ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''2024ರ ಲೋಕಸಭೆ ಚುನಾವಣೆಯಲ್ಲಿ ಧೋನಿ ಸೆಣಸಾಡಲಿ''

|
Google Oneindia Kannada News

ಚೆನ್ನೈ, ಆ. 16: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಧೋನಿ ಅವರು ತಮ್ಮ ಕ್ರಿಕೆಟ್ ವೃತ್ತಿಯ ಇನ್ನಿಂಗ್ಸ್ ಮುಗಿಸಿರಬಹುದು, ಆದರೆ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಬರೆಯಲಿ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಬಯಸಿದ್ದಾರೆ.

ಧೋನಿ ನಿವೃತ್ತಿ ಬಗ್ಗೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ, ಎಂಎಸ್ ಧೋನಿ ಅವರು ಕ್ರಿಕೆಟ್ ನಿಂದ ಮಾತ್ರ ನಿವೃತ್ತಿ ಹೊಂದುತ್ತಿದ್ದಾರೆ ಅಷ್ಟೇ, ಅವರ ಪ್ರತಿಭೆ ಇಷ್ಟಕ್ಕೆ ಸೀಮಿತವಾಗಿಲ್ಲ. ಅವರ ಮುಂದಾಳತ್ವ, ಸ್ಪೂರ್ತಿಯಾಗಬೇಕು. ಕ್ರಿಕೆಟ್ ನಲ್ಲಿನ ನಾಯಕತ್ವ ಈಗ ಸಾರ್ವಜನಿಕ ಜೀವನಕ್ಕೆ ತಿರುಗಲಿ, 2024ರ ಲೋಕಸಭೆ ಚುನಾವಣೆಯಲ್ಲಿ ಧೋನಿ ಸ್ಪರ್ಧಿಸಲಿ ಎಂದಿದ್ದಾರೆ.

ಸ್ವಾಮಿ ಅವರ ಟ್ವೀಟ್ ಗೆ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಶ್ರೀಲಂಕಾದ ಸುನಿಲ್ ಗಮಗೆ ಅವರು ಟ್ವೀಟ್ ಮಾಡಿ, ಧೋನಿ ಮಾಜಿ ಕ್ರಿಕೆಟರ್ ಆಗಿರಲಿ, ರಾಜಕಾರಣಿಯಾಗುವುದು ಬೇಡ. ಶ್ರೀಲಂಕಾದಲ್ಲಿ ಅರ್ಜುನ ರಣತುಂಗ ಅವರು ರಾಜಕಾರಣಕ್ಕೆ ಬಂದು ಇಂದು ಯಾರಿಗೂ ಬೇಡದವರು ಎನಿಸಿಕೊಂಡಿದ್ದಾರೆ. ಧೋನಿ ಕ್ರಿಕೆಟ್ ಗೆ ಸೀಮಿತವಾಗಲಿ ಎಂದಿದ್ದಾರೆ.

Dhoni Should fight LS General Elections in 2024: MP Swamy

ಸುಶಾಂತ್ ಸಾವಿನ ಬಗ್ಗೆ ಒಂದು ಮಾತನಾಡದ ಧೋನಿ, ಸಾರ್ವಜನಿಕ ಜೀವನದಲ್ಲಿ ಏನು ಬದಲಾವಣೆ ತರಲು ಸಾಧ್ಯ ಎಂದು ಪರಮಿತಾ ಎಂಬುವರು ಪ್ರಶ್ನಿಸಿದ್ದಾರೆ.

English summary
M. S. Dhoni is retiring from Cricket but not from anything else. His talent-to be able to fight against odds and his inspiring leadership of a team that he has demonstrated in cricket is needed in public life. He should fight in LS General Elections in 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X