ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ಹನಿ ನೀರಿಗೂ ತತ್ವಾರ, ಮುಂದುವರೆದ ಹಾಹಾಕಾರ

|
Google Oneindia Kannada News

ಚೆನ್ನೈ, ಜೂನ್ 20: ಚೆನ್ನೈನಲ್ಲಿ ಹನಿ ನೀರಿಗೂ ಜನರು ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ. ಇದರ ಮಧ್ಯೆಯೇ ರಾಜಕೀಯ ಕಿತ್ತಾಟವೂ ನಡೆಯುತ್ತಿದೆ.

ಎಐಎಡಿಎಂಕೆ ಸರ್ಕಾರವು ಜನರ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಈ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಜೂನ್ 22ರಂದು ತಮಿಳುನಾಡಿನಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಡಿಎಂಕೆ ತಿಳಿಸಿದೆ.

ಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ, ದುಪ್ಪಟ್ಟು ಹಣ ಕೊಡ್ತೀವಂದ್ರೂ ಸಿಗ್ತಿಲ್ಲ ನೀರುಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ, ದುಪ್ಪಟ್ಟು ಹಣ ಕೊಡ್ತೀವಂದ್ರೂ ಸಿಗ್ತಿಲ್ಲ ನೀರು

ಚೆನ್ನೈನಲ್ಲಿ ನೀರಿನ ಅಭಾವದ ಹಿನ್ನೆಲೆಯಲ್ಲಿ ಪ್ರಿಕೆಜಿಯಿಂದ ಐದನೇ ತರಗತಿಯವರೆಗೂ ಜೂನ್ 21ರವರೆಗೆ ರಜೆ ಘೋಷಿಸಲಾಗಿದೆ.ಖಾಸಗಿ ವಾಟರ್ ಟ್ಯಾಂಕರ್‌ಗೆ ದುಪ್ಪಟ್ಟು ಹಣ ನೀಡಲಾಗುತ್ತಿದೆ.

Educational institutions fail to supply of water in Chennai

ಶಾಲಾ, ಕಾಲೇಜುಗಳಿಗೆ ನೀರು ಪೂರೈಕೆಯನ್ನು ಮಾಡುವುದು ಕೂಡ ಕಷ್ಟವಾಗಿದೆ. ಜೂನ್ 29ರಷ್ಟೊತ್ತಿಗೆ ಮುಂಗಾರು ಇಡೀ ದೇಶವನ್ನೇ ಆವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.2015ರಲ್ಲಿ ಚೆನ್ನೈನಲ್ಲಿ ಪ್ರವಾಹ ಬಂದು ಅಲ್ಲಿರುವ ನದಿ, ನಾಳೆಗಳೆಲ್ಲವೂ ಬತ್ತಿ ಹೋಗಿದ್ದವು.

ಇನ್ನು ಎರಡು ಮೂರು ವರ್ಷಗಳು ಸರಿಯಾಗಿ ಮಳೆಯಾದರೆ ಮಾತ್ರ ಸಹಜ ಸ್ಥಿತಿಗೆ ಮರಗಳಲು ಸಾಧ್ಯ.
ಚೆನ್ನೈ ನಗರಕ್ಕೆ ನಿತ್ಯ 800 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ ಆದರೆ 525 ಮಿಲಿಯನ್ ಲೀಟರ್ ನೀರು ಮಾತ್ರ ಸರಬರಾಜಾಗುತ್ತಿದೆ.

English summary
Educational institutes have to provide a supply of water for at least eight hours a day. so they declare holiday for pre-kg to class 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X