• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿಗೆ ಭೇಟಿ ನೀಡಲು ಇ-ಪಾಸು ಕಡ್ಡಾಯ

|

ಚೆನ್ನೈ, ಅಕ್ಟೋಬರ್ 14 : ಕೋವಿಡ್ ಭೀತಿ ಹಿನ್ನಲೆಯಲ್ಲಿ ಬೇರೆ ರಾಜ್ಯಗಳಿಂದ ತಮಿಳುನಾಡಿಗೆ ಆಗಮಿಸುವ ಜನರಿಗೆ ಇ-ಪಾಸ್ ಕಡ್ಡಾಯಗೊಳಿಸಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ರಾಜ್ಯದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 6,65,930.

ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಈ ಕುರಿತು ಮಾಹಿತಿ ನೀಡಿದೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠಕ್ಕೆ ಅಡ್ವೋಕೇಟ್ ಜನರಲ್ ವಿಜಯ್ ನಾರಾಯಣ್ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ತಮಿಳುನಾಡು ಅನ್ ಲಾಕ್: ಹೋಟೆಲ್, ರೆಸಾರ್ಟ್ ಪುನಾರಂಭಕ್ಕೆ ಅನುಮತಿ

ಹೊಸ ನಿಯಮಗಳ ಪ್ರಕಾರ ರಾಜ್ಯಕ್ಕೆ ಆಗಮಿಸುವ ಜನರು ಇ-ಪಾಸ್ ಪಡೆಯಲು ಮೂಲ ಮಾಹಿತಿಗಳನ್ನು ಭರ್ತಿ ಮಾಡಬೇಕು. ಕೋವಿಡ್ ಸೋಂಕಿತರ ಜೊತೆ ಸಂಪರ್ಕ ಹೊಂದಿವರನ್ನು ಪತ್ತೆ ಹಚ್ಚಲು ಈ ಕ್ರಮ ಕೈಗೊಳ್ಳಲಾಗಿದೆ.

ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿ

ರಾಜ್ಯದ ಘಟ್ಟ ಪ್ರದೇಶಗಳಿಗೆ ಪ್ರಯಾಣ ಮಾಡುವಾಗ ಇ-ಪಾಸ್ ಹಾಜರುಪಡಿಸುವುದು ಕಡ್ಡಾಯವಾಗಿದೆ. ಘಟ್ಟ ಪ್ರದೇಶದಲ್ಲಿ ಖಾಯಂ ವಿಳಾಸ ಹೊಂದಿರುವವರಿಗೆ ಮಾತ್ರ ಇ-ಪಾಸ್ ನೀಡಲಾಗುತ್ತದೆ. ಪ್ರವಾಸಿಗರಿಗೆ ಪಾಸು ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ.

ತಮಿಳುನಾಡು ಮಂದಿಗೆ ಖುಷಿ ಕೊಡುವ ಕೊವಿಡ್-19 ಅಂಕಿ-ಸಂಖ್ಯೆ!

ಘಟ್ಟ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯಗಳು ಕಡಿಮೆ ಇರುವ ಕಾರಣ ಇಂತಹ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಮದ್ರಾಸ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಪ್ರಸ್ತುತ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ.

ಕೇಂದ್ರ ಗೃಹ ಇಲಾಖೆ ಅನ್ ಲಾಕ್ 3.0 ಮಾರ್ಗಸೂಚಿ ಪ್ರಕಟಿಸುವಾಗ ರಾಜ್ಯಗಳ ನಡುವೆ ಸಂಚಾರ ನಡೆಸಲು ಯಾವುದೇ ಪಾಸು ಕಡ್ಡಾಯಗೊಳಿಸಬಾರದು ಎಂದು ಹೇಳಿತ್ತು. ಆದ್ದರಿಂದ, ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಮಾಹಿತಿ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಸೂಚನೆ ನೀಡಿದರು.

   ಆನೆಯ ಮೇಲೆ ಯೋಗಾಸನ ಮಾಡುವಾಗ ಉರುಳಿಬಿದ್ದ ರಾಮದೇವ್‌ ಬಾಬಾ! Oneindia kannada

   ಅಕ್ಟೋಬರ್ 13ರಂದು ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ತಮಿಳುನಾಡಿನಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 43,239. ಇದುವರೆಗೂ ರಾಜ್ಯದಲ್ಲಿ 6 ಲಕ್ಷ ಜನರು ಗುಣಮುಖರಾಗಿದ್ದಾರೆ.

   English summary
   E pass mandatory for the people to visit Tamil Nadu. Government has informed the Madras high court.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X