ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಪಿಎಸ್ To ಇಪಿಎಸ್ ಪಾಲಿಟಿಕ್ಸ್: ತಡೆಯಾಜ್ಞೆಗೆ ನಿರಾಕರಿಸಿದ ಮದ್ರಾಸ್ ಹೈಕೋರ್ಟ್!

|
Google Oneindia Kannada News

ಚೆನ್ನೈ, ಜೂನ್ 23: ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದ ಕಾಯ್ದೆ ಕಾನೂನುಗಳನ್ನು ತಿದ್ದುಪಡಿ ಮಾಡಲು ಬುಧವಾರ ನಡೆದ ಪಕ್ಷದ ಸಾಮಾನ್ಯ ಸಮಿತಿ ಸಭೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ವಿಭಾಗೀಯ ಪೀಠ ಕಾಯ್ದಿರಿಸಿದೆ.

ಮದ್ರಾಸ್ ಹೈಕೋರ್ಟ್‌ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸದಸ್ಯ ಷಣ್ಮುಗಂ ಮನವಿಯನ್ನು ನ್ಯಾಯಮೂರ್ತಿ ಎಂ.ದುರೈಸ್ವಾಮಿ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಮೇಕೆದಾಟು ಯೋಜನೆ: ಮಧ್ಯಸ್ಥಿಕೆ ವಹಿಸುವಂತೆ ಮೋದಿಗೆ ತಮಿಳುನಾಡು ಸಿಎಂ ಒತ್ತಾಯಮೇಕೆದಾಟು ಯೋಜನೆ: ಮಧ್ಯಸ್ಥಿಕೆ ವಹಿಸುವಂತೆ ಮೋದಿಗೆ ತಮಿಳುನಾಡು ಸಿಎಂ ಒತ್ತಾಯ

ನ್ಯಾಯಮೂರ್ತಿ ಸುಂದರ್ ಮೋಹನ್ ಮೇಲ್ಮನವಿಯ ವಿಚಾರಣೆಗಾಗಿ ತಡರಾತ್ರಿಯೇ ನ್ಯಾಯಮೂರ್ತಿ ದುರೈಸಾಮಿ ನಿವಾಸಕ್ಕೆ ಆಗಮಿಸಿದ್ದರು. ಬುಧವಾರ ರಾತ್ರಿಯೇ ನಡೆದ ರಾಜಕೀಯ ಬೆಳವಣಿಗೆ ಮತ್ತು ಕೋರ್ಟ್ ಆದೇಶದ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಎಐಎಡಿಎಂಕೆ ಸಾಮಾನ್ಯ ಸಮಿತಿ ಸಭೆಗಿಲ್ಲ ಯಾವುದೇ ತಡೆ

ಎಐಎಡಿಎಂಕೆ ಸಾಮಾನ್ಯ ಸಮಿತಿ ಸಭೆಗಿಲ್ಲ ಯಾವುದೇ ತಡೆ

ಏಕ ನಾಯಕತ್ವಕ್ಕೆ ದಾರಿ ಮಾಡಿಕೊಡುವ ಬೈಲಾಗಳನ್ನು ತಿದ್ದುಪಡಿ ಮಾಡದಂತೆ ಗುರುವಾರ ಚೆನ್ನೈನಲ್ಲಿ ನಡೆಯಲಿರುವ ಎಐಎಡಿಎಂಕೆ ಸಾಮಾನ್ಯ ಸಮಿತಿ ಸಭೆಯನ್ನು ತಡೆಯಲು ಮದ್ರಾಸ್ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಸಹ-ಸಂಯೋಜಕ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಉಪ ಮುಖ್ಯಮಂತ್ರಿ ಪನ್ನೀರ್ ಸೇಲ್ವಂ ನಡುವಿನ ಭಿನ್ನಮತ ತೀವ್ರಗೊಂಡಿದೆ. ಆ ಮೂಲಕ ಎರಡೂ ಪಾಳಯಗಳು ತಮ್ಮ ಅಭಿಪ್ರಾಯಗಳಿಗೆ ಅಂಟಿಗೊಂಡಿದ್ದು, ಪಕ್ಷದಲ್ಲಿ ಏಕನಾಯಕತ್ವವು ಕೊನೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ.

ಜಯಲಲಿತಾ ನಿಧನದ ನಂತರ ಉಭಯ ನಾಯಕತ್ವ ಸೂತ್ರ

ಜಯಲಲಿತಾ ನಿಧನದ ನಂತರ ಉಭಯ ನಾಯಕತ್ವ ಸೂತ್ರ

ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ನಂತರ ಪನ್ನೀರ್ ಸೆಲ್ವಂ ಸಂಯೋಜಕರಾಗಿ, ಪಳನಿಸ್ವಾಮಿ ಸಹ ಸಂಯೋಜಕರಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಆ ಮೂಲಕ ಪಕ್ಷದಲ್ಲಿ ಉಭಯ ನಾಯಕತ್ವದ ಸೂತ್ರದ ಮೇಲೆ ನಡೆಯುತ್ತಿದೆ. ಇದರ ಮಧ್ಯೆ ಏಕ ನಾಯಕತ್ವವನ್ನು ಹೊಂದುವ ಉದ್ದೇಶದಿಂದ ಅವರ ಪಾಳಯವು ಜೂನ್ 23ರ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವುದಕ್ಕೆ ಮುಂದಾಗಿದೆ. ಆದರೆ ಪಕ್ಷದ ಕಾನೂನಿನ ಪ್ರಕಾರ, ತಮ್ಮ ಸಹಿ ಇಲ್ಲದೇ ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯ ಅಂಗೀಕರಿಸುವುದಕ್ಕೆ ಸಾಧ್ಯವಿಲ್ಲ ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಎಐಎಡಿಎಂಕೆ ಪಕ್ಷದಲ್ಲಿ ಹೆಚ್ಚಾದ ಏಕ ನಾಯಕತ್ವದ ಕೂಗು

ಎಐಎಡಿಎಂಕೆ ಪಕ್ಷದಲ್ಲಿ ಹೆಚ್ಚಾದ ಏಕ ನಾಯಕತ್ವದ ಕೂಗು

ಕಳೆದ ಜೂನ್ 14ರಂದು ನಡೆದ ಜಿಲ್ಲಾ ಕಾರ್ಯದರ್ಶಿ ಸಭೆಯ ನಂತರ ಪಕ್ಷದಲ್ಲಿ ಏಕ ನಾಯಕತ್ವಕ್ಕಾಗಿ ಕೂಗು ಕೇಳಿ ಬಂದಿತ್ತು. ಎರಡೂ ಶಿಬಿರಗಳು ಸಮಸ್ಯೆಯನ್ನು ಪರಿಹರಿಸಲು ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದರೂ ಅದು ಯಶಸ್ವಿಯಾಗಿರಲಿಲ್ಲ. ಎಐಎಡಿಎಂಕೆ ಸಹ-ಸಂಯೋಜಕರು ತಿರಸ್ಕರಿಸಿದ ಪಕ್ಷದಲ್ಲಿ "ಗೊಂದಲಮಯ ಪರಿಸ್ಥಿತಿ" ಯನ್ನು ಉಲ್ಲೇಖಿಸಿ ಸಾಮಾನ್ಯ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿ ಪನ್ನೀರ್ ಸೆಲ್ವಂಗೆ ಪಳನಿಸ್ವಾಮಿ ಪತ್ರ ಬರೆದಿದ್ದಾರೆ. ಅಸಲಿಗೆ ಓಪಿಎಸ್ ಗೆ ಹೋಲಿಸಿದರೆ ಇಪಿಎಸ್ ಹೆಚ್ಚಿನ ಶಾಸಕರು ಮತ್ತು ಜಿಲ್ಲಾ ಕಾರ್ಯದರ್ಶಿಗಳ ಬೆಂಬಲವನ್ನು ಹೊಂದಿದ್ದಾರೆ.

ತಮಿಳುನಾಡಿನಲ್ಲಿ ಓಪಿಎಸ್ ಟು ಇಪಿಎಸ್ ಪಾಲಿಟಿಕ್ಸ್!

ತಮಿಳುನಾಡಿನಲ್ಲಿ ಓಪಿಎಸ್ ಟು ಇಪಿಎಸ್ ಪಾಲಿಟಿಕ್ಸ್!

ತಮಿಳುನಾಡಿನಲ್ಲಿ ರಾಜಕೀಯ ಬೆಳವಣಿಗೆಗಳ ನಡುವೆಯೇ ಒಪಿಎಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಬಹುಕಾಲದ ನಿಷ್ಠಾವಂತ ನಾಯಕರು ಸಹ ಇದೀಗ ಇಪಿಎಸ್ ಪಾಳಯಕ್ಕೆ ಸೇರಿದ್ದಾರೆ. ಮಂಗಳವಾರ ತಿರುವಳ್ಳೂರು ಜಿಲ್ಲಾ ಕಾರ್ಯದರ್ಶಿ ಅಲೆಕ್ಸಾಂಡರ್ ಮತ್ತು ಪುದುಚೇರಿ ರಾಜ್ಯ ಕಾರ್ಯದರ್ಶಿ ಅನ್ಬಳಗನ್ ಕೂಡ ಇಪಿಎಸ್‌ಗೆ ಬೆಂಬಲ ನೀಡಿದರು.

ಜೂನ್ 23ರಂದು ನಡೆಯಲಿರುವ ಜನರಲ್ ಕೌನ್ಸಿಲ್ ಸಭೆಯಲ್ಲಿ ಎಐಎಡಿಎಂಕೆ ಸಹ-ಸಂಯೋಜಕ ಪಳನಿಸ್ವಾಮಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗುವುದು. ಪನ್ನೀರ್ ‌ಸೇಲ್ವಂ ಬಗ್ಗೆ ನಮಗೆ ಗೌರವವಿದೆ, ಆದರೆ ಅವರು ಪಕ್ಷದ ಕಾರ್ಯಕರ್ತರನ್ನು ಅರ್ಥಮಾಡಿಕೊಳ್ಳಬೇಕು. ಒಪಿಎಸ್ ಪಾಳೆಯ ನಡವಳಿಕೆ ಡಿಎಂಕೆಯ B ಟೀಮ್ ನಂತೆ ಇದೆ. ಏಕ ನಾಯಕತ್ವ ಎಐಎಡಿಎಂಕೆಗೆ ಅಗತ್ಯವಾಗಿದೆ ಎಂದು ಅನ್ಬಳಗನ್ ಹೇಳಿದ್ದಾರೆ.

ಕಳೆದ ಸೋಮವಾರವೇ ಎಐಎಡಿಎಂಕೆಯ ಹಿರಿಯ ನಾಯಕರು ಚೆನ್ನೈನ ವನಗಾರಂನ ಖಾಸಗಿ ಸಭಾಂಗಣದಲ್ಲಿ ಸಾಮಾನ್ಯ ಸಮಿತಿ ಸಭೆ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂಬಂಧ ಪಕ್ಷದ ಉಪ-ಸಂಯೋಜಕ ಕೆ.ಪಿ.ಮುನುಸ್ವಾಮಿ, ಮಾಜಿ ಸಚಿವ ಸಿ.ವಿ.ಷಣ್ಮುಗಂ, ತಂಗಮಣಿ, ವೇಲುಮಣಿ, ಆರ್.ಪಿ.ಉದಯಕುಮಾರ್, ದಿಂಡಿಗಲ್ ಶ್ರೀನಿವಾಸನ್, ಸೆಂಕೋಟ್ಟಯ್ಯನ್, ವಿಜಯಭಾಸ್ಕರ್, ಬೆಂಜಮಿನ್, ತಲವೈ ಸುಂದರಂ, ಎಐಎಡಿಎಂಕೆ ಉಪ ಪ್ರಧಾನ ಸಂಯೋಜಕ ಸೆಲ್ಯೂರ್ ರಾಜು, ಕದಂಪುರ್ ವಿಶ್ವನಾಥನ್ ರಾಜು, ಕದಂಪುರ್ ವಿಶ್ವನಾಥನ್ ರಾಜು ವ್ಯವಸ್ಥೆಗಳನ್ನು ಪರಿಶೀಲಿಸಿದ್ದರು.

English summary
A division bench has reserved the Madras High Court’s order of refusing to restrain the AIADMK general council meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X