂತನಾದ ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯ ಇರುವುದು ಚಿದಂಬರಂ ಎಂಬ ನಗರದಲ್ಲಿ. ಈ ನಗರವು ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಪೂರ್ವ ಮಧ್ಯಭಾಗದಲ್ಲಿರುವ ಕಡಲೂರು ಎಂಬ ಜಿಲ್ಲೆಗೆ ಸೇರಿದೆ. ನಾನು ಇಲ್ಲಿಗೆ ಕುಟುಂಬ ಸಮೇತ ಭೇಟಿ ನೀಡಿ, ಪರಮಾತ್ಮನ ಸ್ವರೂಪಿಯಾದ ಚಿದಂಬರಂ ದರ್ಶನ ಪಡೆದ ಹಾಗೂ ಈ ದೇವಾಲಯದ ವಿಶೇಷತೆಯನ್ನು ನಾನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.

ವಿವಿಧ ದೇಗುಲ ದರ್ಶನ ಸಮಗ್ರ ಸುದ್ದಿ ಪರಿಚಯ

ನಿರಾಕಾರನಾದ ಭಗವಂತ ಶಿವನು ತನ್ನ ಹೆಂಡತಿಯಾದ ಶಿವಗಾಮಿ ಯೊಂದಿಗೆ ನಿರಂತರ ಸಂತೋಷವಾದ "ಆನಂದ ತಾಂಡವ" ನೃತ್ಯದಲ್ಲಿ ತೊಡಗಿದ್ದಾನೆ ಎಂಬುದು ಈ ದೇವಸ್ಥಾನದ ಇತಿಹಾಸ. ಚಿದಂಬರಂ ದೇವಾಲಯದ ಈ ಸ್ಥಳವನ್ನು ಒಂದು ಪರದೆಯಿಂದ ಮುಚ್ಚಲಾಗಿದೆ. ಇದನ್ನು ಎಳೆದಾಗ ಭಗವಂತನ ಸನ್ನಿಧಾನವನ್ನು ಸೂಚಿಸುವ ಚಿನ್ನದ "ಬಿಲ್ವ" ಎಲೆಗಳ ತೋರಣವನ್ನು ತೂಗುಬಿಟ್ಟಿರುವುದನ್ನು ನಾವು ಕಾಣಬಹದು. ಪ್ರತಿ ದಿನ ಪೂಜೆಗಳಲ್ಲಿ ಪ್ರಧಾನ ಅರ್ಚಕರೊಬ್ಬರು ಶಿವೋಹಂಭವ ಪರದೆಯನ್ನು ಸರಿಸುವುದರ ಮೂಲಕ ಅಂಧಕಾರವನ್ನು ಹೋಗಲಾಡಿಸಿ, ಭಗವಂತನ ಸಾನಿಧ್ಯವನ್ನು ಪ್ರಕಟಿಸುವುದನ್ನು ಸಾಂಕೇತಿಕವಾಗಿ ತೋರಿಸಲಾಗುತ್ತದೆ.

ತಿಲೈ ಅರಣ್ಯಗಳಲ್ಲಿದ್ದ ಋಷಿಗಳು

ತಿಲೈ ಅರಣ್ಯಗಳಲ್ಲಿದ್ದ ಋಷಿಗಳು

ಪೌರಾಣಿಕ ಕಥೆಯಲ್ಲಿ ತಿಲೈ ಅರಣ್ಯಗಳಲ್ಲಿ ಮಂತ್ರ-ತಂತ್ರಗಳ ಬಗ್ಗೆ ಅತೀವವಾದ ನಂಬಿಕೆಯಿದ್ದ ಸಂತರ, ಋಷಿಗಳ ಗುಂಪೊಂದು ಇತ್ತು. ಇವರು ತಮ್ಮ ಮಂತ್ರಗಳ ಅಥವಾ ಯಕ್ಷಿಣಿ ವಿದ್ಯೆಯ ಮೂಲಕ ದೇವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂಬ ನಂಬಿಕೆಯನ್ನು ಹೊಂದಿದ್ದರು. ಆಗ ಭಗವಂತನಾದ ಶಿವನು ಒಬ್ಬ ಸರಳ ಭಿಕ್ಷುಕನಂತೆ ಭಿಕ್ಷಾಟನೆಯನ್ನು ಮಾಡುತ್ತಾ ಅರಣ್ಯದಲ್ಲಿ ವಿಹರಿಸುತ್ತಿದ್ದನು. ಆಗ ಭಗವಂತನಾದ ವಿಷ್ಣುವು ಮೋಹಿನಿ ರೂಪದಲ್ಲಿ ಆತನ ಹೆಂಡತಿಯಾಗಿ ಜೊತೆಯಲ್ಲಿದ್ದನು.

ಭಿಕ್ಷುಕ ವೇಶದಲ್ಲಿದ್ದ ಶಿವನು

ಭಿಕ್ಷುಕ ವೇಶದಲ್ಲಿದ್ದ ಶಿವನು

ಆಗ ಅಲ್ಲಿದ್ದ ಋಷಿಗಳ ಪತ್ನಿಯರು ಸ್ಫುರದ್ರೂಪಿಯಾದ ಭಿಕ್ಷುಕ ಮತ್ತು ಆತನ ಹೆಂಡತಿಯ ರೂಪ ಮತ್ತು ತೇಜಸ್ಸಿಗೆ ಮರುಳಾಗುತ್ತಾರೆ. ಇದನ್ನು ಕಂಡ ಋಷಿಗಳು ರೋಷಗೊಂಡು ತಮ್ಮ ಯಕ್ಷಿಣಿ ವಿದ್ಯೆಗಳ ಮೂಲಕ ಸರ್ಪಗಳನ್ನು ಆಹ್ವಾನ ಮಾಡುತ್ತಾರೆ. ಆದರೆ ಭಿಕ್ಷುಕ ವೇಶದಲ್ಲಿದ್ದ ಶಿವನು ಸರ್ಪಗಳನ್ನು ಎತ್ತಿ ತನ್ನ ಜಡೆ, ಕುತ್ತಿಗೆ ಮತ್ತು ಸೊಂಟದ ಸುತ್ತ ಆಭರಣಗಳನ್ನಾಗಿ ಧರಿಸುತ್ತಾನೆ. ಇದರಿಂದ ಮತ್ತಷ್ಟು ಅಕ್ರೋಶಗೊಂಡ ಋಷಿಗಳೂ ಒಂದು ಭಯಂಕರವಾದ ಹುಲಿಯನ್ನು ಆಹ್ವಾನ ಮಾಡುತ್ತಾರೆ.

ಚರ್ಮವನ್ನು ಸುಲಿದು ಸೊಂಟಕ್ಕೆ ಹೊದಿಕೆ

ಚರ್ಮವನ್ನು ಸುಲಿದು ಸೊಂಟಕ್ಕೆ ಹೊದಿಕೆ

ಶಿವನು ಅದರ ಚರ್ಮವನ್ನು ಸುಲಿದು ತನ್ನ ಸೊಂಟಕ್ಕೆ ಹೊದಿಕೆಯಾಗಿ ಧರಿಸುತ್ತಾನೆ. ಇದರಿಂದ ಹತಾಶೆಗೊಂಡ ಋಷಿಗಳು ತಮ್ಮ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ, ಮುಯಾಲಕನ್ ಎಂಬ ಅತ್ಯಂತ ಬಲಿಷ್ಟವಾದ ಭೂತವನ್ನು ಆಹ್ವಾನ ಮಾಡುತ್ತಾರೆ. ಮುಗುಳ್ನಗೆ ನಕ್ಕ ಭಗವಂತನು ಭೂತದ ಬೆನ್ನೇರಿ ಅವನನ್ನು ಅಚಲವಾಗಿರಿಸಿ, ಆನಂದ ತಾಂಡವವನ್ನಾಡುವುದರ ಮೂಲಕ ತನ್ನ ನಿಜ ಸ್ವರೂಪವನ್ನು ತೋರುತ್ತಾನೆ.

 ಋಷಿಗಳು ಶಿವನಿಗೆ ಶರಣಾಗುತ್ತಾರೆ

ಋಷಿಗಳು ಶಿವನಿಗೆ ಶರಣಾಗುತ್ತಾರೆ

ಆಗ ತಮ್ಮ ಎಲ್ಲಾ ಯಕ್ಷಿಣಿ ಮಂತ್ರಗಳಿಗಿಂತ ಮಿಗಿಲಾದವನು ಭಗವಂತನು ಎಂದು ಅರಿತು ಋಷಿಗಳು ಶಿವನಿಗೆ ಶರಣಾಗುತ್ತಾರೆ.

ಚಿದಂಬರಂ ದೇವಸ್ಥಾನದಲ್ಲಿ, ಶಿವನು, ನಟರಾಜನ ರೂಪದಲ್ಲಿ ನೆಲೆಸಿದ್ದಾನೆ. ನಟೇಶ ಅಥವಾ ನಟರಾಜ, ಶಿವನ ಪ್ರಮುಖ ಸ್ವರೂಪಗಳಲ್ಲಿ ಒಂದಾಗಿದೆ. ನಾನು ಕುಟುಂಬ ಸಮೇತ ನಟರಾಜನ ರೂಪದಲ್ಲಿರುವ ಚಿದಂಬರಂ ದರ್ಶನ ಪಡೆದು, ದೇವಸ್ಥಾನದಲ್ಲಿ ನಾನು ನನ್ನ ಕುಟುಂಬದೊಂದಿಗೆ ಕುಳಿತಿರುವ ಭಾವಚಿತ್ರ ಎಂದು ಚಿತ್ರವನ್ನು ಹಂಚಿಕೊಂಡಿದ್ದಾರೆ.

English summary
Former Minister Gali Janardhan Reddy with his family visited Chidambaram temple in Tamil Nadu. He has posted Mythological history of Chidambaram Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X