ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ತಮಾಷೆಯಲ್ಲ, ರಜನಿ ಬಲಗೈ ತೋರು ಬೆರಳಿಗೆ ಶಾಯಿ!

|
Google Oneindia Kannada News

ಚೆನ್ನೈ, ಏಪ್ರಿಲ್ 19: ಚುನಾವಣೆ ಸಂದರ್ಭದಲ್ಲಿ ರಜನಿಕಾಂತ್ ಏನು ಮಾಡಿದ್ರು, ಏನು ಹೇಳಿದ್ರು ಟ್ರೆಂಡ್ ಆಗುವುದು ಸಹಜ. ಈ ಹಿಂದೆ ವೋಟ್ ಮಾಡುವ ವಿಡಿಯೋ ಟ್ರೆಂಡ್ ಆಗಿತ್ತು. ಪಕ್ಷವೊಂದರ ಪರ ರಜನಿ ಟ್ವೀಟ್ ಮಾಡಿದ್ದು ಚರ್ಚೆಯಾಗಿತ್ತು. ಈ ಬಾರಿ ರಜನಿ ಮತ ಹಾಕಲು ಹೋದಾಗ ಆದ ಪ್ರಮಾದವು ಟ್ರೆಂಡ್ ಆಗಿದೆ.

ಲೋಕಸಭೆ ಚುನಾವಣೆಯ ಮತದಾನದ ವೇಳೆ ಚುನಾವಣಾ ಸಿಬ್ಬಂದಿಯೊಬ್ಬರು ಸೂಪರ್​ಸ್ಟಾರ್​ ರಜನಿಕಾಂತ್ ​ಅವರ ಬಲಗೈ ತೋರು ಬೆರಳಿಗೆ ಶಾಯಿ ಹಾಕಿದ್ದಾರೆ. ಸ್ಟೆಲ್ಲಾ ಮೇರಿಸ್ ಕಾಲೇಜಿನ ಮತಗಟ್ಟೆಯಲ್ಲಿ ಗುರುವಾರದಂದು ಈ ಘಟನೆ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣಾ ಆಯೋಗದ ನಿರ್ದೇಶನದಂತೆ ಈ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಶಾಯಿ ಹಾಕಬೇಕಿತ್ತು. ಸಾಲು ಸಾಲು ಚುನಾವಣೆ ಬಂದರೆ, ಉಪ ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಎಡಗೈ ತೋರು ಬೆರಳು ಬಿಟ್ಟು ಬೇರೆ ಬೆರಳಿಗೆ ಇಂಕ್ ಹಾಕಲಾಗುತ್ತದೆ. ಆದರೆ, ಬಲಗೈಗೆ ಇಂಕ್ ಹಾಕಿದ ಪ್ರಸಂಗಗಳು ವಿರಳ.

ತಮಿಳುನಾಡು ವಿಧಾನಸಭೆ ಕದನಕ್ಕೆ ಸೂಪರ್ ಸ್ಟಾರ್ ರಜನಿ ಎಂಟ್ರಿ!ತಮಿಳುನಾಡು ವಿಧಾನಸಭೆ ಕದನಕ್ಕೆ ಸೂಪರ್ ಸ್ಟಾರ್ ರಜನಿ ಎಂಟ್ರಿ!

ಈ ನಡುವೆ ರಜನಿಕಾಂತ್ ಅವರು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ಜೊತೆಗೆ 18 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಏಪ್ರಿಲ್ 18ರಂದು ನಡೆದಿದ್ದು, ಮೇ23ರಂದು ಫಲಿತಾಂಶ ಹೊರಬರಲಿದೆ.

ರಾಜ್ಯ ಚುನಾವಣಾ ಆಯುಕ್ತ ಸತ್ಯಬಾತ್ರ ಸಾಹೋ

ರಾಜ್ಯ ಚುನಾವಣಾ ಆಯುಕ್ತ ಸತ್ಯಬಾತ್ರ ಸಾಹೋ

ಈಗ ರಜನಿಕಾಂತ್​ ಅವರ ಬಲಗೈ ತೋರು ಬೆರಳಿಗೆ ಶಾಯಿ ಹಾಕಲಾಗಿದ್ದರ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ತಮಿಳುನಾಡು ರಾಜ್ಯ ಚುನಾವಣಾ ಆಯುಕ್ತ ಸತ್ಯಬಾತ್ರ ಸಾಹೋ, ಹೌದು ,ತಪ್ಪಾಗಿದೆ, ಚುನಾವಣಾ ಅಧಿಕಾರಿ ಎಡಗೈ ತೋರು ಬೆರಳಿಗೆ ಶಾಯಿ ಹಾಕಬೇಕಾಗಿತ್ತು ಎಂದಿದ್ದಾರೆ.

ಮತಗಟ್ಟೆಯ ಅವಾಂತರಗಳು: ಪೋಲಿಂಗ್ ಆಫೀಸರ್ ಬಿಚ್ಚಿಟ್ಟ ಕಹಿಸತ್ಯ! ಮತಗಟ್ಟೆಯ ಅವಾಂತರಗಳು: ಪೋಲಿಂಗ್ ಆಫೀಸರ್ ಬಿಚ್ಚಿಟ್ಟ ಕಹಿಸತ್ಯ!

ಎಡಗೈ ಬೆರಳಿಗೆ ಶಾಯಿ ಹಾಕಬೇಕು

ಎಡಗೈ ಬೆರಳಿಗೆ ಶಾಯಿ ಹಾಕಬೇಕು

ತೋರು ಬೆರಳಿಗೆ ತೊಂದರೆಯಾಗಿದ್ದಲ್ಲಿ ಎಡಗೈನ ಇತರ ಬೆರಳಿಗೆ ಶಾಯಿ ಹಚ್ಚಬೇಕು. ಬಲಗೈ ತೋರು ಬೆರಳಿಗೆ ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

ತಪ್ಪೆಸಗಿದ ಚುನಾವಣಾ ಸಿಬ್ಬಂದಿ ವಿರುದ್ಧ ಕ್ರಮ

ತಪ್ಪೆಸಗಿದ ಚುನಾವಣಾ ಸಿಬ್ಬಂದಿ ವಿರುದ್ಧ ಕ್ರಮ

ಅಲ್ಲದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ತಪ್ಪೆಸಗಿದ ಚುನಾವಣಾ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಈ ಪ್ರಮಾದ ಎಸಗಿದ ಅಧಿಕಾರಿ ಯಾರು? ಏತಕ್ಕೆ ಈ ತಪ್ಪು ಎಸಗಿದರು ಎಂಬುದರ ಬಗ್ಗೆ ಸಾಹೋ ಅವರು ಪ್ರತಿಕ್ರಿಯಿಸಿಲ್ಲ.

ರಜನಿ ಏನು ಮಾಡಿದರೂ ಟ್ರೆಂಡ್

ರಜನಿ ಏನು ಮಾಡಿದರೂ ಟ್ರೆಂಡ್

2016ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಜನಿಕಾಂತ್​ ಒಂದು ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಉಳಿದಂತೆ ನಟ ಶಿವಕಾರ್ತಿಕೇಯನ್, ಶ್ರೀಕಾಂತ್ ಅವರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದಿದ್ದರೂ ಮತ ಹಾಕಿದ್ದಾರೆ ಎಂಬ ಸುದ್ದಿಯೂ ಇದೆ.

English summary
Lok Sabha Elecions 2019: Actor Rajinikanth's right index finger inked, Chief Electoral officer has sought report. As per the rule, the indelible ink should have ben applied on the voter's left index finger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X