ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು: ಕತ್ತೆಗಳ ಮೇಲೆ ಇವಿಎಂ, ವಿವಿಪ್ಯಾಟ್ ಸಾಗಣೆ

|
Google Oneindia Kannada News

ಚೆನ್ನೈ, ಏಪ್ರಿಲ್ 6: ಚುನಾವಣೆಗೆ ಬಳಸುವ ವಿದ್ಯುನ್ಮಾನ ಮತ ಯಂತ್ರಗಳನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗುವ ಸರ್ಕಾರಿ ಬಸ್ ಅಥವಾ ವಾಹನದಲ್ಲಿ ಅಧಿಕಾರಿಗಳ ಬೆಂಗಾವಲಿನಲ್ಲಿ ಸಾಮಾನ್ಯವಾಗಿ ಸಾಗಿಸಲಾಗುತ್ತದೆ. ಆದರೆ ತಮಿಳುನಾಡಿನ ಈರೋಡ್, ದಿಂಡಿಗಲ್ ಮತ್ತು ಧರ್ಮಾಪುರಿಗಳಲ್ಲಿ ಇವಿಎಂಗಳನ್ನು ಸಾಗಿಸಿದ ಬಗೆ ವಿಭಿನ್ನ.

ತಮಿಳುನಾಡಿನಲ್ಲಿ ಮಂಗಳವಾರ ಒಂದೇ ಹಂತದಲ್ಲಿ ಎಲ್ಲ 234 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಸಾಗಿಸಿದ ರೀತಿಯ ವಿಡಿಯೋಗಳು ವೈರಲ್ ಆಗಿವೆ. ಈ ಎರಡು ಜಿಲ್ಲೆಗಳ ಗ್ರಾಮಗಳಲ್ಲಿ ಇವಿಎಂ ಸಾಗಿಸಲು ಕತ್ತೆಗಳನ್ನು ಬಳಸಿಕೊಳ್ಳಲಾಗಿದೆ.

ಅಸಲಿಗೆ, ಮತ ಹಾಕಲು ನಟ ವಿಜಯ್ ಸೈಕಲ್‌ನಲ್ಲಿ ಬಂದಿದ್ದೇಕೆ? ಇಲ್ಲಿದೆ ನಿಜ ಕಾರಣಅಸಲಿಗೆ, ಮತ ಹಾಕಲು ನಟ ವಿಜಯ್ ಸೈಕಲ್‌ನಲ್ಲಿ ಬಂದಿದ್ದೇಕೆ? ಇಲ್ಲಿದೆ ನಿಜ ಕಾರಣ

ಈರೋಡ್‌ನ ಅಂತಿಯೂರ್ ವಿಧಾನಸಭೆ ವ್ಯಾಪ್ತಿಯಲ್ಲಿನ ಕದಿರಿಮಲೈ ಗ್ರಾಮ, ದಿಂಡಿಗಲ್ ಜಿಲ್ಲೆಯ ನಥಾಮ್ ಮತ್ತು ಧರ್ಮಾಪುರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಇವಿಎಂ, ವಿವಿಪ್ಯಾಟ್ ಮತ್ತು ಮತದಾನದ ಇತರೆ ಸಾಮಗ್ರಿಗಳನ್ನು ಮತಗಟ್ಟೆಗೆ ಕತ್ತೆಗಳ ಮೇಲಿರಿಸಿ ಸಾಗಿಸಲಾಗಿದೆ. ಕತ್ತೆಗಳ ಜತೆಗೆ ಪೊಲೀಸರು, ಚುನಾವಣಾ ಅಧಿಕಾರಿಗಳು ನಡೆದು ಸಾಗಿದ್ದಾರೆ.

ಬೆಟ್ಟ ಪ್ರದೇಶಗಳಲ್ಲಿರುವ ಈ ಭಾಗಕ್ಕೆ ಸರಿಯಾದ ರಸ್ತೆ ಸೌಕರ್ಯಗಳಿಲ್ಲದಿರುವುದರಿಂದ, ವಾಹನಗಳ ಓಡಾಟ ಸಾಧ್ಯವಿಲ್ಲ. ಹೀಗಾಗಿ ಹಿಂದಿನಿಂದಲೂ ಇಲ್ಲಿ ಮತದಾನದ ಸಾಮಗ್ರಿಗಳನ್ನು ಸಾಗಿಸಲು ಕತ್ತೆಗಳನ್ನು ಬಳಸಲಾಗುತ್ತಿದೆ.

 Donkeys Carry EVMs To Polling Booths In Erode, Dharmapuri And Dindigul: Viral Video

ಧರ್ಮಾಪುರಿಯಲ್ಲಿ ಇರುವ ಐದೂ ವಿಧಾನಸಭೆ ಕ್ಷೇತ್ರಗಳಲ್ಲಿ ವಾಹನ ಸಂಚಾರ ಕಷ್ಟಕರವಾದ ಬೆಟ್ಟ ಪ್ರದೇಶಗಳಿವೆ. ಹೀಗಾಗಿ ಇಲ್ಲಿ ಕೂಡ ಕತ್ತೆಗಳನ್ನು ಅನಿವಾರ್ಯವಾಗಿ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Tamil Nadu Assembly Election 2021: A video goes viral of donkeys carrying EVMs, VV Pats and other poll materials to the polling booth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X