ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ತೆ-ನಾಯಿ ಮದುವೆಮಾಡಿ ಚೆನ್ನೈನಲ್ಲಿ ಪ್ರೇಮಿಗಳ ದಿನ ಆಚರಣೆ!

|
Google Oneindia Kannada News

ಚೆನ್ನೈ, ಫೆಬ್ರವರಿ 14: ಪ್ರೇಮಿಗಳ ದಿನದ ಆಹ್ಲಾದದಲ್ಲಿ ಹಲವರು ಮುಂದೇಳುತ್ತಿದ್ದರೆ, ಮಷ್ಟು ಜನ ಇದು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಎಂದು ವಿರೋಧಿಸುತ್ತಿದ್ದಾರೆ.

ಚೆನ್ನೈನಲ್ಲಿ ಮಾತ್ರ ಪ್ರೇಮಿಗಳ ದಿನವನ್ನು ಮದುವೆ ಮಾಡುವ ಮೂಲಕ ವಿರೋಧಿಸಲಾಗಿದೆ! ಅದೂ ಎಂಥ ಮದುವೆ ಅಂತೀರಿ...! ಕತ್ತೆ-ನಾಯಿ ಮದುವೆ!

ಪ್ರೇಮಿಗಳ ದಿನದಂದು ಜೀಕುತ್ತಿದೆ 'ಜೋಕು' ಜೋಕಾಲಿ!ಪ್ರೇಮಿಗಳ ದಿನದಂದು ಜೀಕುತ್ತಿದೆ 'ಜೋಕು' ಜೋಕಾಲಿ!

ಹೌದು ಚೆನ್ನೈಯಲ್ಲಿ ಭಾರತ್ ಹಿಂದು ಫ್ರಂಟ್ ಸಂಘಟನೆಯ ಕಾರ್ಯಕರ್ತರು ಕತ್ತೆ ಮತ್ತು ನಾಯಿಯನ್ನು ಸಿಂಗರಿಸಿ, ಸಕಲ ವಿಧಿ ವಿಧಾನಗಳ ಮೂಲಕ ಮದುವೆ ಮಾಡುವ ಮೂಲಕ ಪ್ರೇಮಿಗಳ ದಿನವನ್ನು ವಿರೋಧಿಸಿದರು.

Dog, donkey married amid Valentine's Day protest in Chennai

ನಾಯಿ ಮತ್ತು ಕತ್ತೆಗಳಿಗೆ ಮಾಲೆಯನ್ನು ಹಾಕಿ, ಅವುಗಳ ಹಣೆಗೆ ಕುಂಕುಮ, ಅರಿಶಿಣ ಬಡಿದು ಸಾಂಪ್ರದಾಯಿಕವಾಗಿ ಮದುವೆ ಮಾಡಲಾಗಿದೆ! ನಂತರ ಪ್ರೇಮಿಗಳ ದಿನದ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ.

ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆದಿದ್ದಾರೆ.

English summary
To protest against Valentine's Daycelebration, Bharat Hindu Front cadres on Wednesday performed marriage rituals between a dog and a donkey in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X