ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿಗೆ ಪುರಾತನ ಹಲ್ವಾ ಅಂಗಡಿ ಮಾಲೀಕ ಬಲಿ!

|
Google Oneindia Kannada News

ತಿರುನಲ್ವೇಲಿ, ಜೂನ್ 25: ತಮಿಳುನಾಡಿನ ನೂರು ವರ್ಷಕ್ಕೂ ಹಳೆಯ, ಅತ್ಯಂತ ಜನಪ್ರಿಯ ಹಲ್ವಾ ಅಂಗಡಿ ಮಾಲೀಕ ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಇರುಟ್ಟು ಕಡೈ ಹಲ್ವಾ ಅಂಗಡಿ ಮಾಲೀಕ ಸೋಂಕು ಉಲ್ಬಣವಾಗಿ ಮೃತಪಟ್ಟಿಲ್ಲ ಬದಲಿಗೆ ಕೊರೊನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

ಚಿಕಿತ್ಸೆ ಗಾಗಿ ಆಸ್ಪತ್ರೆಗೆ 80 ವರ್ಷ ವಯಸ್ಸಿನ ಹರಿ ಸಿಂಗ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹರಿಸಿಂಗ್ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೊವಿಡ್ 19 ಪಾಸಿಟಿವ್ ಇರುವುದು ಪತ್ತೆಯಾಗಿತ್ತು, ಬಹುಶಃ ಸೋಂಕಿನ ಭೀತಿಗೆ ಸಿಲುಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು; ಒಂದೇ ದಿನ 3,509 ಹೊಸ ಕೋವಿಡ್ ಪ್ರಕರಣ!ತಮಿಳುನಾಡು; ಒಂದೇ ದಿನ 3,509 ಹೊಸ ಕೋವಿಡ್ ಪ್ರಕರಣ!

ರಾಜಸ್ಥಾನ ಮೂಲದ ಹರಿಸಿಂಗ್ ಅವರು ತಮಿಳುನಾಡಿಗೆ ವಲಸೆ ಬಂದು ಅಂಗಡಿ ಸ್ಥಾಪಿಸಿ ಜನಪ್ರಿಯತೆ ಗಳಿಸಿದರು. ಸದ್ಯ ಹರಿಸಿಂಗ್ ಅವರ ಕುಟುಂಬಸ್ಥರು ಕ್ವಾರಂಟೈನ್ ನಲ್ಲಿದ್ದಾರೆ.

Famous TN halwa store owner found dead in hospital

ತಿರುನಲ್ವೇಲಿಯ ನೆಲ್ಲೈಪ್ಪರ್ ದೇಗುಲದ ಬಳಿ ಇರುಟ್ಟು ಕಡೈ ಎಂಬ ಸಿಹಿ ಅಂಗಡಿ ತೆರೆದ ಹರಿಸಿಂಗ್ ಅವರು ಸಂಜೆಯಿಂದ ರಾತ್ರಿ ತನಕ ಮಾತ್ರ ಜೀರೋ ಕ್ಯಾಂಡಲ್ ಬಲ್ಬ್ ಅಡಿಯಲ್ಲಿ ಈ ಅಂಗಡಿ ಓಪನ್ ಮಾಡಿರುತ್ತಿದ್ದರು. ದಿನದಿಂದ ದಿನಕ್ಕೆ ಹಲ್ವಾ ರುಚಿ ಊರಿಂದ ಊರಿಗೆ ಹಬ್ಬಿ, ವಿದೇಶಿಗಳಿಗೂ ಹಬ್ಬಿದೆ.

English summary
The owner of the famous century-old 'Iruttu kadai halwa' store here, a well-known name in Tamil Nadu among sweet lovers, was found hanging at a hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X