ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ಸಂಸದ ಜಗತ್ ರಕ್ಷಕನ್ ಆಸ್ತಿ ಜಪ್ತಿ ಮಾಡಿದ ಇಡಿ

|
Google Oneindia Kannada News

ಚೆನ್ನೈ, ಸೆ. 13: ವಿದೇಶಿ ವಿನಿಯಮ ನಿವರ್ಹಣಾ ಕಾಯ್ದೆ(FEMA)ಉಲ್ಲಂಘಟನೆ ಆರೋಪ ಹೊತ್ತುಕೊಂಡಿರುವ ಡಿಎಂಕೆ ಸಂಸದ ಎಸ್ ಜಗತ್ ರಕ್ಷಕನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಡಿ ಅಧಿಕಾರಿಗಳು ಶನಿವಾರದಂದು ದಾಳಿ ಜಪ್ತಿ ಮಾಡಿದ ಆಸ್ತಿ ಮೌಲ್ಯ ಸುಮಾರು 89.19 ಕೋಟಿ ರು ಎಂದು ಅಂದಾಜಿಸಲಾಗಿದೆ. ಜಗದರಕ್ಷಕನ್ ಮನೆ, ಕಚೇರಿ ಹಾಗೂ ಕುಟುಂಬ ಸದಸ್ಯರಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಫೆಮಾ ಕಾಯ್ದೆ ಸೆಕ್ಷನ್ 4 ಉಲ್ಲಂಘಿಸಿ ಸಿಂಗಪುರದ ಕಂಪನಿಯೊಂದಿಗೆ ಅಕ್ರಮವಾಗಿ ಹಣಕಾಸು ವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಸಂಸದರ ಮೇಲೆ ಸೆಕ್ಷನ್ 37ಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಜಗತ್ ರಕ್ಷಕನ್ ಆಸ್ತಿಯಲ್ಲಿ ಕೃಷಿ ಭೂಮಿ, ನಿವೇಶನ, ಮನೆ, ಬ್ಯಾಂಕ್ ಖಾತೆಯಲ್ಲಿನ ನಗದು, ಷೇರು, ಬಾಂಡ್ ಎಲ್ಲವೂ ಇದೆ. ಪ್ರಕರಣದ ತನಿಖೆ ಮುಂದುವರೆದಿದೆ.

ED attaches DMK MP S Jagathrakshakan, family’s property worth Rs 89 crore

2017ರಲ್ಲಿ ಸಂಸದ ಜಗತ್ ರಕ್ಷಕನ್ ಹಾಗೂ ಅವರ ಪುತ್ರ ಸಂದೀಪ್ ಆನಂದ್ ಸಲ್ಲಿಸಿದ ದಾಖಲೆ ಪ್ರಕಾರ, ಸಂದೀಪ್ ಆನಂದ್ ಅವರು 70,00,000 ಷೇರು ಹಾಗೂ 20,00,000 ಷೇರುಗಳನ್ನು ಸಿಂಗಪುರದ ಮೆಸರ್ಸ್ ಸಿಲ್ವರ್ ಪಾರ್ಕ್ ಲಿಮಿಟೆಡ್ ಸಂಸ್ಥೆಯಿಂದ ಪಡೆದುಕೊಂಡಿದ್ದಾರೆ. ಇದಕ್ಕೆ ಆರ್ ಬಿಐ ಅನುಮತಿಯನ್ನು ಪಡೆದುಕೊಂಡಿಲ್ಲ. ಫೆಮಾ ಕಾಯ್ದೆ ಸೆಕ್ಷನ್ 3, 4, 37ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

English summary
The Directorate of Enforcement(ED) has seized property worth Rs 89.19 crore belonging to DMK Lok Sabha MP Jagathrakshakan and his family members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X