ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಆಯ್ತು, ಈಗ ಕಮಲ್ ಹಾಸನ್ ಸಭೆಯಲ್ಲಿ ಮೊಟ್ಟೆ, ಕಲ್ಲು ಎಸೆತ

|
Google Oneindia Kannada News

ಚೆನ್ನೈ, ಮೇ 17: ತಮಿಳುನಾಡಿನ ಕರೂರ್ ಜಿಲ್ಲೆಯ ಅರವಕುರಿಚಿ ಎಂಬಲ್ಲಿ ಗುರುವಾರ ರಾತ್ರಿ ನಡೆಯುತ್ತಿದ್ದ ಕಮಲ್ ಹಾಸನ್ ಕಾರ್ಯಕ್ರಮದಲ್ಲಿ ಜನರು ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದ ಘಟನೆ ವರದಿಯಾಗಿದೆ.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ವೇದಿಕೆಯ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ಬೀಳತೊಡಗಿದ್ದವು. ತಕ್ಷಣವೇ ಪೊಲೀಸರು ಕ್ರಮ ಕೈಗೊಂದಿದ್ದರಿಂದ ಯಾರಿಗೂ ಅಪಾಯವಾಗಿಲ್ಲ ಎನ್ನಲಾಗಿದೆ.

ಮೊದಲ ಉಗ್ರ ಹಿಂದು: ಸತ್ಯವನ್ನೇ ಹೇಳಿದ್ದೇನೆ ಎಂದ ಕಮಲ್ ಹಾಸನ್ ಮೊದಲ ಉಗ್ರ ಹಿಂದು: ಸತ್ಯವನ್ನೇ ಹೇಳಿದ್ದೇನೆ ಎಂದ ಕಮಲ್ ಹಾಸನ್

ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿತ್ತು.

Eggs andstones were throwned in Kamal Haasans public meeting

ಅದಾಗಿ ಒಂದೇ ದಿನದಲ್ಲಿ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದ ಘಟನೆ ವರದಿಯಾಗಿದೆ.

ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆತ, ದೂರು ದಾಖಲುಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆತ, ದೂರು ದಾಖಲು

ಮೇ 13 ರಂದು ತಮಿಳುನಾಡಿನ ಅರವಕುರಿಚಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, "ನಾನೊಬ್ಬ ಹೆಮ್ಮೆಯ ಭಾರತೀಯ. ಆದರೆ ನಾನೊಂದು ಮಾತು ಹೇಳುತ್ತೇನೆ. ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು" ಎಂದಿದ್ದರು.

ಜೊತೆಗೆ ತಮ್ಮ ಹೇಳಿಕೆಗೆ ತಾನು ಬದ್ಧನಾಗಿದ್ದೇನೆ ಎಂದು ಅವರು ಸಮರ್ಥಿಸಿಕೊಂಡಿದ್ದರು.

English summary
After Slippers, eggs and stones were throwned in a public meeting which was addressed by actor turned politician Kamal Haasan, Ehich was held at Aravakurichi, Karur district of Tamil Nadu,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X