ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ವರ್ಷದ ಎಬೆನೆಜರ್ ಬದುಕುಳಿಯಲು ನಿಮ್ಮ ಸಹಾಯ ಬೇಕು

Google Oneindia Kannada News

ಈ ಜೀವನವೆಂಬುದು ಎಷ್ಟು ವಿಚಿತ್ರ ನೋಡಿ. ಈ ಕ್ಷಣ ಇದ್ದದ್ದು ಮುಂದಿನ ಒಂದೆರಡು ಕ್ಷಣಗಳಲ್ಲಿ ಇರುವುದೇ ಇಲ್ಲ. ಆ ದೇವರು ಹಲವಾರು ಪರೀಕ್ಷೆಗಳನ್ನು ಒಡ್ಡುತ್ತಲೇ ಇರುತ್ತಾನೆ. ಈ ಅಗ್ನಿಪರೀಕ್ಷೆಯನ್ನು ನಾವು ಎದುರಿಸಲೇಬೇಕು. ತನ್ನ ಮಗನನ್ನು ಉಳಿಸಿಕೊಳ್ಳಲು ಇಂಥದೇ ಅಗ್ನಿಪರೀಕ್ಷೆ ಎದುರಿಸುತ್ತಿರುವ ಸ್ಟೀಫನ್ ಅವರ ಸ್ಥಿತಿ ವಿಭಿನ್ನವಾಗಿಲ್ಲ. ತನ್ನ ಮಗ ಸಾವನ್ನು ಗೆದ್ದುಬರಲೇಬೇಕು ಎಂದು ಹೋರಾಟ ನಡೆಸಿದ್ದಾರೆ. ತಾವು ಮಾಡುತ್ತಿರುವ ಹೋರಾಟದ ಬಗ್ಗೆ ಸ್ಟೀಫನ್ ಅವರೇ ಹೇಳಿದ್ದಾರೆ. ಮುಂದೆ ಓದಿರಿ, ನೀವೂ ಆ ಹೋರಾಟದಲ್ಲಿ ಭಾಗಿಯಾಗಿ, ಪುಟ್ಟ ಹುಡುಗ ಬದುಕುಳಿಯಲು ಸಹಾಯ ಮಾಡಿ.

"ನನ್ನ ಮಗ ಎಬೆನೆಜರ್ ಮತ್ತು ನಾನು ನಮ್ಮ ಮನೆಯ ಮುಂದೆ ಫುಟ್‍ಬಾಲ್ ಆಡುತ್ತಿದ್ದೆವು. ಆಗ ಅವನ ನಗು, ಸಂತೋಷ ಎಲ್ಲವೂ ಮನಸ್ಸಿಗೆ ಖುಷಿಯನ್ನು ನೀಡುತ್ತಿತ್ತು. ಆದರೆ ಈಗ ನನ್ನ ಮಗನ ಜೀವನದಲ್ಲಿ ಆ ನಗು ಮತ್ತು ಸಂತೋಷವು ಕಣ್ಮರೆಯಾಗುತ್ತಿದೆ. ಅವನ ಆ ಸಂತೋಷದ ಧ್ವನಿಯನ್ನು ಮತ್ತೆ ಮತ್ತೆ ಕೇಳಲು ಬಯಸುತ್ತೇನೆ. ಅವನೊಂದಿಗೆ ಆಡಲು, ಮಾತನಾಡಲು ನನ್ನ ಮನಸ್ಸು ಹಾಗೂ ಹೃದಯವು ಹಂಬಲಿಸುತ್ತದೆ. ಅವನ ಅನಾರೋಗ್ಯವು ನಮ್ಮ ಜೀವನದ ಖುಷಿಯನ್ನು ಕಸಿದುಕೊಂಡಿದೆ. ನನ್ನ ಮಗ ಪುನಃ ಮೊದಲಿನಂತೆ ಆಗಬೇಕು ಎಂದರೆ ಅವನಿಗೆ ವಿಕಿರಣದ ಚಿಕಿತ್ಸೆ ನಡೆಯಬೇಕಿದೆ. ಅದಕ್ಕೆ 8 ಲಕ್ಷ ರೂಪಾಯಿ ತಗಲುವುದು.

Eight-year-old is suffering from severe brain tumour, help him

ನಾನು ಎಬೆನೆಜರ್ ತಂದೆ ಸ್ಟೀಫನ್ ಇಮ್ಯಾನ್ಯುಯೆಲ್, ಚೆನ್ನೈ ನಿವಾಸಿ. ನನ್ನ ಮಗ ಎಂಟು ವರ್ಷದವನು. ಅವನು ಪಾಂನೈನ್ ಗ್ಲಿಯೋಮಾ ರೋಗದಿಂದ ಬಳಲುತ್ತಿದ್ದಾನೆ. ಈ ರೋಗವನ್ನು ಗುಣಪಡಿಸುವುದು ಅಸಾಧ್ಯ ಎಂದು ಹೇಳಿದ್ದರೂ ಅವನ ಜೀವನ ರಕ್ಷಿಸಲು ವೈದ್ಯರು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ. ನನ್ನ ಮಗ ಆಗಾಗ ತೀವ್ರ ತಲೆನೋವಿನಿಂದ ಬಳಲುತ್ತಿದ್ದ. ಆಗ ಸ್ಥಳೀಯ ವೈದ್ಯರಲ್ಲಿ ಪರೀಕ್ಷಿಸುತ್ತಿದ್ದೆವು. ನಂತರ ಅವರು ರೋಗವನ್ನು ಪತ್ತೆಹಚ್ಚಲು ಇನ್ನೊಂದು ಆಸ್ಪತ್ರೆಗೆ ತೋರಿಸಲು ಉಲ್ಲೇಖಿಸಿದರು.

ಬಳಿಕ ನಾವು ಹಿಂದೂ ಮಿಷನ್ ಆಸ್ಪತ್ರೆ, ಗ್ರೇಸ್ ಮಲ್ಟಿ ಸ್ಪೆಷಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದೆವು. ನಂತರ ಎಸ್‍ಆರ್‍ಎಮ್ ಆಸ್ಪತ್ರೆಯಲ್ಲಿ ತಲೆಯ ಸ್ಕ್ಯಾನ್ ಮಾಡಲಾಯಿತು. ಆಗ ಮೆದುಳಿನಲ್ಲಿ ಒಂದು ಗಡ್ಡೆ ಇರುವುದು ತಿಳಿಯಿತು. ಅದೇ ಸಂದರ್ಭದಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ವಿಕೀರಣ ಚಿಕಿತ್ಸೆಗೆ ಒಳಪಡಿಸಲು ಕರೆದೊಯ್ದೆವು. ಆ ಹೊತ್ತಿಗಾಗಲೇ ಅವನ ಎಡ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಮಾತನಾಡುವುದನ್ನು ನಿಲ್ಲಿಸಿದನು. ಜೊತೆಗೆ ಪ್ರಜ್ಞೆಯನ್ನು ಕಳೆದುಕೊಂಡಿದ್ದನು.

Eight-year-old is suffering from severe brain tumour, help him

ಆ ಸಮಯದಲ್ಲಿ ನಾವು ಬಹಳ ಭಯಭೀತರಾಗಿದ್ದೆವು. ಅವನ ಉಸಿರಾಟವು ಬಹಳ ಕಡಿಮೆಯಾದ್ದರಿಂದ ವೆಂಟಿಲೇಟರ್ ಅಳವಡಿಸಿದರು. ಸ್ವಲ್ಪ ದಿನಗಳ ಬಳಿಕ ಸ್ವಲ್ಪ ಚೇತರಿಕೆ ಕಂಡುಕೊಂಡನು. ಬಳಿಕ 10 ದಿನದ ಒಳಗೆ ಬಿಡುಗಡೆ ಮಾಡಿದರು. ನಂತರ ಅವನು ಕಣ್ಣು ತೆರೆಯದೆ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಹಾಗಾಗಿ ಕಂಚಿ ಕಾಮಕೋಟಿ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಈಗ ವಿಕಿರಣ ಚಿಕಿತ್ಸೆಗೆ ಒಳಪಡಿಸಿದ್ದಾರೆ.

ಮನೆಗೆ ಒಂದು ಮೈಲಿ ದೂರದಲ್ಲಿಯೇ ಆಸ್ಪತ್ರೆಯಿದೆ. ಮಗನ ಆರೈಕೆಗಾಗಿ ಕೆಲಸವನ್ನು ಬಿಟ್ಟಿದ್ದೇನೆ. ಕೆಲಸವಿಲ್ಲದೆ ಮೂರು ತಿಂಗಳಾಗಿದೆ. ನನ್ನ ಹೆಂಡತಿಯು ಗೃಹಿಣಿಯಾದ್ದರಿಂದ ಯಾವುದೇ ಆದಾಯವಿಲ್ಲ. ಈ ಮೊದಲು ಆಟೋ ಮೊಬೈಲ್ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಆದರೆ ಈಗ ಯಾವುದೇ ಆದಾಯ ವಿಲ್ಲದೆ ಮಗನ ಆರೈಕೆ ಹಾಗೂ ಚಿಕಿತ್ಸೆಗಾಗಿ ಪರದಾಡುತ್ತಿದ್ದೇನೆ.

Eight-year-old is suffering from severe brain tumour, help him

ಕಳೆದ ತಿಂಗಳು ಸ್ನೇಹಿತರು ಹಾಗೂ ಬಂಧುಗಳ ಸಹಾಯದಿಂದ 11 ಲಕ್ಷ ರೂಪಾಯಿ ಹಣವನ್ನು ಹೊಂದಿಸಿ ಕೊಟ್ಟಿದ್ದೇವೆ. ಇದೀಗ ಮುಂದಿನ ಚಿಕಿತ್ಸೆಗೆ 8 ಲಕ್ಷ ರೂಪಾಯಿಯ ಅಗತ್ಯವಿದೆ. ಈ ಹಣವನ್ನು ಭರಿಸಲು ನನ್ನಿಂದ ಕಷ್ಟವಾಗುತ್ತಿದೆ. ನನಗೆ ಸಹಾಯ ಮಾಡಲು ಉಳಿದಿದ್ದು ಎಂದರೆ ಜನರ ಸಹಾಯ ಹಸ್ತ. ಹಾಗಾಗಿ ನಾನು ನಿಮ್ಮಲ್ಲಿ ನನ್ನ ಕೈಯನ್ನು ಚಾಚುತ್ತಿದ್ದೇನೆ.

ಎಬೆನೆಜರ್ ಎನ್ನುವ ಆ ಪುಟ್ಟ ಮಗುವಿನ ಆರೋಗ್ಯ ಸುಧಾರಣೆಗೆ ನಿಮ್ಮ ಸಹಾಯದ ಅಗತ್ಯವಿದೆ. ನಿಮ್ಮ ಸಣ್ಣ ಸಹಾಯವು ಅವನ ಜೀವನ ಬೆಳಗಿಸುವುದು. ನೀವು ಸಹಾಯ ಮಾಡಲು ಬಯಸಿದರೆ ಸಹಾಯ ನಿಧಿಗೆ ಹಣವನ್ನು ನೀಡಬಹುದು. ಇದರಿಂದ ಒಂದು ಮಗುವಿನ ಪ್ರಾಣ ಉಳಿದುಕೊಳ್ಳುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X