ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ 'ಗೋಬ್ಯಾಕ್ ಮೋದಿ' ಟ್ರೆಂಡ್ ಗೆ ಕ್ಯಾರೇ ಅನ್ನದ ಚೆನ್ನೈ

|
Google Oneindia Kannada News

ಚೆನ್ನೈ, ಫೆ 15: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡುವಾಗ 'ಗೋಬ್ಯಾಕ್' ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುವುದು ವಾಡಿಕೆಯಂತಾಗಿದೆ.

ಕಳೆದ ಭಾನುವಾರ (ಫೆ 14) ಮೋದಿ ದಕ್ಷಿಣದ ಎರಡು ರಾಜ್ಯಗಳಿಗೆ ಭೇಟಿ ನೀಡಿದ್ದರು. ಒಂದು ದಿನದ ಹಿಂದೆಯೇ #GoBackModi #GoBackCowardModi ಈ ಹ್ಯಾಷ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದವು.

Go Back Modi: ಪ್ರಧಾನಿ ಮೋದಿ ಭೇಟಿಗೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧGo Back Modi: ಪ್ರಧಾನಿ ಮೋದಿ ಭೇಟಿಗೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ

ಬೆಲೆ ಏರಿಕೆ, ರೈತರ ಹೋರಾಟ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ಟ್ವಿಟ್ಟಿಗರು ತರಹೇವಾರಿ ಕಾಮೆಂಟುಗಳನ್ನು ಈ ಟ್ಯಾಗ್ ಮೂಲಕ ಪೋಸ್ಟ್ ಮಾಡಿದ್ದರು. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಕಾಮೆಂಟುಗಳು ಈ ಟ್ಯಾಗಿಗೆ ಬಂದು ಬಿದ್ದಿದ್ದವು.

ಆದರೆ, ಪ್ರಧಾನಿ ಮೋದಿಗೆ ಚೆನ್ನೈನಲ್ಲಿ ಸಿಕ್ಕ ಅಭೂತಪೂರ್ವ ಸ್ವಾಗತ ಈ ಎಲ್ಲಾ ಟ್ರೆಂಡಿಂಗ್ ಟ್ಯಾಗ್ ಗಳನ್ನು ಮರೆಸುವಂತಿತ್ತು. #ModiInTamilnadu, #MODIinTN, #ModiInChennai ಟ್ಯಾಗ್ ಗಳು ಟ್ರೆಂಡಿಂಗ್ ಆಗಲು ಆರಂಭವಾಯಿತು.

ತಮಿಳುನಾಡಿನಲ್ಲಿ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ತಮಿಳುನಾಡಿನಲ್ಲಿ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಇಕ್ಕೆಲಗಳಲ್ಲಿ ಜನರು ಮೋದಿಗೆ ಕಾಯುತ್ತಿದ್ದರು

ಇಕ್ಕೆಲಗಳಲ್ಲಿ ಜನರು ಮೋದಿಗೆ ಕಾಯುತ್ತಿದ್ದರು

ಹೆಲಿಪ್ಯಾಡ್ ನಿಂದ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವ ರಸ್ತೆಯ ಇಕ್ಕೆಲಗಳಲ್ಲಿ ಜನರು ಪ್ರಧಾನಿ ಮೋದಿಗೆ ಕಾಯುತ್ತಿದ್ದರು. ಇಷ್ಟೇ ಅಲ್ಲದೇ, ವಾದ್ಯ,ಚೆಂಡೆ, ವೇಷ, ಭಿತ್ತಿಪತ್ರ, ಬ್ಯಾನರ್ ಗಳ ಮೂಲಕ ಪ್ರಧಾನಿಯನ್ನು ಸ್ವಾಗತಿಸಲಾಯಿತು. ಇನ್ನು ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಕಿಕ್ಕಿರಿದು ಜನ ಸೇರಿದ್ದರು.

ಭಾಷಣದುದ್ದಕ್ಕೂ ತಮಿಳು ಪದ

ಭಾಷಣದುದ್ದಕ್ಕೂ ತಮಿಳು ಪದ

ತಮಿಳರ ಪಲ್ಸ್ ಗೆ ತಕ್ಕಂತೇ ಮತ್ತು ಚುನಾವಣೆಯೂ ಎದುರಾಗುತ್ತಿರುವುದರಿಂದ ಪ್ರಧಾನಿ ಮೋದಿ ಆರಂಭದಲ್ಲಿ ತಮಿಳು ಭಾಷೆಯಲ್ಲಿ ಮಾತನಾಡುವ ಮೂಲಕ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡರು. ಭಾಷಣದುದ್ದಕ್ಕೂ ತಮಿಳು ಪದಗಳನ್ನು ಯಾವುದೇ ಲಿಖಿತ ಪೇಪರ್ ಅನ್ನು ಬಳಸದಯೇ ಉಲ್ಲೇಖಿಸಿದ್ದು ವಿಶೇಷವಾಗಿತ್ತು.

ಸಿಎಂ ಪಳನಿಸ್ವಾಮಿ ಮತ್ತು ಡಿಸಿಎಂ ಪನ್ನೀರ್ ಸೆಲ್ವಂ

ಸಿಎಂ ಪಳನಿಸ್ವಾಮಿ ಮತ್ತು ಡಿಸಿಎಂ ಪನ್ನೀರ್ ಸೆಲ್ವಂ

ವೇದಿಕೆಯಲ್ಲಿ ತಮ್ಮ ಅಕ್ಕಪಕ್ಕ ತಮಿಳುನಾಡು ಸಿಎಂ ಪಳನಿಸ್ವಾಮಿ ಮತ್ತು ಡಿಸಿಎಂ ಪನ್ನೀರ್ ಸೆಲ್ವಂ ಅವರನ್ನು ಕೂರಿಸಿಕೊಂಡು ನಗುನಗುತ್ತಲೇ ಮೋದಿ ಸಂಭಾಷಣೆ ಮಾಡಿಕೊಂಡಿದ್ದರು. ಇದು, ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿಯ ಮೈತ್ರಿ ಮುಂದುವರಿಯಲಿದೆ ಎನ್ನುವುದರ ಸಂಕೇತದಂತಿತ್ತು.

ಆದಿಪರಾಶಕ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಂಗಾರು ಅಡಿಗಳ್

ಆದಿಪರಾಶಕ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಂಗಾರು ಅಡಿಗಳ್

ತಮಿಳುನಾಡಿನಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ಅಲ್ಲಿನ ರೈತರನ್ನು ಮತ್ತು ನೀರನ್ನು ವ್ಯವಸ್ಥಿತವಾಗಿ ಬಳಸುವುದನ್ನೂ ಹಾಡಿಹೊಗಳಿದ್ದಾರೆ. ಇದರ ಜೊತೆಗೆ, ಚೆನ್ನೈ ನಗರದಲ್ಲಿರುವ ಆದಿಪರಾಶಕ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಗುರುಗಳಾದ ಬಂಗಾರು ಅಡಿಗಳ್ ಅವರನ್ನೂ ಮೋದಿ ಭೇಟಿಯಾಗಿದ್ದರು.

English summary
Even After Go Back Modi Hashtag Trending In Twitter, PM Gets Very Warm Welcome In Tamilnadu,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X