ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂಗಳ ಸುರಕ್ಷತೆ ಬಗ್ಗೆ ಸ್ಟಾಲಿನ್ ಅನುಮಾನ: ಆಯೋಗಕ್ಕೆ ಪತ್ರ

|
Google Oneindia Kannada News

ಚೆನ್ನೈ, ಏಪ್ರಿಲ್ 16: ಚುನಾವಣೆ ಬಳಿಕ ಇವಿಎಂಗಳನ್ನು ಇರಿಸಿರುವ ಸ್ಟ್ರಾಂಗ್ ರೂಂಗಳ ಸುರಕ್ಷತೆ ಬಗ್ಗೆ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿರುವ ಸ್ಟಾಲಿನ್, ಇವಿಎಂಗಳು ಮತ್ತು ಸ್ಟ್ರಾಂಗ್ ರೂಂಗಳ ಸುರಕ್ಷತೆಗಾಗಿ ಚುನಾವಣಾ ಆಯೋಗ ರೂಪಿಸಿರುವ ಶಿಷ್ಟಾಚಾರಗಳನ್ನು ತಮಿಳುನಾಡಿನಲ್ಲಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

'ರಾಜ್ಯ ಅನೇಕ ಭಾಗಗಳಲ್ಲಿ ಇವಿಎಂಗಳನ್ನು ಸಂಗ್ರಹಿಸಿ ಇರಿಸಿರುವ ಸ್ಟ್ರಾಂಗ್ ರೂಂಗಳ ಆವರಣಗಳಲ್ಲಿ ನಿಯಮಾವಳಿಗಳ ಪಾಲನೆಯ ಕೊರತೆ ಇದೆ' ಎಂದು ಅವರು ಹೇಳಿದ್ದಾರೆ. ಸ್ಟ್ರಾಂಗ್ ರೂಂಗಳ ಒಳಗೆ ಕೆಲವು ಮುಚ್ಚಿದ ಕಂಟೇನರ್‌ಗಳನ್ನು ಸಾಗಿಸಿದ ಘಟನೆಗಳು ನಡೆದಿವೆ ಎಂದು ದೂರಿದ್ದಾರೆ.

ಕೊರೊನಾ 2ನೇ ಅಲೆ ಮಧ್ಯೆ ನೀಟ್ ಪರೀಕ್ಷೆ ನಡೆಸುವ ಅಗತ್ಯವಿದೆಯೇ: ಎಂಕೆ ಸ್ಟಾಲಿನ್ಕೊರೊನಾ 2ನೇ ಅಲೆ ಮಧ್ಯೆ ನೀಟ್ ಪರೀಕ್ಷೆ ನಡೆಸುವ ಅಗತ್ಯವಿದೆಯೇ: ಎಂಕೆ ಸ್ಟಾಲಿನ್

'ರಾಮನಾಥಪುರಂನಲ್ಲಿ 31 ಜನರು ಎರಡು ಲ್ಯಾಪ್‌ಟಾಪ್‌ಗಳೊಂದಿಗೆ ಸ್ಟ್ರಾಂಗ್ ರೂಂನ ಆವರಣವನ್ನು ಪ್ರವೇಶಿಸಿದ್ದರು. ಇವಿಎಂಗಳನ್ನು ಸಂಗ್ರಹಿಸಿರುವ ಕೊಠಡಿಯಲ್ಲಿಯೇ ಇರುವ ಕೆಲವು ಕಂಪ್ಯೂಟರ್‌ಗಳನ್ನು ಬಳಸಲು ಸ್ಟ್ರಾಂಗ್ ರೂಂ ಪ್ರವೇಶಿಸಿದ್ದರು ಎನ್ನುವುದು ಬಯಲಾಗಿದೆ. ಇವಿಎಂಗಳನ್ನು ಇರಿಸಿರುವ ನೆಯ್ವೇಲಿ ಅನ್ನಾ ವಿವಿ ಆವರಣಕ್ಕೆ ಮೂವರು ಕಂಪ್ಯೂಟರ್ ಪರಿಣತರು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಅವರಿಗೆ ಅಧಿಕಾರಿಗಳು ಪಾಸ್ ನೀಡಿದ್ದಾರೆ. ಆದರೆ ಅದಕ್ಕೆ ಕಾರಣ ತಿಳಿದಿಲ್ಲ' ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

DMK Chief MK Stalin Raises Doubts Over Safety Of EVMs, Strong Rooms

ತಿರುವಳ್ಳೂರ್‌ನಲ್ಲಿ ಕೂಡ ಅನಧಿಕೃತ ಜನರು ಒಳಗೆ ಪ್ರವೇಶಿಸಿದ್ದಾರೆ. ಇದಕ್ಕೆ ಕಾರಣ ಬಹಿರಂಗಪಡಿಸಿಲ್ಲ. ಅಲ್ಲದೆ 30 ನಿಮಿಷಗಳ ಕಾಲ ಇಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿರಲಿಲ್ಲ. ಇವಿಎಂಗಳು ಮತ್ತು ಸ್ಟ್ರಾಂಗ್ ರೂಂಗಳ ಸುರಕ್ಷತೆಗೆ ಆಯೋಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅನಧಿಕೃತ ವ್ಯಕ್ತಿಗಳು ಆವರಣ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

English summary
DMK Chief MK Stalin raised doubts over the safety of EVMs and strong rooms, said protocol not being followed in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X