ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಯಾಸ್ಪೊರಾ ಡಿಪ್ಲೊಮಸಿ: ವಿಜ್ಞಾನಿ ಗೀತಾಂಜಲಿ ಜೊತೆ ನೇರ ಚಾಟ್

|
Google Oneindia Kannada News

ಚೆನ್ನೈ: ಚೆನ್ನೈನಲ್ಲಿರುವ ಅಮೇರಿಕಾ ದೂತಾವಾಸವು ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನ ಅಮೇರಿಕಾ ದೂತಾವಾಸಗಳ ಸಮನ್ವಯದಲ್ಲಿ ಫೆಬ್ರವರಿ 11, ಶುಕ್ರವಾರದಂದು ಆಯೋಜಿಸಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತೀಯಮೂಲದ ಅಮೇರಿಕನ್ ಸಂಶೋಧಕಿ ಮತ್ತು ವಿಜ್ಞಾನಿ ಗೀತಾಂಜಲಿರಾವ್ ಅವರು ಭಾಗವಹಿಸಲಿದ್ದಾರೆ.

#ಡಯಾಸ್ಪೊರಾಡಿಪ್ಲೊಮಸಿ ಸರಣಿಯಲ್ಲಿನ ಆರನೇಕಾರ್ಯಕ್ರಮ ವರ್ಚುವಲ್ಆಗಿ ಫೆಬ್ರವರಿ 11, ಸಂಜೆ 6:45ಕ್ಕೆನಡೆಯಲಿದ್ದು, ಆಗ ಐದು ನಿಮಿಷಗಳ ಅವಧಿಯ "ಸರ್ಚ್ಆನ್: ಪಾಸಿಟಿವ್ಕರೆಂಟ್" ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ರಾವ್ ಅವರ ಆವಿಷ್ಕಾರಗಳಲ್ಲಿ ಒಂದಾದ ನೀರಿನಲ್ಲಿ ಸೀಸದ ಮಾಲಿನ್ಯವನ್ನು ಪತ್ತೆ ಹಚ್ಚುವ ಮೊಬೈಲ್ ಸಾಧನದ ವಿವರ ಇದರಲ್ಲಿದೆ.

"ವೈ ವೇಸ್ಟ್?" ಎನ್‌ಜಿಒ ಸಂಸ್ಥಾಪಕಿ, "ವಾಟರ್ ಗರ್ಲ್ಆಫ್ ಇಂಡಿಯಾ" ಎಂದೇ ಹೆಸರಾಗಿರುವ ಬೆಂಗಳೂರು ಮೂಲದ ಪರಿಸರಹೋರಾಟಗಾರ್ತಿ ಗರ್ವಿತಾ ಗುಲ್ಹಾಟಿ ಅವರು ಗೀತಾಂಜಲಿರಾವ್ ಅವರ ಸಂದರ್ಶನ ನಡೆಸಲಿದ್ದಾರೆ. ಈ ಸಂವಾದದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಪ್ರೀತಿಯಿಟ್ಟುಕೊಂಡಿರುವ ಭಾರತೀಯ ಮೂಲದ ಅಮೆರಿಕನ್ಎಂಬ ಗುರುತಿನಲ್ಲಿ ಬೆಳೆಯುವ ಪಯಣದ ಬಗ್ಗೆ ಮಾತನಾಡಲಿದ್ದಾರೆ. ಇದಲ್ಲದೆ STEM ಕಲಿತ ಹೆಣ್ಣುಮಕ್ಕಳು ಹೇಗೆ ವಿಶ್ವವನ್ನು ಬದಲಿಸಬಲ್ಲರು ಎಂಬ ಕನಸನ್ನು ಹಂಚಿಕೊಳ್ಳಲಿದ್ದಾರೆ. ಹಾಗೆಯೆ ಅಮೇರಿಕಾದಲ್ಲಿನ ಪ್ರಯೋಗಾತ್ಮಕ ಕಲಿಕೆಯ ಅವಕಾಶಗಳು ಮತ್ತುಅಮೇರಿಕನ್ ಶಾಲೆಗಳಲ್ಲಿ STEM ಶಿಕ್ಷಣದ ಕುರಿತು ಚರ್ಚಿಸಲಿದ್ದಾರೆ

Diaspora Diplomacy: Chat With Innovator, Author Gitanjali Rao on February 11

ಇದಕ್ಕೂ ಮುನ್ನ, ಚೆನ್ನೈನಲ್ಲಿರುವ ಅಮೇರಿಕಾ ದೂತಾವಾಸದ ಕಾನ್ಸಲೇಟ್ ಜನರಲ್ , "ನಮ್ಮ #ಡೈಸ್ಪೊರಾಡಿಪ್ಲೊಮಸಿ ಸರಣಿಯ ಭಾಗವಾಗಿ ನಡೆಯುತ್ತಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಗೀತಾಂಜಲಿರಾವ್ ಭಾಗವಹಿಸುವಿಕೆಗೆ ಉತ್ಸುಕರಾಗಿದ್ದೇವೆ. ಭಾರತದಲ್ಲಿನ U.S. ಮಿಷನ್ ಪರವಾಗಿ, ಗೀತಾಂಜಲಿ ಅವರಸಾಧನೆಗಳಿಗಾಗಿ ನಾನು ಶ್ಲಾಘಿಸುತ್ತೇನೆ, ಇದು ಯುವಜನರಿಗೆ, ವಿಶೇಷವಾಗಿ ಹುಡುಗಿಯರಿಗೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ತಮ್ಮಭವಿಷ್ಯದ ವೃತ್ತಿಜೀವನದಲ್ಲಿ STEM ವಿಷಯಗಳನ್ನು ಪರಿಗಣಿಸಲು ಸ್ಫೂರ್ತಿಯಾಗಿದೆ. ಯುನೈಟೆವ್ಪ್ ಸ್ಟೇಟ್ಸ್ STEM ಶಿಕ್ಷಣ ಮತ್ತುಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದೆ. ಯುನೈಟೆವ್ಪ್ ಸ್ಟೇಟ್ಸ್ ನಲ್ಲಿ ಅಧ್ಯಯನ ಮಾಡಲು ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಿ ಕೊಳ್ಳಬಯಸುವ ಆಸಕ್ತ ವಿದ್ಯಾರ್ಥಿಗಳನ್ನು ನಾವು ಸ್ವಾಗತಿಸುತ್ತೇವೆ," ಎಂದಿದ್ದಾರೆ.

ರಾವ್ ಅವರ ಆವಿಷ್ಕಾರಗಳು ಮತ್ತುಭಾರತ ಸೇರಿದಂತೆ ಜಗತ್ತಿನಾದ್ಯಂತ ಯುವಜನರಿಗಾಗಿ ಅವರು ನಡೆಸುವ STEM ಕಾರ್ಯಾಗಾರಗಳನ್ನುಗುರುತಿಸಿ 2020 ರಲ್ಲಿ TIME ನಿಯತಕಾಲಿಕ ಅದೇ ಮೊದಲ ಬಾರಿ ಸ್ಥಾಪಿಸಲಾದ "ಕಿಡ್ಆಫ್ ದ ಇಯರ್" ಪುರಸ್ಕಾರ ನೀಡಲಾಯಿತು. ಈವರ್ಚುವಲ್ ಪ್ರೋಗ್ರಾಂನಲ್ಲಿ ಭಾಗವಹಿಸಲು ಉಚಿತವಾಗಿ ನೋಂದಾಯಿಸಿ: ನೋಂದಣಿ ಲಿಂಕ್ ಇಲ್ಲಿದೆ (https://bit.ly/34gVmsx)

Recommended Video

ಮದರಸಾಗೆ ಹೇಗ್ ಹೋಗ್ಬೇಕು ಅಂತಾ ಪ್ರತಾಪ್ ಸಿಂಹ ಹೇಳಿಕೊಡ್ಬೇಕಾಗಿಲ್ಲ | Oneindia Kannada

English summary
All of 16, Gitanjali Rao is not just TIME's first-ever Kid of the Year, but also an innovator, changemaker, author and #STEM promotor. Watch her live as she joins us on International Day of Women and Girls in Science (February 11) for a #DiasporaDiplomacy chat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X