ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಯಾಸ್‌ಕಟರ್ ಬಳಸಿ ಕಳ್ಳತನಕ್ಕೆ ಯತ್ನ; ಹೊತ್ತಿ ಉರಿದ ಎಟಿಎಂ

|
Google Oneindia Kannada News

ಕೊಯಮತ್ತೂರು, ಫೆಬ್ರವರಿ 19: ಗ್ಯಾಸ್‌ ಕಟ್ಟರ್ ಬಳಸಿ ಕಳ್ಳತನ ಮಾಡುವಾಗ ಇಡೀ ಎಟಿಎಂಗೆ ಬೆಂಕಿ ಹೊತ್ತಿಕೊಂಡು ನಾಶವಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಕೊಯಮತ್ತೂರಿನಿಂದ 60 ಕಿ.ಮೀ ದೂರದಲ್ಲಿನ ಪೊಲ್ಲಾಚಿಯಲ್ಲಿ ಈ ಘಟನೆ ನಡೆದಿದೆ. ಬೆಂಕಿಯಿಂದ ಇಡೀ ಎಟಿಎಂ ನಾಶವಾಗಿದೆ.

ಜ್ಯೋತಿ ಉದಯ್ ಮೇಲೆ ಹಲ್ಲೆ ಪ್ರಕರಣ: ಕಿರಾತಕ ಮಧುಕರ್ ಗೆ 12 ವರ್ಷ ಜೈಲು ಶಿಕ್ಷೆ ಜ್ಯೋತಿ ಉದಯ್ ಮೇಲೆ ಹಲ್ಲೆ ಪ್ರಕರಣ: ಕಿರಾತಕ ಮಧುಕರ್ ಗೆ 12 ವರ್ಷ ಜೈಲು ಶಿಕ್ಷೆ

ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಎಟಿಎಂಗೆ ಶುಕ್ರವಾರ ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ನುಗ್ಗಿದ್ದಾರೆ. ಆತ ಗ್ಯಾಸ್ ಕಟರ್‌ನಿಂದ ಎಟಿಎಂ ಮೆಷಿನ್ ಕೊರೆಯುವಾಗ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಕಳ್ಳ ಹೊರಗೆ ಓಡಿಬಂದು ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Fire Burst Out In ATM While Thief Tries To Open With Gas Cutter

ಬ್ಯಾಂಕ್ ಸಿಬ್ಬಂದಿ ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದು, ಬೆಳಗ್ಗಿನ ಜಾವ 4 ಗಂಟೆ ಸಮಯದಲ್ಲಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆರೋಪಿ ಸೆರೆಗೆ ವಿಶೇಷ ತಂಡ ರಚಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಪತ್ತೆಗೆ ಮುಂದಾಗಿದ್ದು, ಬೆಂಕಿಯಲ್ಲಿ ಎಷ್ಟು ಹಣ ನಾಶವಾಗಿದೆ ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

English summary
An atm near Pollachi in coimbatore destroyed in a fire that broke out while a thief trying to open it with a gas cutter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X