ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕ್ ಇನ್ ಇಂಡಿಯಾ ಕೂಸಾಗಿರುವ ಈ ರೈಲಿನಲ್ಲಿ ಏನೇನುಂಟು ಗೊತ್ತಾ?

By ಅನಿಲ್ ಆಚಾರ್
|
Google Oneindia Kannada News

Recommended Video

ಮೇಕ್ ಇನ್ ಇಂಡಿಯಾ ಕೂಸಾದ ಈ ರೈಲಿನಲ್ಲಿ ಏನೆಲ್ಲಾ ಇದೆ? | Oneindia Kannada

ಚೆನ್ನೈ, ಅಕ್ಟೋಬರ್ 23: ಬುಲೆಟ್ ರೈಲಿನಂತೆ ಕಾಣುವ ಇದನ್ನು ಸಂಪೂರ್ಣವಾಗಿ ರೂಪಿಸಿರುವುದು, ರಚನೆ ಹಾಗೂ ನಿರ್ಮಾಣ ಮಾಡಿರುವುದು ಭಾರತದಲ್ಲೇ. ಇದನ್ನು ಇನ್ನೊಂದು ವಾರದಲ್ಲಿ ಪರೀಕ್ಷಾರ್ಥವಾಗಿ ಪ್ರಯೋಗ ಮಾಡಲಾಗುತ್ತದೆ. 100 ಕೋಟಿ ವೆಚ್ಚದಲ್ಲಿ ಈ ರೈಲು ನಿರ್ಮಾಣ ಮಾಡಲಾಗಿದೆ. ಇದಕ್ಕೆ ಟ್ರೇನ್ -18 ಎಂದು ಹೆಸರಿಸಲಾಗಿದೆ.

ಇದೇ ರೀತಿಯಲ್ಲಿ ಮತ್ತೊಂದು ಮಾರ್ಚ್ ಹೊತ್ತಿಗೆ ಸಿದ್ಧವಾಗಲಿದೆ. ಹೆಚ್ಚು ಸಂಖ್ಯೆಯಲ್ಲಿ ನಿರ್ಮಾಣ ಮಾಡಿದಷ್ಟೂ ವೆಚ್ಚ ಕಡಿಮೆ ಆಗುತ್ತದೆ. ಒಂದು ದಿನದಲ್ಲಿ ಸಂಚರಿಸಬಹುದಾದ ಮಾರ್ಗಗಳಲ್ಲಿ ಇದು ಸಂಚಾರ ಮಾಡುತ್ತದೆ. ಅಂದರೆ ದೆಹಲಿ-ಭೋಪಾಲ್, ಚೆನ್ನೈ-ಬೆಂಗಳೂರು, ಮುಂಬೈ-ಅಹಮದಾಬಾದ್ ಮಧ್ಯೆ ಈ ರೈಲು ಸಂಚರಿಸುತ್ತದೆ.

ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಈ ರೈಲಿನಲ್ಲಿ ಹದಿನಾರು ಬೋಗಿಗಳಿರುತ್ತದೆ. ಜತೆಗೆ ಅತ್ಯಾಧುನಿಕ ಸೌಕರ್ಯಗಳಿರುತ್ತವೆ. ಪ್ರಯಾಣದ ಅವಧಿ ಶೇಕಡಾ 10ರಿಂದ 15ರಷ್ಟು ಕಡಿಮೆ ಆಗುತ್ತದೆ. ಈಗಿರುವ ರೈಲುಗಳಿಗೆ ಅಂದರೆ ಸಾಂಪ್ರದಾಯಿಕ ರೈಲುಗಳಿಗಿಂತ ಶೇಕಡಾ 50ರಷ್ಟು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಸ್ಮಾರ್ಟ್ ಬ್ರೇಕಿಂಗ್ ಸಿಸ್ಟಮ್ ಇದ್ದು, ಇದನ್ನು ಹಂಗೇರಿ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ.

ಮೇಕ್ ಇನ್ ಇಂಡಿಯಾ ಕೂಸು ಇದು

ಮೇಕ್ ಇನ್ ಇಂಡಿಯಾ ಕೂಸು ಇದು

ಭಾರತದಲ್ಲೇ ರೂಪುಗೊಂಡ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಕೂಸು ಇದು. ಇದನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿ ಪಡಿಸಲಾಗಿದೆ. ವಿದೇಶದಿಂದ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುವ ವೆಚ್ಚವನ್ನು ನಾವು ಉಳಿಸಿದ್ದೇವೆ ಎನ್ನುತ್ತಾರೆ ಸಂಬಂಧಪಟ್ಟ ಅಧಿಕಾರಿಗಳು. ಇದೇ ಥರದ ರೈಲನ್ನು ಆಮದು ಮಾಡಿಕೊಳ್ಳಬೇಕು ಅಂದರೆ 170 ಕೋಟಿ ವೆಚ್ಚ ಆಗುತ್ತದೆ ಎಂದು ಹೇಳಿದ್ದಾರೆ.

ಸೀಟುಗಳು 360 ಡಿಗ್ರಿಗೆ ತಿರುಗಬಲ್ಲವು

ಸೀಟುಗಳು 360 ಡಿಗ್ರಿಗೆ ತಿರುಗಬಲ್ಲವು

ಈಗಾಗಲೇ ಇರುವ ಭಾರತದ ಖಾಸಗಿ ಕಂಪನಿಗಳೇ ಇದರ ನಿರ್ಮಾಣಕ್ಕೆ 36 ತಿಂಗಳು ಸಮಯ ತೆಗೆದುಕೊಳ್ಳುತ್ತಿದ್ದವು. ಆದರೆ ಇದನ್ನು ಹದಿನೆಂಟು ತಿಂಗಳಲ್ಲಿ ನಿರ್ಮಿಸಲಾಗಿದೆ. ರೈಲಿನ ಮಧ್ಯದಲ್ಲಿ ಎರಡು ಎಕ್ಸ್ ಕ್ಯೂಟಿವ್ ತರಗತಿಯ ಬೋಗಿಗಳಿದ್ದು, ಅದರ ಸೀಟುಗಳು 360 ಡಿಗ್ರಿಗೆ ತಿರುಗಬಲ್ಲವು. ಸುತ್ತಲಿನ ಪ್ರಾಕೃತಿಕ ಸೌಂದರ್ಯ ಸವಿಯಲು ಇಂಥ ವ್ಯವಸ್ಥೆ ಮಾಡಲಾಗಿದೆ. ಈ ಸೀಟುಗಳನ್ನು ಸ್ಪೇನ್ ನಿಂದ ತರಿಸಲಾಗಿದೆ. ಬ್ರೇಕಿಂಗ್ ಸಿಸ್ಟಮ್, ಟ್ರಾನ್ಸ್ ಫಾರ್ಮರ್ಸ್ ಹಾಗೂ ಈ ಸೀಟುಗಳು ಮಾತ್ರ ಆಮದು ಮಾಡಿಕೊಳ್ಳಲಾಗಿದೆ.

ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು

ವೇಗದ ಪರೀಕ್ಷೆ ನವೆಂಬರ್ ನಲ್ಲಿ ನಡೆಸಲಾಗುವುದು

ರೈಲು ಚಾಲಕರು ಕೂರುವ ಸ್ಥಳದ ಬಾಗಿಲನ್ನು ತಟ್ಟಿ, ಅಲ್ಲಿನ ಪ್ಯಾನಲ್ ಹೇಗಿದೆ ಎಂದು ಪ್ರಯಾಣಿಕರು ನೋಡಬಹುದಾದ ಅವಕಾಶ ಇದೆ. ಈ ರೈಲಿನ ವೇಗದ ಪರೀಕ್ಷೆಯನ್ನು ಮೊರಾದಾಬಾದ್-ಬರೇಲಿ ಹಾಗೂ ಕೋಟಾ-ಸವಾಯ್ ಮಧೋಪುರ್ ಮಧ್ಯೆ ಮುಂದಿನ ತಿಂಗಳು ಅಂದರೆ ನವೆಂಬರ್ ನಲ್ಲಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನಲ್ಲಿ ಏನೇನಿರಲಿದೆ?

ರೈಲಿನಲ್ಲಿ ಏನೇನಿರಲಿದೆ?

16 ಏಸಿ ಬೋಗಿಗಳು, 2 ಎಕ್ಸ್ ಕ್ಯುಟಿವ್ ಬೋಗಿಗಳಿವೆ. ಡೈವಿಂಗ್ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್ ಬೋಗಿಯಲ್ಲಿ 78 ಸೀಟುಗಳಿವೆ. ಎಕ್ಸ್ ಕ್ಯುಟಿವ್ ಛೇರ್ ಕಾರ್ ನಲ್ಲಿ 52 ಸೀಟುಗಳಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಪರೀಕ್ಷಾರ್ಥವಾಗಿ 160 ಕಿ.ಮೀ. ಪ್ರಯತ್ನಿಸಲಾಗುತ್ತದೆ. ಶತಾಬ್ದಿ ಅಥವಾ ರಾಜಧಾನಿ ಎಕ್ಸ್ ಪ್ರೆಸ್ ಗಿಂತ ಇದರ ವೇಗ ಶೇಕಡಾ 10ರಿಂದ 15ರಷ್ಟು ಹೆಚ್ಚು. ಅಂದಹಾಗೆ ಈ ರೈಲು ಲೋಕೋಮೋಟಿವ್ ಅಲ್ಲ ಎಂಬುದು ಗಮನಿಸಬೇಕಾದ ಅಂಶ. ಯಂತ್ರಗಳ ಸಹಾಯದಿಂದ ಚಲಿಸುತ್ತದೆ.

ಮೋದಿಯ ಬುಲೆಟ್‌ ಟ್ರೇನ್‌ಗೆ ಕೆಂಪು ಬಾವುಟ ತೋರಿಸಿದ ರೈತರುಮೋದಿಯ ಬುಲೆಟ್‌ ಟ್ರೇನ್‌ಗೆ ಕೆಂಪು ಬಾವುಟ ತೋರಿಸಿದ ರೈತರು

ಆರು ಸಿಸಿಟಿವಿ ಕ್ಯಾಮೆರಾ ಇರಲಿದೆ

ಆರು ಸಿಸಿಟಿವಿ ಕ್ಯಾಮೆರಾ ಇರಲಿದೆ

ಪ್ರತಿ ಬೋಗಿಯಲ್ಲೂ 6 ಸಿಸಿಟಿವಿ ಕ್ಯಾಮೆರಾ ಇರುತ್ತವೆ. ಡ್ರೈವರ್ ಬೋಗಿಯಿಂದ ಆಚೆಗೆ ಒಂದು ಸಿಸಿಟಿವಿ ಇದ್ದು, ಪ್ರಯಾಣಿಕರನ್ನು ಅದರ ಮೂಲಕ ನಿಗಾ ಮಾಡಬಹುದು. 360 ಡಿಗ್ರಿ ತಿರುಗುವ ಸೀಟುಗಳನ್ನು ಸ್ಪೇನ್ ನಿಂದ ಆಮದು ಮಾಡಿಕೊಳ್ಳಲಾಗಿದೆ. ಚಾಲಕರಿಗೆ ಟಾಕ್ ಬ್ಯಾಕ್ ವ್ಯವಸ್ಥೆಯಿದೆ. ಪ್ರತಿ ಕೋಚ್ ನಲ್ಲಿ ತುರ್ತು ಸ್ವಿಚ್ ಇದೆ. ಅಂಗವಿಕಲರಿಗಾಗಿ 2 ಶೌಚಾಲಯ ಮತ್ತು ಮಕ್ಕಳ ನಿಗಾಕ್ಕೆ ಪ್ರತ್ಯೇಕ ಸ್ಥಳವಿದೆ. ಆಹಾರ ವಸ್ತುಗಳನ್ನು ಇಡಲು ವಿಶೇಷ ವ್ಯವಸ್ಥೆ ಇರುತ್ತದೆ.

ಆನೆಗಳ ಸಾವಿಗೆ ಅಂಕುಶ: ರೈಲ್ವೆ ಇಲಾಖೆಯ 'ದುಂಬಿ ಯೋಜನೆ' ಯಶಸ್ವಿಆನೆಗಳ ಸಾವಿಗೆ ಅಂಕುಶ: ರೈಲ್ವೆ ಇಲಾಖೆಯ 'ದುಂಬಿ ಯೋಜನೆ' ಯಶಸ್ವಿ

English summary
The first train set conceptualised, designed and manufactured completely in India, which looks like a bullet train, will be released for trial in a week’s time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X