ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತಮಿಳರಾದ ನೀವು...' ಸಂದರ್ಶಕನ ಪ್ರಶ್ನೆಗೆ ಶಿವನ್ ಕೊಟ್ಟ ತೂಕದ ಉತ್ತರ!

|
Google Oneindia Kannada News

Recommended Video

ಸಂದರ್ಶಕನ ಪ್ರಶ್ನೆಗೆ ಶಿವನ್ ಕೊಟ್ಟ ತೂಕದ ಉತ್ತರ | K Sivan | Oneindia Kannada

ಚೆನ್ನೈ, ಸೆಪ್ಟೆಂಬರ್ 10: ಚಂದ್ರಯಾನ 2 ರ ನಂತರ ನೂರಾರು ಕೋಟಿ ಭಾರತೀಯರ ಮನಗೆದ್ದ ಇಸ್ರೋ ಅಧ್ಯಕ್ಷ ಕೆ. ಶಿವನ್ ಇದೀಗ ಮತ್ತೊಮ್ಮೆ ತಮ್ಮ ತೂಕದ ಮಾತಿನಿಂದ ಸುದ್ದಿಯಲ್ಲಿದ್ದಾರೆ.

ತಮಿಳು ಚಾನೆಲ್ ವೊಂದು ಅವರ ಸಂದರ್ಶನ ನಡೆಸುತ್ತಿದ್ದ ಸಂದರ್ಭದಲ್ಲಿ, ಸಂದರ್ಶಕರು 'ತಮಿಳರಾಗಿ ಇಂಥ ಉನ್ನತ ಹುದ್ದೆಯಲ್ಲಿದ್ದೀರಿ, ತಮಿಳುನಾಡಿನ ಜನರಿಗೆ ಏನು ಹೇಳಲು ಬಯಸುತ್ತೀರಿ?' ಎಂದು ಕೇಳಿದರು.

ಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆ

ಈ ಪ್ರಶ್ನೆಗೆ ಹೆಚ್ಚು ಯೋಚನೆಯನ್ನೂ ಮಾಡದೆ, ತಕ್ಷಣವೇ ಉತ್ತರಿಸಿದ ಶಿವನ್, ''ಎಲ್ಲಕ್ಕಿಂತ ಮೊದಲು ನಾನೊಬ್ಬ ಭಾರತೀಯ" ಎಂದರು! ಪ್ರಶ್ನೆ ಕೇಳಿದ್ದ ಸಂದರ್ಶಕನೂ ಕೆಲಕಾಲ ಪೇಚಿಗೆ ಸಿಲುಕಿದರು! ರಾಜ್ಯ, ಭಾಷೆ, ಧರ್ಮ, ಜಾತಿಯನ್ನು ಮೀರಿ ದೇಶಕ್ಕೆ ಕೊಡುಗೆ ನೀಡುವುದು ತಮ್ಮ ಮೊದಲ ಆದ್ಯತೆ ಎನ್ನುವ ಮೂಲಕ ಕೆ.ಶಿವನ್ ತಮ್ಮ ಪ್ರಬುದ್ಧ ವ್ಯಕ್ತಿತ್ವವನ್ನು ತೋರಿಸಿಕೊಟ್ಟರು.

ತೂಕದ ಉತ್ತರ

ತೂಕದ ಉತ್ತರ

ಸಂದರ್ಶಕ ಕೇಳಿದ ಪ್ರಶ್ನೆಗೆ ತಕ್ಷಣವೇ ಉತ್ತರಿಸಿದ ಶಿವನ್, "ಮೊದಲನೆಯದಾಗಿ ನಾನು ಭಾರತೀಯ. ನಾನು ISRO ಸೇರಿದ್ದು ಭಾರತೀಯನಾಗಿ, ಅಲ್ಲಿ ಬೇರೆ ಬೇರೆ ಪ್ರದೇಶದ, ಭಾಷೆಯ ಜನರು ಒಟ್ಟಾಗಿ ಕಲಸ ಮಾಡುತ್ತಾರೆ, ನಾವು ಒಟ್ಟಾಗಿ ಕೊಡುಗೆ ನೀಡುತ್ತೇವೆ. ಆದರೆ ನನ್ನ ಗೆಲುವನ್ನು ಸಂಭ್ರಮಿಸುತ್ತಿರುವ ಎಲ್ಲ ಸಹೋದರರಿಗೂ ನಾನು ಋಣಿಯಾಗಿದ್ದೇನೆ" ಎಂದರು.

ತಮಿಳುನಾಡಿನ ಕನ್ಯಾಕುಮಾರಿ ಶಿವನ್ ಹುಟ್ಟೂರು

ತಮಿಳುನಾಡಿನ ಕನ್ಯಾಕುಮಾರಿ ಶಿವನ್ ಹುಟ್ಟೂರು

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮೇಳ ಸರಕ್ಕಳ್ವಿಲೈೆಂಬಲ್ಲಿ ಜನಿಸಿದ ಶಿವನ್ (62) ಅತೀ ಬಡತನದ ಬಾಲ್ಯ ಕಂಡವರು. ಎಷ್ಟೋ ಸಾರಿ ಓದನ್ನು ಬಿಟ್ಟು ಕೃಷಿ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲೂ ತಮ್ಮ ಗುರಿಯನ್ನು ಮರೆಯಲಿಲ್ಲ. ತಾವು ಬಯಸಿದ್ದು ಯಾವುದೂ ಬದುಕಿನಲ್ಲಿ ಸಿಗಲೇ ಇಲ್ಲ ಎನ್ನುವ ಶಿವನ್ ಕಣ್ಣಲ್ಲಿ ನಿರಾಶೆಯಿಲ್ಲ. ಆದರೆ ಸಿಕ್ಕಿದ್ದನ್ನೇ ಇಷ್ಟಪಟ್ಟು, ಪಡೆದ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ, 'ದೇಶ ಮೊದಲು' ಎಂಬ ತತ್ತ್ವವನ್ನೇ ಎಂದಿಗೂ ಪಾಲಿಸುತ್ತ ಬಂದಿರುವ ಶಿವನ್ 'ಇಸ್ರೋ'ದ ಹೆಮ್ಮೆಯ ಅಧ್ಯಕ್ಷರು.

ಚಂದ್ರನ ಮೇಲಿಳಿಯಲು ಇಷ್ಟು ಸಾಹಸವೇಕೆ? ಅಲ್ಲಿ ಏನಿದೆ ಗೊತ್ತೇ?ಚಂದ್ರನ ಮೇಲಿಳಿಯಲು ಇಷ್ಟು ಸಾಹಸವೇಕೆ? ಅಲ್ಲಿ ಏನಿದೆ ಗೊತ್ತೇ?

ಮೋದಿಯನ್ನು ತಬ್ಬಿ ಕಣ್ಣೀರಿಟ್ಟಿದ್ದ ಶಿವನ್

ಮೋದಿಯನ್ನು ತಬ್ಬಿ ಕಣ್ಣೀರಿಟ್ಟಿದ್ದ ಶಿವನ್

ಚಂದ್ರಯಾನ ಲ್ಯಾಂಡ್ ಆಗುವುದನ್ನು ನೋಡಲು ಬೆಂಗಳೂರಿನ ಇಸ್ರೋ ಕಂಟ್ರೋಲ್ ಸೆಂಟರ್ ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಬೀಳ್ಕೊಡುವ ಸಮಯದಲ್ಲಿ ಭಾವುಕರಾದ ಶಿವನ್ ಕಣ್ಣೀರಿಟ್ಟಿದ್ದರು. ನಂತರ ಶಿವನ್ ಅವರನ್ನು ತಬ್ಬಿ, ಮೋದಿ ಸಂತೈಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿಕ್ರಂ ಸಂಪರ್ಕಕ್ಕೆ ಎಡಬಿಡದೆ ಪ್ರಯತ್ನ

ವಿಕ್ರಂ ಸಂಪರ್ಕಕ್ಕೆ ಎಡಬಿಡದೆ ಪ್ರಯತ್ನ

ಚಂದ್ರಯಾನ 2 ನೌಕೆ ಹೊತ್ತುಸಾಗಿದ್ದ ವಿಕ್ರಂ ಲ್ಯಾಂಡರ್ ಸೆಪ್ಟೆಂಬರ್ 7 ರಂದು ಆರ್ಬಿಟರ್ ನಿಂದ ಬೇರೆಯಾಗಿ ಚಂದ್ರನ ಮೇಲೆ ಇಳಿಯಲು ಹೊರಟಿತ್ತು. ಚಂದ್ರನ ಮೇಲ್ಮೈ ತಲುಪಲು ಇನ್ನು 2.1 ಕಿ.ಮೀ. ಬಾಕಿ ಇದ್ದಾಗ ಲ್ಯಾಂಡರ್, ಆರ್ಬಿಟರ್ ನೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ಆದರೆ ಚಂದ್ರನ ಮೇಲೆ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಚಿತ್ರವನ್ನು ಆರ್ಬಿಟರ್ ಇಸ್ರೋಕ್ಕೆ ಕಳಿಸಿತ್ತು. ಲ್ಯಾಂಡರ್ ಇನ್ನು 12 ದಿನ ಕಾರ್ಯ ನಿರ್ವಹಿಸಲಿದ್ದು, ಅಷ್ಟರೊಳಗೆ ಸಂಪರ್ಕ ಸಾಧಿಸಲು ಇಸ್ರೋ ಪ್ರಯತ್ನಿಸುತ್ತಿದೆ.

ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಾ? ಜ್ಯೋತಿಷಿ, ವಿಜ್ಞಾನಿಗಳು ಏನಂತಾರೆ?ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಾ? ಜ್ಯೋತಿಷಿ, ವಿಜ್ಞಾನಿಗಳು ಏನಂತಾರೆ?

English summary
'First of all I am an Indian' ISRO Chairman K Shivan's reaction to an interviewer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X