ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೇಕೆದಾಟು' ಯೋಜನೆ ಕೈಬಿಡುವಂತೆ ಯಡಿಯೂರಪ್ಪಗೆ ಸ್ಟಾಲಿನ್ ಪತ್ರ

|
Google Oneindia Kannada News

ಚೆನ್ನೈ, ಜುಲೈ 05: ಮೇಕೆದಾಟು ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪತ್ರ ಬರೆದಿದ್ದಾರೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಆರಂಭಿಸಲಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಬಿಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮೇಕೆದಾಟು ವಿವಾದ; ಸಮಿತಿ ರಚಿಸಿದ್ದ ಆದೇಶಕ್ಕೆ ತಡೆ ಮೇಕೆದಾಟು ವಿವಾದ; ಸಮಿತಿ ರಚಿಸಿದ್ದ ಆದೇಶಕ್ಕೆ ತಡೆ

ನೀರಿನ ಬಳಕೆಯ ದಕ್ಷತೆ ಹೆಚ್ಚಿಸಲು ಆಧುನೀಕರಣ ಮತ್ತು ಸುಧಾರಣೆಗಳು ಬೇಕಾಗುತ್ತವೆ. ನ್ಯಾಯಾಲಯದ ಆದೇಶದ ಪ್ರಕಾರ ಪೂರೈಕೆಯಾಗುವ ನೀರಿನಲ್ಲಿ, ನೀರಿನ ಬೇಡಿಕೆಯನ್ನು ಪೂರೈಸಲು ಎಂದು ಸ್ಟಾಲಿನ್ ವಿವರಿಸಿದ್ದಾರೆ. ಈ ಸಂಗತಿಗಳನ್ನು ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ. ಮೇಕೆದಾಟು ಯೋಜನೆಯನ್ನು ಕೈಬಿಡುವಂತೆ ಅವರು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

Do Not Pursue Mekedatu Project: Stalin To Yediyurappa

'' ಈ ಯೋಜನೆಯಿಂದ ಉಭಯ ರಾಜ್ಯಗಳ ಸಂಬಂಧ ಹಾಗೂ ಸೌಹಾರ್ದತೆ ಹಾಳಾಗಲಿದೆ ಎಂದಿದ್ದಾರೆ. ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಈಗಾಗಲೇ ಕುಡಿಯಲು ಸಾಕಷ್ಟು ಮೂಲಸೌಕರ್ಯಗಳನ್ನು ಹೊಂದಿದೆ.

ಕೇವಲ 4.75 ಟಿಎಂಸಿಯನ್ನು ಕುಡಿಯುವ ನೀರಿಗಾಗಿ 67.16 ಟಿಎಂಸಿ ನೀರಿನ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಜಲಾಯಶ ನಿರ್ಮಿಸಲು ಮುಂದಾಗಿರುವುದು ಸ್ವೀಕಾರರ್ಹವಲ್ಲ'' ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ದುರದೃಷ್ಟವಶಾತ್, ಕಾವೇರಿ ನದಿ ನೀರಿನ ವಿವಾದ ಬಹುಕಾಲ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಅದರ ತಟದಲ್ಲಿನ ನೀರಾವರಿ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ತಮಿಳುನಾಡಿಗೆ ನೀರು ಪೂರೈಕೆಯ ಕೊರತೆ ಎದುರಾಗಲಿದೆ. ಈಗ ತಮಿಳುನಾಡಿನ ನೀರಿನ ಪಾಲನ್ನು ನ್ಯಾಯಾಲಯ ನಿಗದಿಪಡಿಸಿದೆ. ಆದರೆ, ಈ ನೀರಿನ ಸಮರ್ಥ ಬಳಕೆಯಾದಲ್ಲಿ ಮಾತ್ರ ಅದು ಉಪಯೋಗಕಾರಿಯಾಗಲಿದೆ.

English summary
Tamil Nadu on Sunday lodged its strong protest over Karnataka’s move to construct a reservoir in Mekedatu across River Cauvery and nudged the neighbouring state not to pursue the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X