ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಡಿಎಂಕೆ ಸಂಸದನ ಪುತ್ರ ಬಿಜೆಪಿ ಸೇರ್ಪಡೆ!

|
Google Oneindia Kannada News

ಚೆನ್ನೈ, ಮೇ 09; ತಮಿಳುನಾಡಿನ ರಾಜಕೀಯದಲ್ಲಿ ಬಲಿಷ್ಠವಾಗಿ ಬೆಳೆಯಲು ಬಿಜೆಪಿ ಪ್ರಯತ್ನ ನಡೆಸಿದೆ. ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ.

ಭಾನುವಾರ ಚೆನ್ನೈನ ಬಿಜೆಪಿ ಮುಖ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಸಮ್ಮುಖದಲ್ಲಿ ಸೂರ್ಯ ಶಿವ ಬಿಜೆಪಿ ಸೇರಿದರು.

ತಮಿಳುನಾಡಿನ ನೀಟ್ ವಿರೋಧಿ ಮಸೂದೆಗೆ ರಾಷ್ಟ್ರಪತಿ ಅಂಗೀಕಾರ ಸಿಗದು: ಅಣ್ಣಾಮಲೈ ತಮಿಳುನಾಡಿನ ನೀಟ್ ವಿರೋಧಿ ಮಸೂದೆಗೆ ರಾಷ್ಟ್ರಪತಿ ಅಂಗೀಕಾರ ಸಿಗದು: ಅಣ್ಣಾಮಲೈ

ಸೂರ್ಯ ಶಿವ ಡಿಎಂಕೆ ನಾಯಕನ ಪುತ್ರ. ಸೂರ್ಯ ಶಿವ ತಂದೆ ತಿರುಚಿ ಶಿವ ಡಿಎಂಕೆಯ ನಾಯಕರು ಮತ್ತು ಪ್ರಸ್ತುತ ರಾಜ್ಯಸಭಾ ಸದಸ್ಯರು. ಬಿಜೆಪಿ ಸೇರಿದ ಬಳಿಕ ಮಾತನಾಡಿದ ಸೂರ್ಯ ಶಿವ ಡಿಎಂಕೆ ತಮಿಳರ ಪಕ್ಷವಾಗಿ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಟ್ವಿಟ್ಟರ್‌ನಲ್ಲಿ 'ಅಣ್ಣಾಮಲೈ ಅರೆಸ್ಟ್‌' ಟ್ರೆಂಡಿಂಗ್ ಏನಿದರ ಹಿಂದಿನ ಕಥೆ ?ಟ್ವಿಟ್ಟರ್‌ನಲ್ಲಿ 'ಅಣ್ಣಾಮಲೈ ಅರೆಸ್ಟ್‌' ಟ್ರೆಂಡಿಂಗ್ ಏನಿದರ ಹಿಂದಿನ ಕಥೆ ?

DMK MP Trichy Siva Son Joined BJP

"ಡಿಎಂಕೆ ಪಕ್ಷದಲ್ಲಿ ನನ್ನ ಕೆಲಸಗಳಿಗೆ ಬೆಲೆ ಸಿಗಲಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಸೀಟುಗಳನ್ನು ಗೆಲ್ಲಲಿದೆ" ಎಂದು ಸೂರ್ಯ ಶಿವ ವಿಶ್ವಾಸ ವ್ಯಕ್ತಪಡಿಸಿದರು.

 ಲೈಂಗಿಕ ಹಗರಣ: ತಮಿಳುನಾಡು ಬಿಜೆಪಿ ಮುಖಂಡನ ರಾಜೀನಾಮೆ, ಅಣ್ಣಾಮಲೈ ಹೇಳಿದ್ದೇನು? ಲೈಂಗಿಕ ಹಗರಣ: ತಮಿಳುನಾಡು ಬಿಜೆಪಿ ಮುಖಂಡನ ರಾಜೀನಾಮೆ, ಅಣ್ಣಾಮಲೈ ಹೇಳಿದ್ದೇನು?

"ತಮಿಳುನಾಡಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಕಾರ್ಯಕರ್ತರ ಶ್ರಮವನ್ನು ಅವರು ಗುರುತಿಸುತ್ತಾರೆ. ನನಗೆ ಪಕ್ಷದಲ್ಲಿ ಯಾವುದೇ ಹುದ್ದೆ ಬೇಡ. ಪಕ್ಷದ ಕಾರ್ಯಕರ್ತನಾಗಿ ನಾನು ಇರುತ್ತೇನೆ" ಎಂದು ಸೂರ್ಯ ಶಿವ ಹೇಳಿದರು.

"ಡಿಎಂಕೆ ಪಕ್ಷದಲ್ಲಿ ಶೀತಲ ಸಮರ ನಡೆಯುತ್ತಿದೆ. ದಯಾನಿಧಿ ಸ್ಟಾಲಿನ್ ಹೊಗಳಲು ಒಂದು ತಂಡವನ್ನೇ ಮಾಡಿಕೊಳ್ಳಲಾಗಿದೆ. ಡಿಎಂಕೆಯ ಇನ್ನೂ ಹಲವು ನಾಯಕರು ಶೀಘ್ರ ಬಿಜೆಪಿಗೆ ಬರಲಿದ್ದಾರೆ" ಎಂದು ತಿಳಿಸಿದರು.

English summary
DMK Rajya Sabha MP Trichy Siva son Surya Siva joined BJP in party headquarters at Chennai. Party’s state president K. Annamalai welcomed him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X