ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ತಾಸು, 18 ಕಿ.ಮೀ. ಸಮುದ್ರದಲ್ಲಿ ಈಜು, ದಾಖಲೆ ನಿರ್ಮಿಸಿದ 8 ರ ಪೋರಿ

|
Google Oneindia Kannada News

ಚೆನ್ನೈ, ಜ. 24: ಸಮುದ್ರದ ಉಳಿವಿಗಾಗಿ ಎಂಟು ವರ್ಷದ ಪೋರಿ ಸಮುದ್ರದಲ್ಲಿ ಬರೋಬ್ಬರಿ ಹದಿನೆಂಟು ಕಿ.ಮೀ. ಈಜುವ ಮೂಲಕ ಅಸಿಸ್ಟ್ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ತಾರಾಗೈ ಆರಾಧನಾ ಈ ಸಾಹಸ ಮೆರೆದ ಪೋರಿ. ಎಂಟು ವರ್ಷ ವಯಸ್ಸಿನ ಈ ಪುಟ್ಟ ಪೋರಿ ಸಮುದ್ರ ಉಳಿವಿಗಾಗಿ ಈಜು, ಸಮುದ್ರ ಉಳಿಸಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ಆರಾಧನಾ ಬಂಗಾಲ ಕೊಲ್ಲಿಯ ಕೋವಲಂನಿಂದ ಆರಂಭಿಸಿ ಹದಿನೆಂಟು ಕಿ.ಮೀ. ದೂರದಲ್ಲಿರುವ ನೀಲಗರೈ ವರೆಗೂ ಸಮುದ್ರದಲ್ಲಿ ಈಜುವ ಮೂಲಕ ದಡ ಸೇರಿದ್ದಾಳೆ. ಸುಮಾರು ಹದಿನೆಂಟು ಕಿ.ಮೀ. ದೂರವನ್ನು ಏಳು ತಾಸಿನಲ್ಲಿ ಕ್ರಮಿಸಿದ್ದಾಳೆ.

ಬೆಳಗ್ಗೆ ಆರು ಗಂಟೆಗೆ ಸಮುದ್ರ ಉಳಿವಿಗಾಗಿ ಈಜು ಆರಂಭಿಸಬೇಕಿತ್ತು. ತೀವ್ರ ಮಳೆ ಹಿನ್ನೆಲೆಯಲ್ಲಿ ಒಂದು ತಾಸು ತಡವಾಗಿ ಆರಂಭವಾಯಿತು. ನಂತರ ಕ್ರಮವಾಗಿ ಹತ್ತು ಕಿ.ಮೀ. ಈಜಿ ಆರಾಧನಾ ಸ್ವಲ್ಪ ಸುಸ್ತಾದರು. ಮಳೆ ಬೀಳುತ್ತಿದ್ದರಿಂದ ಸ್ವಲ್ಪ ಚಳಿಗೆ ನಡಗುತ್ತಿದ್ದಳು. ಕೊನೆಗೂ ಮಧ್ಯಾಹ್ನದ ವೇಳೆಗೆ ನಿಗದಿತ ದೂರ ಕ್ರಮಿಸಿ ಆರಾಧಾನಾ ದಾಖಲೆ ನಿರ್ಮಿಸಿದಳು ಎಂದು ಆಕೆಯ ತಂದೆ ಅರವಿಂದ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

Eight Year old Girl created Assist world record by swimming 18 K.M in Tamil Naduu Sea

ಬರೋಬ್ಬರಿ ಹದಿನೆಂಟು ಕಿ.ಮೀ. ಸಮುದ್ರದಲ್ಲಿ ಈಜಿ ದಡ ಸೇರಿದ ಆರಾಧನಾಳನ್ನು ಸ್ಥಳೀಯರು ಭರ ಮಾಡಿಕೊಂಡರು. ಅಲ್ಲದೇ ಆಕೆಯನ್ನು ಅಪ್ಪಿಕೊಂಡು ಮುದ್ದಾಡಿದರು. ಚಿಕ್ಕ ವಯಸ್ಸಿನಲ್ಲಿ ಈ ಸಾಹಸ ಮಾಡುವ ಮೂಲಕ ಆರಾಧಾನ ದಾಖಲೆ ನಿರ್ಮಿಸಿದ್ದಾಳೆ.

Eight Year old Girl created Assist world record by swimming 18 K.M in Tamil Naduu Sea

Recommended Video

ಪಾಕ್ ಬೌಲರ್ ಶಾಹಿನ್ ಅಫ್ರಿದಿಗೆ ಗೆ ಭಾರತದ ಸೋಲಿನಿಂದ ಅನಿಸಿದ್ದೇನು? | Oneindia Kannada

ಪಾಂಡಿಚೇರಿಯಲ್ಲಿ ಸ್ಕೂಬಾ ಡೈವಿಂಗ್ ಟ್ರೈನಿಂಗ್ ಸೆಂಟರ್ ಹೊಂದಿರುವ ಅರವಿಂದ್ ಅವರ ಪುತ್ರಿ ಆರಾಧನಾ. ಸಮುದ್ರದ ಆಳದಲ್ಲಿ ಮದುವೆ ಮಾಡಿಸುವುದು, ಸಮುದ್ರದ ಆಳದಲ್ಲಿ ಪುಟ್ಬಾಲ್ ಆಟ ಆಡಿಸುವ ಮೂಲಕ ಸಮುದ್ರದ ಉಳಿವಾಗಿ ವಿನೂತನ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಪದೇ ಪದೇ ಸುದ್ದಿಯಾಗುತ್ತಿದ್ದರು. ಇದೀಗ ಅರವಿಂದ್ ಅವರ ಪುತ್ರಿಯೇ ಸಮುದ್ರದಲ್ಲಿ ಹದಿನೆಂಟು ಕಿ.ಮೀ. ಈಜಿ ದಡ ಸೇರಿ ಭರವಸೆ ಮೂಡಿಸಿದ್ದಾಳೆ.

English summary
Thaaragai Aarathana 8 years old sea swimming Chennai kovalam to neelangarai 18 km and created an Assist Word Record know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X