ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಗೆಲ್ಲಬೇಕೆಂದರೆ ಹಿಂದುತ್ವವೂ ಗೆಲ್ಲಬೇಕು: ತೇಜಸ್ವಿ ಸೂರ್ಯ

|
Google Oneindia Kannada News

ಸೇಲಂ, ಫೆಬ್ರವರಿ 22: ತಮಿಳುನಾಡುವ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಿಂದುತ್ವದ ವಿಚಾರವನ್ನು ಮುಂದಿಟ್ಟುಕೊಂಡು ಅಲ್ಲಿನ ಡಿಎಂಕೆ ಪಕ್ಷವನ್ನು ಎದುರಿಸಲು ಮುಂದಾಗಿದೆ. ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿಂದೂ ವಿರೋಧಿ ಮತ್ತು ಮುಂಬವರುವ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸಬೇಕು ಎಂದು ಬಿಜೆಪಿ ಸಂಸದ, ಪಕ್ಷದ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ರಾಜ್ಯ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಭಾನುವಾರ ಮಾತನಾಡಿದ ತೇಜಸ್ವಿ ಸೂರ್ಯ, ಬಿಜೆಪಿ ಮಾತ್ರವೇ ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಮತ್ತು ಉತ್ತೇಜಿಸುವ ಕೆಲಸ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ.

ಗೋದಾವರಿ,ಕಾವೇರಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ: ಪಳನಿಸ್ವಾಮಿ ಗೋದಾವರಿ,ಕಾವೇರಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ: ಪಳನಿಸ್ವಾಮಿ

'ಡಿಎಂಕೆಯು ಕೆಟ್ಟ ಮತ್ತು ವಿಷಪೂರಿತ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ, ಅದು ಹಿಂದೂ ವಿರೋಧಿಯಾಗಿದೆ. ಪ್ರತಿ ತಮಿಳಿಗನೂ ಹೆಮ್ಮೆಯ ಹಿಂದೂ. ಇದು ದೇಶದಲ್ಲಿಯೇ ಅತ್ಯಧಿಕ ದೇವಾಲಯಗಳಿರುವ ಪವಿತ್ರ ಭೂಮಿ. ತಮಿಳುನಾಡಿನ ಪ್ರತಿ ಅಂಗುಲವೂ ಪವಿತ್ರವಾಗಿದೆ. ಆದರೆ ಡಿಎಂಕೆ ಹಿಂದೂ ವಿರೋಧಿ. ನಾವು ಅದನ್ನು ಸೋಲಿಸಬೇಕು' ಎಂದು ಸೂರ್ಯ ಪ್ರತಿಪಾದಿಸಿದ್ದಾರೆ.

ತಮಿಳುನಾಡು, ಭಾಷೆಯನ್ನು ಪ್ರತಿನಿಧಿಸುತ್ತದೆ

ತಮಿಳುನಾಡು, ಭಾಷೆಯನ್ನು ಪ್ರತಿನಿಧಿಸುತ್ತದೆ

'ಭಾರತೀಯ ಜನತಾ ಪಕ್ಷ ಮಾತ್ರವೇ ಭಾರತದಲ್ಲಿನ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಹಾಗೂ ಉತ್ತೇಜಿಸುವ ಪಕ್ಷವಾಗಿದೆ. ತಮಿಳು ಉಳಿಯಬೇಕೆಂದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕೆಂದರೆ ಹಿಂದುತ್ವವೂ ಗೆಲ್ಲಬೇಕು. ಬಿಜೆಪಿಯು ತಮಿಳುನಾಡು ಮತ್ತು ತಮಿಳು ಭಾಷೆಯ ಸ್ಫೂರ್ತಿಯನ್ನು ಪ್ರತಿನಿಧಿಸುತ್ತದೆ' ಎಂದು ಹೇಳಿಕೊಂಡಿದ್ದಾರೆ.

"ಅಮ್ಮಾ" ಸರ್ಕಾರದಿಂದ ರೈತರಿಗೆ 24 ಗಂಟೆ ವಿದ್ಯುತ್; ಚುನಾವಣೆ ಸಮೀಪದಲ್ಲಿ ಸಿಎಂ ಘೋಷಣೆ

ಈಗ ಹಿಂದೂ ಮತ ಕೇಳುತ್ತಿದ್ದಾರೆ

ಈಗ ಹಿಂದೂ ಮತ ಕೇಳುತ್ತಿದ್ದಾರೆ

'ಡಿಎಂಕೆಯು ಒಂದು ಕುಟುಂಬದ ಪಕ್ಷ. ಆದರೆ ಬಿಜೆಪಿ ಪಕ್ಷದ ಕುಟುಂಬವಾಗಿದೆ. ಡಿಎಂಕೆಯ ವಿಷಪೂರಿತ ಹಿಂದೂ ವಿರೋಧಿ ಸಿದ್ಧಾಂತಗಳನ್ನು ಪ್ರಶ್ನಿಸಬೇಕಿದೆ. ಅಧಿಕಾರದಲ್ಲಿದ್ದಾಗ ಅವರು ಹಿಂದೂ ಸಂಸ್ಥೆಗಳು ಹಾಗೂ ನಂಬಿಕೆಗಳ ಮೇಲೆ ದಾಳಿ ನಡೆಸಿದ್ದರು. ಆದರೆ ಅಧಿಕಾರ ಕಳೆದುಕೊಂಡಾಗ ಹಿಂದೂ ಮತಗಳಿಗೆ ಬೇಡುತ್ತಿದ್ದಾರೆ. ಇದು ಮುಂದುವರೆಯುವುದಿಲ್ಲ' ಎಂದು ಹೇಳಿದ್ದಾರೆ.

ಮೋದಿ ಮೇಲೆ ಜನರ ನಂಬಿಕೆ

ಮೋದಿ ಮೇಲೆ ಜನರ ನಂಬಿಕೆ

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ದೃಷ್ಟಿಕೋನದ ಮೇಲೆ ತಮಿಳುನಾಡಿನ ಜನರು ನಂಬಿಕೆ ಇರಿಸಿಕೊಂಡಿದ್ದಾರೆ. ಅವರು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಎಐಎಡಿಎಂಕೆಯನ್ನು ಬಹುಮತದೊಂದಿಗೆ ಆಶೀರ್ವದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರನೇ ಎರಡರಷ್ಟು ಬಹುಮತ

ಮೂರನೇ ಎರಡರಷ್ಟು ಬಹುಮತ

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ತಮಿಳುನಾಡಿನ ಜನರು ಕಮಲ-ಎರಡು ಅಲೆಯ ಸಂಯೋಜನೆಯನ್ನು ಪ್ರೀತಿಸುತ್ತಾರೆ. ಇವು ಮಾತ್ರವೇ ರಾಜ್ಯಕ್ಕೆ ಸಮೃದ್ಧಿ ತಂದುಕೊಡಲಿವೆ. 234 ಸೀಟುಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
BJP MP Tejasvi Surya in Tamil Nadu said, DMK is anti-Hindu, so we must defeat it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X