ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಲ್ಲಪೆರಿಯಾರ್‌ ಅಣೆಕಟ್ಟು ಸುರಕ್ಷಿತವಾಗಿದೆ; ಸಿಎಂ ಸ್ಟಾಲಿನ್

|
Google Oneindia Kannada News

ಚೆನ್ನೈ,ಆಗಸ್ಟ್‌ 09: "ಎಂ. ಕೆ. ಮುಲ್ಲಪೆರಿಯಾರ್ ಅಣೆಕಟ್ಟು ಎಲ್ಲಾ ಆಯಾಮಗಳಲ್ಲಿ ಸುರಕ್ಷಿತವಾಗಿದೆ" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಹೇಳಿದ್ದಾರೆ.

ಇದಕ್ಕೂ ಮೊದಲು ಆಗಸ್ಟ್ 5 ರಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಸ್ಟಾಲಿನ್ ಅವರಿಗೆ ಪತ್ರ ಬರೆದು ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟವು 136 ಅಡಿಗಳನ್ನು ಮೀರಿದ್ದು ನೀರು ಬಿಡುವುದನ್ನು ನಿಯಂತ್ರಿಸಲು ಮಧ್ಯಪ್ರವೇಶಿಸುವಂತೆ ಕೋರಿದ್ದರು.

ಕೇರಳದಲ್ಲಿ 2018ರಂತೆ ಭೀಕರ ಪ್ರವಾಹ ಸಾಧ್ಯತೆ!ಕೇರಳದಲ್ಲಿ 2018ರಂತೆ ಭೀಕರ ಪ್ರವಾಹ ಸಾಧ್ಯತೆ!

ಆ ಪತ್ರಕ್ಕೆ ಉತ್ತರಿಸಿದ ತಮಿಳುನಾಡು ಸಿಎಂ ಸ್ಟಾಲಿನ್‌ "ಮುಲ್ಲಪೆರಿಯಾರ್ ಅಣೆಕಟ್ಟು ಎಲ್ಲಾ ಅಂಶಗಳಿಂದಲೂ ಸುರಕ್ಷಿತವಾಗಿದೆ. 2021ರ ಫೆಬ್ರವರಿಯಲ್ಲಿ ಕೇಂದ್ರ ಜಲ ಆಯೋಗವು ಅನುಮೋದಿಸಿದ ರೂಲ್ ಕರ್ವ್ ಮತ್ತು ಗೇಟ್ ಆಪರೇಷನ್ ವೇಳಾಪಟ್ಟಿಯ ಪ್ರಕಾರ ಅಣೆಕಟ್ಟಿನ ಪ್ರವಾಹ ನಿಯಂತ್ರಣವನ್ನು ಮಾಡಲಾಗುತ್ತಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

"ನಮ್ಮ ಅಣೆಕಟ್ಟು ನಿರ್ವಹಣಾ ತಂಡವು ಮುಲ್ಲಪೆರಿಯಾರ್ ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಜನರ ಸುರಕ್ಷತೆಯ ಹಿನ್ನೆಲೆಯಲ್ಲಿ ಸಮಯಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೆಚ್ಚು ಗಮನಹರಿಸಿದೆ" ಎಂದು ಸ್ಟಾಲಿನ್ ಹೇಳಿದರು.

ವಿಜಯನ್ ಅವರು ಸ್ಟಾಲಿನ್ ಅವರಿಗೆ ಬರೆದ ಪತ್ರದಲ್ಲಿ, ನಿಮಗೆ ತಿಳಿದಿರುವಂತೆ ಕಳೆದ ಕೆಲವು ದಿನಗಳಿಂದ ಕೇರಳ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಈಗಾಗಲೇ ಇಡುಕ್ಕಿ ಸೇರಿದಂತೆ ಕೇರಳದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟ 136 ಅಡಿ ತಲುಪಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಣೆಕಟ್ಟಿಗೆ ಹೆಚ್ಚಿನ ಒಳಹರಿವಿನಿಂದ ಅಣೆಕಟ್ಟಿನ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಲಿದೆ ಎಂದಿದ್ದರು.

ಅಧಿಕಾರಿಗಳಿಗೆ ನಿರ್ದೇಶನ ನೀಡಲು ಮನವಿ

ಅಧಿಕಾರಿಗಳಿಗೆ ನಿರ್ದೇಶನ ನೀಡಲು ಮನವಿ

ವಿಜಯನ್ ಅವರು ಮುಲ್ಲಪೆರಿಯಾರ್ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದನ್ನು ಪರಿಗಣಿಸಿ ಅಣೆಕಟ್ಟಿನಿಂದ ಹೊರಹರಿವು ಒಳಹರಿವುಗಿಂತ ಹೆಚ್ಚಿನದಾಗಿದೆ ಎಂದು ಖಚಿತಪಡಿಸಿಕೊಳ್ಳಲು ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಸಿಎಂಗೆ ಸ್ಟಾಲಿನ್‌ಗೆ ಮನವಿ ಮಾಡಿದ್ದರು.

ಹಲವು ಬಾರಿ 142 ಅಡಿ ನೀರು ನಿಂತಿತು

ಹಲವು ಬಾರಿ 142 ಅಡಿ ನೀರು ನಿಂತಿತು

ಆದರೆ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಆರೋಪ ಮಾಡಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ, ಎಐಎಡಿಎಂಕೆ ಅಧಿಕಾರದಲ್ಲಿದ್ದಾಗ ಮುಲ್ಲಪೆರಿಯಾರ್ ಅಣೆಕಟ್ಟನ್ನು ಹಲವು ಬಾರಿ 142 ಅಡಿ ಎತ್ತರಕ್ಕೆ ನಿಲ್ಲಿಸಲಾಗಿತ್ತು. ಆದರೆ ಡಿಎಂಕೆ ಅಧಿಕಾರಕ್ಕೆ ಬಂದ ಎರಡು ವರ್ಷಗಳವರೆಗೆ ಈ ಪದ್ಧತಿಯನ್ನು ಅನುಸರಿಸಿರಲಿಲ್ಲ ಎಂದು ಆರೋಪಿಸಿದ್ದರು.

142 ಅಡಿಗಳಷ್ಟು ನೀರು ಸಂಗ್ರಹಿಸಲ್ಲ

142 ಅಡಿಗಳಷ್ಟು ನೀರು ಸಂಗ್ರಹಿಸಲ್ಲ

ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಕೇರಳ ಪ್ರದೇಶಕ್ಕೆ ಪ್ರತಿ ಸೆಕೆಂಡಿಗೆ 534 ಘನ ಅಡಿ ನೀರನ್ನು ತಮಿಳುನಾಡಿನ ರೈತರನ್ನು ಸಂಪರ್ಕಿಸದೇ ಬಿಡುಗಡೆ ಮಾಡಿದೆ ಎಂಬ ವರದಿಗಳು ಹಬ್ಬಿದ್ದವು. ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಪ್ರಯೋಜನ ಪಡೆಯುವ ತಮಿಳುನಾಡಿನ ಮಧುರೈ, ದಿಂಡಿಗಲ್, ರಾಮನಾಥಪುರಂ ಮತ್ತು ಶಿವಗಂಗಾ ಜಿಲ್ಲೆಗಳ ರೈತರು ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ 142 ಅಡಿಗಳಷ್ಟು ನೀರನ್ನು ಸಂಗ್ರಹಿಸದಿರಲು ನಿಯಮ ರೇಖೆ ಕಾರಣ ಎಂದು ಹೇಳುತ್ತಾರೆ. ಕೃಷಿ ಒಕ್ಕೂಟಗಳು ಕೂಡ ಈ ನಿಯಮ ರೇಖೆಯನ್ನು ಬಲವಾಗಿ ಖಂಡಿಸಿವೆ.

2018ರ ಭೀಕರ ಪ್ರವಾಹ ಪರಿಸ್ಥಿತಿ

2018ರ ಭೀಕರ ಪ್ರವಾಹ ಪರಿಸ್ಥಿತಿ

ಈ ನಿಯಮ ರೇಖೆಯೇ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಬಿಡಲು ಕಾರಣ ಎನ್ನಲಾಗಿದೆ. ನಿಯಮ ರೇಖೆ ಎನ್ನುವುದು ವರ್ಷದ ವಿವಿಧ ಸಮಯಗಳಲ್ಲಿ ಜಲಾಶಯದಲ್ಲಿ ನಿರ್ವಹಿಸಲಾದ ಸಂಗ್ರಹಣೆ ಅಥವಾ ಖಾಲಿ ಜಾಗವನ್ನು ವ್ಯಾಖ್ಯಾನಿಸುವ ಅಳತೆಯಾಗಿದೆ. ಮಧ್ಯ ಕೇರಳದಲ್ಲಿ ಬೀಸುತ್ತಿರುವ ಬಲವಾದ ಮಾನ್ಸೂನ್ ಮಾರುತಗಳಿಂದ ಉಂಟಾದ ಹೆಚ್ಚಿನ ತೀವ್ರತೆಯ ಮಳೆಯಿಂದಾಗಿ ಕೇರಳಕ್ಕೆ ಮತ್ತೊಮ್ಮೆ 2018ರ ರೀತಿಯ ಪ್ರವಾಹದಂತಹ ಪರಿಸ್ಥಿತಿ ಮರುಕಳಿಸುವಂತಿದೆ ಎಂದು ವರದಿಗಳು ಇತ್ತೀಚೆಗೆ ಹೇಳಿದ್ದವು.

English summary
Tamil Nadu chief minister M. K. Stalin told Kerala Chief Minister Pinarayi Vijayan that Mullaperiyar Dam is safe in all aspects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X