• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

7 ವರ್ಷದ ಬಾಲಕನ ಬಾಯಲ್ಲಿತ್ತು ಬರೋಬ್ಬರಿ 526 ಹಲ್ಲು

|

ಚೆನ್ನೈ, ಆಗಸ್ಟ್ 1: ಮನುಷ್ಯನ ಬಾಯಲ್ಲಿ ಸಾಮಾನ್ಯವಾಗಿ ಎಷ್ಟು ಹಲ್ಲುಗಳಿರಬಹುದು? ಹಲ್ಲುಗಳ ಸಾಲಿನಲ್ಲಿ ಒಂದಷ್ಟು ಸಮಸ್ಯೆಯಾಗಿ ಅಡ್ಡಾದಿಡ್ಡಿಯಾಗಿ ಹಲ್ಲುಗಳು ಹುಟ್ಟಿದರೂ ಗರಿಷ್ಠ 33-34ರವರೆಗೆ ಮೂಡಬಹುದು. ಆದರೆ, ಇಲ್ಲೊಬ್ಬ ಬಾಲಕನ ಬಾಯಿ ಪರೀಕ್ಷಿಸಿದ ದಂತ ವೈದ್ಯರು ಅಕ್ಷರಶಃ ಕಂಗಾಲಾಗಿದ್ದರು. ಏಕೆಂದರೆ ಆತನ ಬಾಯಲ್ಲಿ ಇದ್ದದ್ದು ಬರೋಬ್ಬರಿ 526 ಹಲ್ಲುಗಳು.

ತಮಿಳುನಾಡಿನ ಚೆನ್ನೈನ ಏಳು ವರ್ಷದ ಬಾಲಕನೊಬ್ಬನ ಬಾಯಲ್ಲಿದ್ದ 526 ಹಲ್ಲುಗಳನ್ನು ದಂತ ವೈದ್ಯರು ಹೊರತೆಗೆದಿದ್ದಾರೆ. ಅಂದ ಹಾಗೆ ಆತನ ಬಾಯಲ್ಲಿ ಈ ಎಲ್ಲ ಹಲ್ಲುಗಳು ಉಳಿದ ಹಲ್ಲುಗಳಂತೆ ದಂತಪಂಕ್ತಿಯಲ್ಲಿ ಇರಲಿಲ್ಲ.

ನೆರೆ ಮನೆ ನಾಯಿ ಜತೆ ಅನೈತಿಕ ಸಂಬಂಧ; ತನ್ನ ಮನೆ ನಾಯಿಯ ಹೊರಹಾಕಿದ ಮಾಲೀಕ

ತನ್ನ ಕೆಳದವಡೆಯ ಭಾಗದಲ್ಲಿ ಊತ ಉಂಟಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ಪಿ. ರವೀಂದ್ರನ್ ಎಂಬ ಬಾಲಕನನ್ನು ಜುಲೈ 11ರಂದು ಚೆನ್ನೈನ ಸವಿತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಗಿತ್ತು. ಆತನ ಬಾಯನ್ನು ಎಕ್ಸ್‌ರೇ ತೆಗೆದ ವೈದ್ಯರಿಗೆ ಕಾಣಿಸಿದ್ದು, 526 ಸಣ್ಣ ಸಣ್ಣ ಹಲ್ಲುಗಳಿದ್ದ ಚೀಲದಂತಹ ಗಡ್ಡೆ. ಈ ಗಡ್ಡೆ ಸುಮಾರು 200 ಗ್ರಾಂ ತೂಕವಿತ್ತು.

ದವಡೆಯ ಭಾಗದೊಳಗೆ ವಿವಿಧ ಹಂತಗಳಲ್ಲಿ ಗಟ್ಟಿಯಾದ ಗಡ್ಡೆಯ ರಚನೆ ಬೆಳೆದಿತ್ತು. ಆ ಬಾಲಕ ಅತ್ಯಂತ ಅಪರೂಪದ 'ಕಾಂಪೌಂಡ್ ಕಾಂಪೋಸಿಟ್ ಒಡೊಂಟೊಮಾ' ಎಂಬ ಸಮಸ್ಯೆಯಿಂದ ಬಳಲುತ್ತಿದ್ದ. ಅಷ್ಟೊಂದು ಸಂಖ್ಯೆಯ ಪುಟಾಣಿ ಹಲ್ಲುಗಳನ್ನು ಹೊಂದಿರುವ ಪ್ರಕರಣ ಜಗತ್ತಿನಲ್ಲಿ ಇದುವರೆಗೂ ದಾಖಲಾಗಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಮಗನಿಗೆ ಮೂರು ವರ್ಷವಾಗಿದ್ದಾಗಿನಿಂದಲೂ ದವಡೆಯಲ್ಲಿ ಊತ ಆರಂಭವಾಗಿತ್ತು ಎಂದು ಬಾಲಕನ ತಂದೆ ಪ್ರಭು ತಿಳಿಸಿದ್ದಾರೆ. 2014ರಲ್ಲಿ ಮುಂಬೈನಲ್ಲಿ ಇದೇ ರೀತಿಯ ಪ್ರಕರಣ ದಾಖಲಾಗಿತ್ತು. ಬಾಲಕನೊಬ್ಬನ ಬಾಯಲ್ಲಿ ಇದ್ದ ಗಡ್ಡೆಯಿಂದ 232 ಹಲ್ಲುಗಳನ್ನು ಹೊರತೆಗೆಯಲಾಗಿತ್ತು.

ಜಾರ್ಖಂಡ್ ನಲ್ಲಿ ಹತ್ತು ದಿನ ಹಸಿವಿನಲ್ಲಿದ್ದು ಮೃತಪಟ್ಟ 40ರ ಹರೆಯದ ವ್ಯಕ್ತಿ

ಏನಿದು ಒಡೊಂಟೊಮಾ?

ಒಡೊಂಟೊಮಾ ಎನ್ನುವುದು ಹಲ್ಲಿನ ಬೆಳವಣಿಗೆ ಸಂಬಂಧಿಸಿದ ಗಡ್ಡೆ. ಇದು ಕ್ಯಾನ್ಸರ್ ಕಾರಕವಲ್ಲದ ಕಾರಣ ತೀವ್ರ ಮಾರಕವಲ್ಲ. ಇದು ಸಹಜವಾಗಿಯೇ ಬೆಳೆಯುವ ಹಲ್ಲಿನ ಗುಣಗಳಿಂದ ಸಂರಚಿತವಾಗಿದ್ದರೂ, ಅಸಹಜ ರೀತಿಯಲ್ಲಿ ಬೆಳೆಯುತ್ತದೆ. ಇದರಲ್ಲಿ ಕಠಿಣ ಮತ್ತು ಮೃದು ಎರಡೂ ಬಗೆಯ ಅಂಗಾಂಶಗಳಿರುತ್ತವೆ.

ಒಡೊಂಟೊಮಾ ಸಾಮಾನ್ಯವಾಗಿ 14 ವರ್ಷದ ಒಳಗಿನವರಲ್ಲಿ ಕಾಣಿಸಿಕೊಳ್ಳುತ್ತದೆ. ನಿರೀಕ್ಷಿತ ಅವಧಿಯಲ್ಲಿ ಹಲ್ಲುಗಳು ಬೆಳೆಯುವಲ್ಲಿ ವಿಫಲವಾದಾಗ ಮತ್ತು ಬೆಳೆಯದ ಒಂದೆರಡು ಹಲ್ಲುಗಳೊಂದಿಗೆ ಈ ಸಮಸ್ಯೆ ಉದ್ಭವಿಸುತ್ತದೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ದವಡೆಯ ಮೇಲೆ ಪರಿಣಾಮ ಬೀರಿದ ನಿದರ್ಶನಗಳಾಗಿದ್ದರೂ, ಬಾಯಿ ಹುಳುಕಿನೊಂದಿಗೆ ಕಾಣಿಸಿಕೊಂಡ ಪ್ರಕರಣಗಳೂ ಇವೆ. ಇದು ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಡುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ತೆಗೆದುಹಾಕಲಾಗುತ್ತದೆ.

English summary
Doctors in Chennai had extracted 526 teeth from the mouth of a 7 year old boy. The rare case of Compound Composite Odontoma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X