ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ರಾಜ್ ಕುಮಾರ್ ಕಿಡ್ನಾಪ್ ಕೇಸ್ : ಎಲ್ಲಾ ಆರೋಪಿಗಳಿಗೆ ಖುಲಾಸೆ

|
Google Oneindia Kannada News

Recommended Video

ಡಾ ರಾಜ್ ಕುಮಾರ್ ಕಿಡ್ನಾಪ್ ಕೇಸ್ ನಲ್ಲಿ ಎಲ್ಲಾ ಆರೋಪಿಗಳು ಖುಲಾಸೆ | Oneindia Kannada

ಈರೋಡ್(ತಮಿಳುನಾಡು), ಸೆಪ್ಟೆಂಬರ್ 25: ಸುಮಾರು 18 ವರ್ಷಗಳ ಬಳಿಕ ನಟ ಡಾ. ರಾಜ್ ಕುಮಾರ್ ಅವರ ಕಿಡ್ನಾಪ್ ಪ್ರಕರಣದ ತೀರ್ಪು ಇಂದು ಪ್ರಕಟಗೊಂಡಿದೆ.

ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಜಡ್ಜ್ ಕೆ ಮಣಿ ಅವರು ಆದೇಶ ಹೊರಡಿಸಿದ್ದು, 9 ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.

ಕಾಡುಗಳ್ಳ ವೀರಪ್ಪನ್ ಸೇರಿದಂತೆ 14 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಆದರೆ, ವೀರಪ್ಪನ್, ಸೇತುಕುಳಿ ಗೋವಿಂದನ್ ಸೇರಿದಂತೆ ಅವನ ಸಹಚರರು 2004ರಲ್ಲಿ ಎಸ್ ಟಿಎಫ್ ನವರು ನಡೆಸಿದ ಎನ್ ಕೌಂಟರ್ ಗೆ ಬಲಿಯಾದರು.

ಪ್ರಕರಣದ ಆರೋಪಿಗಳ ಪೈಕಿ 5 ಮಂದಿ ಜೈಲಿನಲ್ಲಿದ್ದರು. ಐವರಿಗೂ ಶುಭ ಸುದ್ದಿ ಸಿಕ್ಕಿದೆ. ಇವರ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಜಡ್ಜ್ ಆದೇಶಿಸಿದ್ದಾರೆ.

2000ರ ಜುಲೈ 30ರಂದು ಗಾಜನೂರಿನ ಮನೆಯಿಂದ ಡಾ. ರಾಜ್ ಕುಮಾರ್ ಹಾಗೂ ಇತರೆ ಮೂವರನ್ನು ಅಪಹರಿಸಿದ್ದ ವೀರಪ್ಪನ್, 108 ದಿನಗಳ ಬಳಿಕ ಅಭಿಮಾನಿಗಳ ಪಾಲಿನ ಅಣ್ಣಾವ್ರನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. 2006ರ ಏಪ್ರಿಲ್ ನಲ್ಲಿ ಡಾ. ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದರು.

 ಕಿಡ್ನಾಪ್ ಪ್ರಕರಣದಲ್ಲಿ 14 ಮಂದಿ ಆರೊಪಿಗಳು

ಕಿಡ್ನಾಪ್ ಪ್ರಕರಣದಲ್ಲಿ 14 ಮಂದಿ ಆರೊಪಿಗಳು

14 ಪ್ರಕರಣದ ಆರೋಪಿಗಳು: ವೀರಪ್ಪನ್, ಸೇತುಕುಳಿ ಗೋವಿಂದನ್, ರಂಗಸ್ವಾಮಿ, ಚಂದ್ರಗೌಡ ಮಲ್ಲು, ರಮೇಶ್, ಆಂಡ್ರಿಲ್ ಎಳುಮಲೈ, ದೊಡ್ಡ ಗಾಜನೂರು ಬಸವಣ್ಣ, ಪುಟ್ಟಸ್ವಾಮಿ, ಅಮೃತ ಲಿಂಗಮ್, ನಾಗರಾಜು, ಕಲ್ಮಂಡಿ ರಾಮನ್, ಅನೈಕರೈ ಮಾರನ್, ಕಡಲೂರ್ ಗೋವಿಂದರಾಜನ್, ಜಯಂಕೊಂಡಮ್ ಸೆಲ್ವಂ
ಆರೋಪಿಗಳ ಪೈಕಿ ಮೃತರು: ವೀರಪ್ಪನ್, ಸೇತುಕುಳ ಗೋವಿಂದನ್, ಚಂದ್ರಗೌಡ, ಮಲ್ಲು
ನಾಪತ್ತೆ : ರಮೇಶ್
ಖುಲಾಸೆಗೊಂಡವರು: ಆಂಡ್ರಿಲ್ ಎಳುಮಲೈ, ದೊಡ್ಡ ಗಾಜನೂರು ಬಸವಣ್ಣ, ಪುಟ್ಟಸ್ವಾಮಿ, ಅಮೃತ ಲಿಂಗಮ್, ನಾಗರಾಜು, ಕಲ್ಮಂಡಿ ರಾಮನ್, ಅನೈಕರೈ ಮಾರನ್, ಕಡಲೂರ್ ಗೋವಿಂದರಾಜನ್, ಜಯಂಕೊಂಡಮ್ ಸೆಲ್ವಂ.

ಸಾಕ್ಷಿಗಳು: ರಾಜ್ ಕುಮಾರ್ ಸಂಬಂಧಿ

ಸಾಕ್ಷಿಗಳು: ರಾಜ್ ಕುಮಾರ್ ಸಂಬಂಧಿ

ಸಾಕ್ಷಿಗಳು: ರಾಜ್ ಕುಮಾರ್ ಸಂಬಂಧಿ ಎಸ್ಎ ಗೋವಿಂದರಾಜ್(ಪಾರ್ವತಮ್ಮ ಅವರ ತಮ್ಮ), ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪಾರ್ವತಮ್ಮ ರಾಜ್ ಕುಮಾರ್. 2016 ರಲ್ಲಿ ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಪಾರ್ವತಮ್ಮ ಅವರು ಖುದ್ದು ಕೋರ್ಟಿಗೆ ಹಾಜರಾಗುವಂತೆ ಸೂಚಿಸಿತ್ತು.ಆದರೆ, ಆನಾರೋಗ್ಯದ ಕಾರಣ ಕೋರ್ಟಿಗೆ ಹಾಜರಾಗಲೇ ಇಲ್ಲ. 2017ರಲ್ಲಿ ಪಾರ್ವತಮ್ಮ ನವರು ನಿಧನರಾದರು.

ಆರೋಪಿಗಳ ಮೇಲಿನ ಆರೋಪಗಳು

ಆರೋಪಿಗಳ ಮೇಲಿನ ಆರೋಪಗಳು

ಡಾ. ರಾಜ್ ಕುಮಾರ್ ಅವರು ಬಿಡುಗಡೆಯಾದ ಬಳಿಕ, ತಳವಾಡಿ ಪೊಲೀಸ್ ಠಾಣೆ ಅಧಿಕಾರಿಗಳು, ವೀರಪ್ಪನ್ ಹಾಗೂ 11 ಸಹಚರರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಿದ್ದಲ್ಲದೆ, ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ 109, 120 ಬಿ(ಸಂಚು), 147, 14, 449, 364ಎ, 365 ಅಲ್ಲದೆ, ಕಿಡ್ನಾಪ್ ಸಂದರ್ಭದಲ್ಲಿ ಅಪಹರಣಕಾರರು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕಾರಣ ಕಾಯ್ದೆ ಸೆಕ್ಷನ್ 25 (1) (ಬಿ) ಹಾಗೂ 27 (1).

ವೀರಪ್ಪನ್ ಜತೆ ಮಾತುಕತೆ

ವೀರಪ್ಪನ್ ಜತೆ ಮಾತುಕತೆ

ವೀರಪ್ಪನ್ ಜತೆ ಮಾತುಕತೆ : ಸತ್ಯಮಂಗಲಂ ಹಾಗೂ ಭಾವನಿ ಅರಣ್ಯ ಪ್ರದೇಶಗಳಲ್ಲಿದ್ದ ವೀರಪ್ಪನ್ ಭೇಟಿ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಡಾ. ರಾಜ್ ಕುಮಾರ್ ಕುಟುಂಬ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ ಒತ್ತಾಯದ ಮೇರೆಗೆ ನಾನು ಐದಾರು ಬಾರಿ ವೀರಪ್ಪನ್ ಭೇಟಿ ಮಾಡಿ, ಡಾ. ರಾಜ್ ಅವರ ಆರೋಗ್ಯ ವಿಚಾರಿಸಿಕೊಂಡು ಬಂದೆ ಎಂದು ನಕ್ಕೀರನ್ ಪತ್ರಿಕೆ ಸಂಪಾದಕ ಗೋಪಾಲ್ ಅವರು ಪ್ರತಿಕ್ರಿಯಿಸಿದ್ದಾರೆ.

ಸತತ ನಾಲ್ಕು ಗಂಟೆಗಳ ಕಾಲ ವೀರಪ್ಪನ್ ಜತೆ ಮಾತುಕತೆ ನಡೆಸಿ, ಅವನನ್ನು ಒಪ್ಪಿಸುವಷ್ಟರಲ್ಲಿ ಸಾಕಾಯಿತು. ನನ್ನ ವೃತ್ತಿ ಬದುಕು, ಜೀವನ ಎಲ್ಲವೂ ರಾಜ್ ಅವರ ಬಿಡುಗಡೆ ಮೇಲೆ ನಿಂತಿತ್ತು. ದೇವರ ದಯೆ ರಾಜ್ ಕುಮಾರ್ ಅವರು ಜೀವಂತವಾಗಿ ಬಿಡುಗಡೆಯಾದರು.

English summary
Dr Rajkumar kidnap case: K Mani, the additional district judge in Gobichettipalayam in Erode district to delivered the judgment in the 18-year-old abduction of Kannada superstar Dr Rajkumar by forest brigand Veerappan. All 9 accused are acquitted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X