ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳುವಾ ನ್ಯಾಯಮೂರ್ತಿಯ ನೋಡಲ್ಲಿ!: ಕೃಷಿಗಿಳಿದು ಮಾದರಿಯಾದ ನ್ಯಾ. ಸೆಲ್ವಂ

|
Google Oneindia Kannada News

ಚೆನ್ನೈ, ಆಗಸ್ಟ್ 11: ನ್ಯಾಯಪೀಠದ ಹಿಂದಿನ ಕುರ್ಚಿಯಲ್ಲಿ ಕುಳಿತು ನ್ಯಾಯತೀರ್ಮಾನ ಮಾಡುತ್ತಿದ್ದ ನ್ಯಾಯಮೂರ್ತಿ ಈಗ ಟ್ರ್ಯಾಕ್ಟರ್ ಏರಿ ಹೊಲದ ಉಳುಮೆ ಮಾಡುತ್ತಿದ್ದಾರೆ. ಸಂವಿಧಾನದ ಕಾನೂನುಗಳ ಅಡಿಯಲ್ಲಿ ಆದೇಶ ನೀಡುತ್ತಿದ್ದವರು 'ಮಣ್ಣಿನ ಮಗ'ನಾಗಿ ಕೃಷಿಯೊಂದಿಗಿನ ಸಾಂಗತ್ಯದೊಡನೆ ಸುಖಿಸುತ್ತಿದ್ದಾರೆ.

ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ. ಸೆಲ್ವಂ ಅವರು ಟಿ ಶರ್ಟ್, ಶಾರ್ಟ್ಸ್ ಧರಿಸಿಕೊಂಡು ತಲೆಗೆ ಟವೆಲ್ ಸುತ್ತಿಕೊಂಡು ಟ್ರ್ಯಾಕ್ಟರ್ ಚಲಾಯಿಸುತ್ತಾ ಹೊಲದ ಉಳುಮೆ ಮಾಡುವ ವಿಡಿಯೋ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ

ಸುದೀರ್ಘ ಕಾಲದ ಕಾನೂನು ವಲಯದ ಸೇವೆಯ ಬಳಿಕ ಸೆಲ್ವಂ (62) ಹುಟ್ಟಿದ ಊರಾದ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತಿರುಪ್ಪತ್ತೂರ್ ತಾಲ್ಲೂಕಿನ ಪುಳಂಕುರಿಚಿ ಗ್ರಾಮದಲ್ಲಿ ತಮ್ಮ ನೆಚ್ಚಿನ ಕೃಷಿ ಕಾಯಕಕ್ಕೆ ಮರಳಿದ್ದಾರೆ.

ಸೆಲ್ವಂ ಅವರ ಅನುಕರಣೀಯ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಅಲ್ಲಿಯೇ ಅವಕಾಶವಿತ್ತು

'ಸಾಮಾನ್ಯವಾಗಿ ನ್ಯಾಯಮೂರ್ತಿಗಳು ನಿವೃತ್ತರಾದ ಬಳಿಕ ನಿವೃತ್ತಿ ನಂತರದ ಉದ್ಯೋಗಗಳಾದ ಏಕ ಸದಸ್ಯ ಆಯೋಗ ಅಥವಾ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವುದಿದೆ. ಆದರೆ, 13 ವರ್ಷ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಸೆಲ್ವಂ ಅವರು ತಮ್ಮ ಹೊಲದಲ್ಲಿ ಕೃಷಿ ಮಾಡುತ್ತಿದ್ದಾರೆ' ಎಂಬ ತಮಿಳಿನ ವಾಟ್ಸಾಪ್ ಸಂದೇಶ ಹರಿದಾಡುತ್ತಿದೆ.

ಮೀನು ಮಾರಿ ಟ್ರೋಲ್ ಆದ ಹುಡುಗಿಯ ಕರುಣಾಜನಕ ಕತೆ ಕೇಳಿ...ಮೀನು ಮಾರಿ ಟ್ರೋಲ್ ಆದ ಹುಡುಗಿಯ ಕರುಣಾಜನಕ ಕತೆ ಕೇಳಿ...

ಕೃಷಿ ನನ್ನ ಮೂಲ ಕಸುಬು

ಕೃಷಿ ನನ್ನ ಮೂಲ ಕಸುಬು

'ಕೃಷಿ ನನ್ನ ಮೂಲ ಕಸುಬು. ನನ್ನ ಹಿಂದಿನ ನ್ಯಾಯದಾನದ ವೃತ್ತಿಯಿಂದ ಭಾರಿ ಬದಲಾವಣೆ ಇದಾಗಿದೆ ಎಂದು ನನಗನ್ನಿಸುತ್ತಿಲ್ಲ' ಎಂದಿದ್ದಾರೆ ಸೆಲ್ವಂ.

'ಅದೃಷ್ಟವೋ ದುರದೃಷ್ಟವೋ, ನಾನು ಚೆನ್ನಾಗಿ ಓದಿದೆ. ಬಳಿಕ ಕಾನೂನು ಪದವಿ ಪಡೆಯಲು ನನ್ನನ್ನು ಮದುರೆಗೆ ಕಳುಹಿಸಲಾಯಿತು' ಎನ್ನುತ್ತಾರೆ ಅವರು.

ಮದುರೆಯಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಅವರು, 2015ರಲ್ಲಿ ಚೆನ್ನೈಗೆ ವರ್ಗಾವಣೆಗೊಂಡಿದ್ದರು.

ಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರುಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರು

ಭತ್ತದ ಕೃಷಿ

ಭತ್ತದ ಕೃಷಿ

ಕೃಷಿಕ ಕುಟುಂಬದವರಾದ ಸೆಲ್ವಂ, 2018ರ ಏಪ್ರಿಲ್‌ನಿಂದ ಪುಳಂಕುರಿಚಿ ಗ್ರಾಮದ ತಮ್ಮ ಕುಟುಂಬದ ಐದು ಎಕರೆ ಹೊಲದಲ್ಲಿ ಕೃಷಿ ಮಾಡುತ್ತಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಎದ್ದು ಹೊಲಕ್ಕೆ ತೆರಳುವ ಸೆಲ್ವಂ, ಸಂಜೆ ಆರರವರೆಗೂ ಅಲ್ಲಿಯೇ ಇರುತ್ತಾರೆ. ಅವರು ಸ್ವತಃ ಟ್ರ್ಯಾಕ್ಟರ್ ಓಡಿಸಿ ಉಳುಮೆ ಮಾಡುತ್ತಾರೆ.

'ಈಗ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದೇನೆ. ಅದರ ಕಟಾವಿನ ಬಳಿಕ ತರಕಾರಿ ಮತ್ತು ಶೇಂಗಾ ಬೆಳೆಯುತ್ತೇನೆ. ಇಲ್ಲಿ ಭತ್ತವೇ ಪ್ರಧಾನ ಬೆಳೆ' ಎನ್ನುವ ಅವರು, ಹೊಲದ ಕೆಲಸಕ್ಕೆ ಯಾರಿಗೋ ಸಂಬಳ ಕೊಡುವ ಬದಲು ತಾವೇ ಅದನ್ನು ಕಲಿತು ಮಾಡುವುದರಲ್ಲಿ ಖುಷಿ ಸಿಗುತ್ತದೆ ಎನ್ನುತ್ತಾರೆ.

1981ರಲ್ಲಿ ಕಾನೂನು ವೃತ್ತಿ

1981ರಲ್ಲಿ ಕಾನೂನು ವೃತ್ತಿ

1981ರಲ್ಲಿ ಕಾನೂನು ವೃತ್ತಿ ಬದುಕು ಆರಂಭಿಸಿದ ಸೆಲ್ವಂ, ತಿರುವಣ್ಣಮಲೈ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನ್ಯಾಯದಾನದ ಬದುಕು ಆರಂಭಿಸಿ, ಮದ್ರಾಸ್ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗುವವರೆಗೂ ಸೇವೆ ಸಲ್ಲಿಸಿದ್ದಾರೆ.

31 ವರ್ಷದ ವೃತ್ತಿ ಬದುಕಿನಲ್ಲಿ ತೆರೆದ ನ್ಯಾಯಾಲಯಗಳಲ್ಲಿ ಕನಿಷ್ಠ 10 ತೀರ್ಪುಗಳನ್ನು ಅವರು ನೀಡಿದ್ದಾರೆ.

ನ್ಯಾಯಾಂಗ ಸ್ವತಂತ್ರವಾಗಬೇಕು

ನ್ಯಾಯಾಂಗ ಸ್ವತಂತ್ರವಾಗಬೇಕು

'ನನ್ನ ವೈಯಕ್ತಿಕ ಅನುಭವದ ಪ್ರಕಾರ ನ್ಯಾಯಾಂಗ ಭಾರತದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಇದಕ್ಕಾಗಿ ನ್ಯಾಯಾಂಗವನ್ನು ಸಂಪೂರ್ಣವಾಗಿ ದೂರಲು ಸಾಧ್ಯವಿಲ್ಲ. ಆದರೆ, ಇದು ಭ್ರಷ್ಟ ರಾಜಕಾರಣಿಗಳು ಬೆಳೆಯಲು ಸಹಾಯ ಮಾಡುತ್ತದೆ. ನ್ಯಾಯಾಂಗವು ಸ್ವತಂತ್ರವಾಗಿರಬೇಕು ಮತ್ತು ಜನರ ಸೇವೆ ಮಾಡುವುದು ಅದರ ಕರ್ತವ್ಯವಾಗಬೇಕು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ವೃತ್ತಿಯೇ ಸಾಕು

ಕೃಷಿ ವೃತ್ತಿಯೇ ಸಾಕು

ಕೋರ್ಟ್ ಕಲಾಪಗಳಲ್ಲಿ ಅತ್ಯಂತ ಶಿಸ್ತಿನಿಂದ ವರ್ತಿಸುತ್ತಿದ್ದ ಸೆಲ್ವಂ, ಅದರಾಚೆಗಿನ ತಮ್ಮ ಬದುಕಿನಲ್ಲಿಯೂ ನ್ಯಾಯಬದ್ಧತೆಯನ್ನು ಮೈಗೂಡಿಸಿಕೊಂಡಿದ್ದರು.

ನಿವೃತ್ತಿಯಾದ ಗಳಿಗೆಯಲ್ಲೇ ಅವರು ಸರ್ಕಾರ ನೀಡಿದ್ದ ಕಾರಿನ ಕೀಯನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಸ್ವಂತ ಕಾರಿನಲ್ಲಿ ಮನೆಗೆ ಮರಳಿದ್ದರು.

ನ್ಯಾಯಾಂಗ ವೃತ್ತಿಯು ತಮ್ಮ ಬದುಕಿನ ಮುಚ್ಚಿದ ಬಾಗಿಲು ಎಂದು ಅವರು ದೃಢವಾಗಿ ಹೇಳುತ್ತಾರೆ. ನನ್ನ ಭೂಮಿಯಲ್ಲಿ ಕೃಷಿ ಮಾಡಿ ಉತ್ತಮ ಬೆಳೆ ತೆಗೆಯುವುದೇ ನನಗೆ ನಿಜವಾದ ಸಂತೋಷ ನೀಡುತ್ತದೆ. ಪ್ರಕೃತಿಯ ನಡುವೆ ಬದುಕುವುದು ಅದ್ಭುತ ಅನುಭವ ಎನ್ನುತ್ತಾರೆ ಅವರು.

English summary
Videos of Madras High Court Retired Justice A Selvam ploughing a field on tractor goes viral from few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X