ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ 'ಪೆರಿಯಾರ್' ವಿವಾದ

|
Google Oneindia Kannada News

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಮಾಜ ಸುಧಾರಕ ಪೆರಿಯಾರ್ ರಾಮಸ್ವಾಮಿ ಕುರಿತು ರಜನಿಕಾಂತ್ ನೀಡಿದ್ದ ಹೇಳಿಕೆ ತಮಿಳುನಾಡಿನಲ್ಲಿ ಭಾರಿ ವಿವಾದಕ್ಕೆ ಗುರಿಯಾಗಿತ್ತು.

Recommended Video

Rajinikanth in trouble for Periyar issue | Oneindia Kannaad

ತಲೈವಾ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೂಡಲೇ ರಜನಿಕಾಂತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದವು. ರಜನಿಕಾಂತ್ ಹೇಳಿಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಇದೀಗ, ರಜನಿಕಾಂತ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪೆರಿಯಾರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಜನಿಕಾಂತ್ ಮೇಲೆ ಪೊಲೀಸ್ ಕ್ರಮ ಜರುಗಿಸುವಂತೆ ಡಿವಿಕೆ ಪಕ್ಷ ನ್ಯಾಯಾಲಯದ ಮೊರೆ ಹೋಗಿದೆ. ಮುಂದೆ ಓದಿ....

ರಜಿನಿಕಾಂತ್ ಹೇಳಿಕೆ ಎಫೆಕ್ಟ್‌: ಪೆರಿಯಾರ್ ಪ್ರತಿಮೆ ಭಗ್ನರಜಿನಿಕಾಂತ್ ಹೇಳಿಕೆ ಎಫೆಕ್ಟ್‌: ಪೆರಿಯಾರ್ ಪ್ರತಿಮೆ ಭಗ್ನ

ಮಾರ್ಚ್ 7ಕ್ಕೆ ಅರ್ಜಿ ವಿಚಾರಣೆ

ಮಾರ್ಚ್ 7ಕ್ಕೆ ಅರ್ಜಿ ವಿಚಾರಣೆ

ತಮಿಳು ನಟ ಹಾಗೂ ರಾಜಕಾರಣಿ ರಜನಿಕಾಂತ್ ವಿರುದ್ಧ ಕ್ರಮ ಜರುಗಿಸುವಂತೆ ದ್ರಾವಿಡರ್ ವಿದುದಲೈ ಕಚ್ಚಿ (ಡಿವಿಕೆ) ಪ್ರಧಾನ ಕಾರ್ಯದರ್ಶಿ ಉಮಾಪತಿ ಅವರು ಚೆನ್ನೈ ಮಹಾನಗರ ಮ್ಯಾಜಿಸ್ಟ್ರೇಟ್ ನಲ್ಲಿ ದೂರು ನೀಡಿದ್ದಾರೆ. ದ್ರಾವಿಡ ಚಳವಳಿ ಪಿತಾಮಹ ಎಂದೇ ಕರೆಯಲಾಗುವ ಪೆರಿಯಾರ್ ಅವರ ವರ್ಚಿಸ್ಸಿಗೆ ರಜನಿಕಾಂತ್ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಉಮಾಪತಿ ಅವರ ಅರ್ಜಿ ಸ್ವೀಕರಿಸಿರುವ ಕೋರ್ಟ್ ಮಾರ್ಚ್ 7 ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಪೆರಿಯಾರ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಲ್ಲ: ರಜನಿಕಾಂತ್ಪೆರಿಯಾರ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಲ್ಲ: ರಜನಿಕಾಂತ್

ಪೊಲೀಸರಿಗೆ ಮಾಹಿತಿ ಕೇಳಿದ ಕೋರ್ಟ್

ಪೊಲೀಸರಿಗೆ ಮಾಹಿತಿ ಕೇಳಿದ ಕೋರ್ಟ್

ಪೆರಿಯಾರ್ ಕುರಿತು ರಜನಿಕಾಂತ್ ನೀಡಿರುವ ಹೇಳಿಕೆ ಸಂಬಂಧ, ರಜನಿ ವಿರುದ್ಧ ಪ್ರಕರಣ ದಾಖಲಿಸಲು ಆಧಾರವಿದೆಯೇ ಎಂದು ಪೊಲೀಸರಿಗೆ ಕೋರ್ಟ್ ಕೇಳಿದೆ. ಈ ಸಂಬಂಧ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಬೇಕಾಗಿದೆ.

ರಜನಿಕಾಂತ್ ನೀಡಿದ್ದ ಹೇಳಿಕೆ ಏನು?

ರಜನಿಕಾಂತ್ ನೀಡಿದ್ದ ಹೇಳಿಕೆ ಏನು?

ಜನವರಿ ತಿಂಗಳಲ್ಲಿ ತಮಿಳು ನಿಯತಕಾಲಿಕೆಯ 50ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದ ರಜನಿಕಾಂತ್, ''1971ರಲ್ಲಿ ಪೆರಿಯಾರ್ ಮೌಢ್ಯತೆ ನಿರ್ಮೂಲನೆ ಮಾಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಅದಕ್ಕಾಗಿ ನಡೆದ ಹೋರಾಟದಲ್ಲಿ ಸೀತಾ ಮತ್ತು ರಾಮನ ಬೆತ್ತಲೆ ಫೋಟೋ ಪ್ರದರ್ಶಿಸಿದ್ದರು. ಆ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದರು. ಆದರೂ ಈ ಬಗ್ಗೆ ಯಾವ ಪತ್ರಿಕೆಯೂ ವರದಿ ಪ್ರಕಟಿಸಿರಲಿಲ್ಲ'' ಎಂದು ರಜನಿ ಭಾಷಣದಲ್ಲಿ ಹೇಳಿದ್ದರು.

ಕ್ಷಮೆ ಕೇಳಲ್ಲ ಎಂದಿದ್ದ ರಜನಿಕಾಂತ್

ಕ್ಷಮೆ ಕೇಳಲ್ಲ ಎಂದಿದ್ದ ರಜನಿಕಾಂತ್

ಪೆರಿಯಾರ್ ಕುರಿತು ರಜನಿಕಾಂತ್ ಹೇಳಿದ ಈ ಮಾತು ಅನೇಕರ ಕೆಂಗಣ್ಣಿಗೆ ಬಿತ್ತು. ಪೆರಿಯಾರ್ ಬಗ್ಗೆ ರಜನಿ ಸುಳ್ಳು ಸುದ್ದಿ ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಕ್ಷಮೆ ಕೇಳಬೇಕು ಎಂದು ಹಲವು ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ರಜನಿ ಮುಂದೆ ಗಲಾಟೆ ಮಾಡಿದರು. ಇದ್ಯಾವುದಕ್ಕೂ ಬಗ್ಗದ ರಜನಿ ''ನನ್ನ ಹೇಳಿಕೆ ಹಿಂಪಡೆಯುವುದಿಲ್ಲ. ನಾನು ಹೇಳಿದ್ದು ಸತ್ಯ, ನಾನು ಕ್ಷಮೆ ಕೇಳಿದ್ರೆ ನನ್ನ ಮಾತು ಸುಳ್ಳು ಎಂದಾಗುತ್ತೆ'' ಎಂದು ರಜನಿಕಾಂತ್ ಸಮರ್ಥಿಸಿಕೊಂಡಿದ್ದರು.

English summary
Dravidar Vidudhalai Katchi (DVK) general secretary Umapathi has moved a complaint against rajinikanth in Chennai metropolitan magistrate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X