• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಸ್ಕ್ ಧರಿಸದಿದ್ದಕ್ಕೆ ಎಫ್ಐಆರ್, ಕಂಗಾಲಾದ ವ್ಯಕ್ತಿಗೆ ಕೋರ್ಟ್ ನೆಮ್ಮದಿ

|

ಚೆನ್ನೈ, ಮೇ 9: ದೇಶದೆಲ್ಲೆಡೆ ಕೋವಿಡ್ 19 ಮಾರ್ಗಸೂಚಿಗಳು ಕೆಲವೊಮ್ಮೆ ಸಾರ್ವಜನಿಕರಿಗೆ ಭಾರಿ ತೊಂದರೆ ಉಂಟು ಮಾಡಿದ ಪ್ರಸಂಗಗಳು ನಡೆದಿವೆ. ಕೋವಿಡ್‌ ಮಾರ್ಗಸೂಚಿ ಅನ್ವಯ ಫೇಸ್ ಮಾಸ್ಕ್ ಧರಿಸದ ಕಾರಣಕ್ಕೆ ಎಫ್‌ಐಆರ್‌ ದಾಖಲಾಗಿಸಲಾಗಿತ್ತು. ಇದರಿಂದ ಆ ವ್ಯಕ್ತಿಗೆ ಪಾಸ್‌ಪೋರ್ಟ್‌ ಪಡೆಯಲಾಗಿರಲಿಲ್ಲ. ಕೊನೆಗೆ ಆ ವ್ಯಕ್ತಿಗೆ ಮದ್ರಾಸ್‌ ಹೈಕೋರ್ಟ್‌ ಧಾವಿಸಿದೆ. ತಕ್ಷಣವೇ ಪಾಸ್‌ಪೋರ್ಟ್‌ ಒದಗಿಸುವಂತೆ ಅದು ಮಧುರೈನ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಈ ಪ್ರಕರಣದಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ ಅನ್ನು ಕ್ರಿಮಿನಲ್‌ ಮೊಕದ್ದಮೆ ಎಂದು ಪರಿಗಣಿಸದಂತೆ ಪೊಲೀಸರಿಗೆ ಸೂಚಿಸಿದೆ. ಇತರೆ ಎಲ್ಲಾ ನಿಯಮಗಳು ಸೂಕ್ತವಾಗಿದ್ದರೆ, ಅರ್ಜಿದಾರರಿಗೆ ಪಾಸ್‌ಪೋರ್ಟ್‌ ನೀಡುವಂತೆ ಅದು ಸಂಬಂಧಪಟ್ಟ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.

ಅರ್ಜಿದಾರ‌ ವಿ ನಾಗಲಿಂಗಂ ಅವರು 2021ರ ಮಾರ್ಚ್ 29 ರಂದು ಪಾಸ್‌ಪೋರ್ಟ್‌ಗಾಗಿ ಮನವಿ ಸಲ್ಲಿಸಿದ್ದರು. ಆದರೆ ಮಧುರೈ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ತಮ್ಮ ವಿರುದ್ಧ ಎಫ್‌ಐಆರ್‌ ಬಾಕಿ ಇರುವುದಾಗಿ ಸೂಚಿಸಿ ಕ್ರಿಮಿನಲ್‌ ಪ್ರಕರಣದ ಬಾಕಿ ಇರುವ ಬಗ್ಗೆ ಏಕೆ ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರನ್ನು ಪ್ರಶ್ನಿಸಿತ್ತು. ಇದಕ್ಕೆ ಅರ್ಜಿದಾರರು ಸೂಕ್ತ ಉತ್ತರ ನೀಡಿದ್ದರೂ ಕಚೇರಿ ಸ್ಪಂದಿಸಿರಲಿಲ್ಲ. ಹೀಗಾಗಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

"ರೋಗ ವ್ಯಾಪಿಸಿರುವಾಗ ದ್ವಿಚಕ್ರ ವಾಹನದಲ್ಲಿ ಪಯಣಿಸುತ್ತಿದ್ದ ವೇಳೆ ಮುಖಗವಸು ಧರಿಸಿಲ್ಲ ಎಂಬ ಕಾರಣಕ್ಕೆ ಮಾತ್ರ ಅರ್ಜಿದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ಆದರೆ ಎಫ್‌ಐಆರ್‌ ಖುದ್ದು ಅಂತಿಮ ವರದಿಯಾಗಿ ಬದಲಾಗದ ಹೊರತು ಅದನ್ನು ಕ್ರಿಮಿನಲ್‌ ಮೊಕದ್ದಮೆ ಎಂದು ಭಾವಿಸಲಾಗದು" ಎಂಬುದಾಗಿ ನ್ಯಾಯಮೂರ್ತಿ ಎನ್‌ ಆನಂದ್‌ ವೆಂಕಟೇಶ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

English summary
The Madras High Court recently came to the aid of a man who was facing issues in obtaining a passport on account of a pending FIR registered against him for allegedly failing to wear a face mask during the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X