ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದರೋಡೆಕೋರರ ಕನಸು ನುಚ್ಚುನೂರು ಮಾಡಿದ್ದ ಅಪನಗದೀಕರಣ!

|
Google Oneindia Kannada News

ಚೆನ್ನೈ, ನವೆಂಬರ್ 13 : ಆ ಐವರು ಕಳ್ಳರು 'ದಿ ಗ್ರೇಟ್ ಟ್ರೇನ್ ರಾಬರಿ' ನಡೆಸಿ ಭರ್ತಿ 5.78 ಕೋಟಿ ರುಪಾಯಿನಷ್ಟು ಹಣವನ್ನು ಲೂಟಿ ಮಾಡಿದ್ದರು. ಐಷಾರಾಮಿ ಜೀವನಕ್ಕೆ ಇನ್ನೇನು ಬೇಕಿತ್ತು? ಆದರೆ, ಅವರ ಸಂತಸ ಹೆಚ್ಚು ದಿನ ಇರಲಿಲ್ಲ.

ಏಕೆಂದರೆ, ಅವರು ಲೂಟಿ ಹೊಡೆದ ಮೂರೇ ತಿಂಗಳಲ್ಲಿ ಕೇಂದ್ರ ಸರಕಾರ ಅಪನಗದೀಕರಣವನ್ನು ಜಾರಿಗೆ ತಂದಿತ್ತು. ಹಳೆ 500 ಮತ್ತು 1,000 ರುಪಾಯಿ ನೋಟುಗಳಿಗೆ ಕಡಿವಾಣ ಹಾಕಿತ್ತು. ಸಕ್ರಮವಾಗಿ ಕೂಡಿಟ್ಟಂಥ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.

ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ! ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!

ಆದರೆ, ಇವರಿಗೆ ಆ ಲೂಟಿ ಹೊಡೆದ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಎಲ್ಲಿಯ ಅವಕಾಶ? ಎಚ್ ಮೋಹನ್ ಸಿಂಗ್, ರುಸಿ ಪರ್ಡಿ, ಮಹೇಶ್ ಪರ್ಡಿ, ಕಾಲಿಯಾ ಅಲಿಯಾಸ್ ಕೃಷ್ಣ ಅಲಿಯಾಸ್ ಕಾಬು ಮತ್ತು ಬಿಲ್ತಿಯಾ ಎಂಬುವವರನ್ನು ಪೊಲೀಸರು 2016ರಲ್ಲಿಯೇ ಬಂಧಿಸಿದ್ದು, ಅವರನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಿ, ಇದೀಗ ಚೆನ್ನೈನ ಸೆಂಟ್ರಲ್ ಜೈಲಿಗೆ ಅಟ್ಟಲಾಗಿದೆ.

ಇಂಡಿಯನ್ ಓವರ್ ಸೀಸ್ ಬ್ಯಾಂಕ್ 342 ಕೋಟಿ ರುಪಾಯಿ ಹಳೆಯ ಹಣವನ್ನು ರಿಸರ್ವ್ ಬ್ಯಾಂಕ್ ಗೆ ರೈಲಿನ ಮುಖಾಂತರ ಸಾಗಿಸುತ್ತಿದ್ದಾಗ 2016ರ ಆಗಸ್ಟ್ 9ರ ರಾತ್ರಿ ಈ ದರೋಡೆ ನಡೆದಿದೆ. ಆದರೆ, ರೈಲು ಚೆನ್ನೈ ತಲುಪಿದರೂ ದರೋಡೆಯಾಗಿರುವುದು ಗಮನಕ್ಕೆ ಬಂದಿರಲಿಲ್ಲ. ನಂತರ, ಆಗಸ್ಟ್ 11ರಂದು ಈ ಆಘಾತಕರ ಸಂಗತಿ ಬೆಳಕಿಗೆ ಬಂದಿತ್ತು.

ಅವರು ದರೋಡೆ ಮಾಡಿದ್ದು ಹೇಗೆ?

ಅವರು ದರೋಡೆ ಮಾಡಿದ್ದು ಹೇಗೆ?

ಮೋಹನ್ ಸಿಂಗ್ ಮತ್ತು ಅವರ ಗ್ಯಾಂಗ್ ನ ಸದಸ್ಯರು ಮಧ್ಯ ಪ್ರದೇಶದಿಂದ 2016ರಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ತಮಿಳುನಾಡಿಗೆ ಬಂದಿದ್ದಾರೆ. ರೈಲ್ವೆ ಸ್ಟೇಷನ್, ಮೇಲ್ಸೇತುವೆ, ರೈಲ್ವೆ ಟ್ರಾಕ್ ಬಳಿ ಮುಂತಾದ ಪ್ರದೇಶಗಳಲ್ಲಿ ನೆಲೆಸಿ, ರೈಲು ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದನ್ನು ಗಮನಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದರು.

ಸೇಲಂನಲ್ಲಿ ನೆಲೆಸಿದ್ದ ಓಸ್ವ ಸದಸ್ಯನಿಂದ, ಸೇಲಂ-ಚೆನ್ನೈ ಎಕ್ಸ್ ಪ್ರೆಸ್ ರೈಲಿನ ಮುಖಾಂತರ ಹಣವನ್ನು ತೆಗೆದುಕೊಂಡು ಹೋಗಲಾಗುತ್ತದೆ ಎಂಬ ಸಂಗತಿ ಮೋಹನ್ ಮತ್ತು ಗ್ಯಾಂಗ್ ಗೆ ಗೊತ್ತಾಗಿದೆ. ಮೋಹನ್ ಸಿಂಗ್, ಕಾಲಿಯಾ, ರುಸಿ, ಬೆಲ್ತಿಯಾ ಅಯೋಥಿಯಾಪಟ್ಟಣಂ ಮತ್ತು ವಿರುದ್ಧಾಚಲಂ ನಡುವೆ ಒಂದು ವಾರಕ್ಕಿಂತ ಹೆಚ್ಚು ಅಡ್ಡಾಡಿ ಲೂಟಿ ಹೊಡೆಯುವ ಪ್ಲಾನ್ ರೂಪಿಸಿದ್ದಾರೆ.

ಅಪನಗದೀಕರಣದಂಥ ಯಡವಟ್ಟು ಮತ್ತೆ ಮಾಡಬೇಡಿ ಎಂದರು ಮನ್ ಮೋಹನ್ ಸಿಂಗ್ಅಪನಗದೀಕರಣದಂಥ ಯಡವಟ್ಟು ಮತ್ತೆ ಮಾಡಬೇಡಿ ಎಂದರು ಮನ್ ಮೋಹನ್ ಸಿಂಗ್

ಇಬ್ಬರು ಸರಾಗವಾಗಿ ಇಳಿದು ಹಣ ಕದ್ದಿದ್ದಾರೆ

ಇಬ್ಬರು ಸರಾಗವಾಗಿ ಇಳಿದು ಹಣ ಕದ್ದಿದ್ದಾರೆ

ಚಿನ್ನಸೇಲಂ ಮತ್ತು ವಿರುದ್ಧಾಚಲಂ ನಡುವೆ 45 ನಿಮಿಷಗಳ ಕಾಲ ಎಲ್ಲೂ ನಿಲ್ಲದೆ ರೈಲು ಸಂಚರಿಸುತ್ತದೆ ಎಂಬುದನ್ನು ಗಮನಿಸಿದ್ದಾರೆ. ಕಗ್ಗತ್ತಲ ರಾತ್ರಿಯಲ್ಲಿ ಯಾರೂ ತಮ್ಮನ್ನು ಗಮನಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅವರು ಚಿನ್ನಸೇಲಂನಲ್ಲಿ ಇನ್ನೇನು ಹೊರಡುವ ಸಮಯದಲ್ಲಿ ಆ ರೈಲನ್ನು ಏರಿದ್ದಾರೆ.

ಬ್ಯಾಟರಿ ಚಾಲಿತ ಮತ್ತು ಇತರ ಕಟ್ಟರ್ ಗಳನ್ನು ಬಳಸಿ ಪಾರ್ಸೆಲ್ ವ್ಯಾನ್ ಮೇಲೆ ಹತ್ತಿ ರಂಧ್ರ ಕೊರೆದಿದ್ದಾರೆ. ಆ ರಂಧ್ರದ ಮೂಲಕ ಇಬ್ಬರು ಇಳಿದು, ಕಟ್ಟಿಗೆಯ ಪೆಟ್ಟಿಗೆಗಳನ್ನು ಒಡೆದು ನಗದು ಬಂಡಲ್ ಗಳನ್ನು ಆರು ಲುಂಗಿಗಳಲ್ಲಿ ಸುತ್ತಿದ್ದಾರೆ ಎಂದು ಪೊಲೀಸರು ಮಾಧ್ಯಮಕ್ಕೆ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳ್ಳರಿಗೆ ಭರ್ಜರಿ ಹೊಡೆತ ನೀಡಿತ್ತು ಅಪನಗದೀಕರಣ

ಕಳ್ಳರಿಗೆ ಭರ್ಜರಿ ಹೊಡೆತ ನೀಡಿತ್ತು ಅಪನಗದೀಕರಣ

ಪ್ಲಾನ್ ಪ್ರಕಾರ, ಮಹೇಶ್ ಪರ್ಡಿ ಸೇರಿದಂತೆ ಕೆಲವರು ವಿರುದ್ಧಾಚಲಂ ರೈಲು ನಿಲ್ದಾಣದ ಬಳಿ ವಯಲೂರು ಓವರ್ ಬ್ರಿಜ್ ಹತ್ತಿರ ಕಾಯುತ್ತಿದ್ದ. ಅಲ್ಲಿ ಕಾಯುತ್ತಿದ್ದ ಮಹೇಶ್ ಮತ್ತಿರರಿಗೆ ಸಿಗುವಂತೆ ಆ ಲುಂಗಿಯಲ್ಲಿ ಕಟ್ಟಿದ್ದ ಹಣದ ಬಂಡಲ್ ಗಳನ್ನು ಎಸೆದು, ತಾವು ಕೂಡ ಕಗ್ಗತ್ತಲಲ್ಲಿ ಜಿಗಿದು ಪರಾರಿಯಾಗಿದ್ದಾರೆ.

ಪೊಲೀಸರ ಪ್ರಕಾರ, ಲೂಟಿ ಮಾಡಿದ ಹಣವನ್ನು ಎಲ್ಲ ಐವರು ತಮ್ಮತಮ್ಮಲ್ಲಿ ಹಂಚಿಕೊಂಡಿದ್ದಾರೆ. ಈ ನೋಟುಗಳನ್ನು ಬಳಸಲೂ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಈ ಎಲ್ಲ ನೋಟುಗಳು ಸವಕಳಿಯಾಗಿದ್ದವು ಮತ್ತು ಚಲಾವಣೆಗೆ ಬಾರದ ನೋಟುಗಳೇ ಆಗಿದ್ದವು. ಇದಾಗಿ ಮೂರೇ ತಿಂಗಳಲ್ಲಿ ಅಪನಗದೀಕರಣದ ಹೊಡೆತ ಬಿದ್ದಿದ್ದರಿಂದ ಬಳಸಲೂ ಆಗದೆ, ಬ್ಯಾಂಕಿಗೆ ತುಂಬಲೂ ಆಗದೆ ತಮ್ಮಲ್ಲಿಯೇ ಉಳಿಸಿಕೊಂಡಿದ್ದರು.

ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತುಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು

ಕದ್ದಿದ್ದು ಹೇಗೆ ಎಂಬುದು ಚಿದಂಬರ ರಹಸ್ಯವಾಗಿತ್ತು

ಕದ್ದಿದ್ದು ಹೇಗೆ ಎಂಬುದು ಚಿದಂಬರ ರಹಸ್ಯವಾಗಿತ್ತು

ತಮಾಷೆ ಅಂದ್ರೆ, ಈ ಭಾರೀ ರೈಲು ದರೋಡೆ ನಡೆದಾಗ ಆ ಎರಡೂ ಬೋಗಿಯಲ್ಲಿ ಭದ್ರತಾ ಸಿಬ್ಬಂದಿಗಳೇ ಇರಲಿಲ್ಲ. ಹೀಗಾಗಿ ಭದ್ರತಾ ಸಿಬ್ಬಂದಿಗಳೇ ಕೆಲವರೊಂದಿಗೆ ಶಾಮೀಲಾಗಿ, ರೈಲು ದರೋಡೆ ಮಾಡಿದೆ ಎಂದು ಊಹಿಸಲಾಗಿತ್ತು. ಅಷ್ಟೊಂದು ಪ್ರಮಾಣದ ಹಣ ಕದ್ದಿದ್ದು ಹೇಗೆ ಎಂಬುದು ಚಿದಂಬರ ರಹಸ್ಯವಾಗಿತ್ತು. ಆ ಎರಡೂ ಬೋಗಿಗಳಲ್ಲಿ ಸವಕಳಿಯಾಗ, ಚಲಾವಣೆಗೆ ಬಾರದ ಹಳೆಯ ನೋಟುಗಳನ್ನು ರವಾನಿಸಲಾಗುತ್ತಿತ್ತು. ಒಟ್ಟು 225 ಕಟ್ಟಿಗೆಯ ಪೆಟ್ಟಿಗೆಯಲ್ಲಿ 325 ಕೋಟಿ ರುಪಾಯಿ ಮೌಲ್ಯದ ನೋಟುಗಳನ್ನು ಸಾಗಿಸಲಾಗುತ್ತಿತ್ತು. ಹರಿದುಹೋದ ಈ ನೋಟುಗಳನ್ನು ನಾಶ ಮಾಡಲೆಂದು ರಿಸರ್ವ್ ಬ್ಯಾಂಕಿಗೆ ಸಾಗಿಸಲಾಗುತ್ತಿತ್ತು.

ಅಪನಗದೀಕರಣಕ್ಕೆ 2 ವರ್ಷ: ಕಪ್ಪುಹಣದ ಬಗ್ಗೆ ಜನಾಭಿಪ್ರಾಯ ಬಹಿರಂಗಅಪನಗದೀಕರಣಕ್ಕೆ 2 ವರ್ಷ: ಕಪ್ಪುಹಣದ ಬಗ್ಗೆ ಜನಾಭಿಪ್ರಾಯ ಬಹಿರಂಗ

English summary
When demonetisation shattered dreams of robbers from Madhya Pradesh who looted over Rs 5 crore from Salem-Chennai express train in Tamil Nadu. Indian Overseas Bank was transferring Rs. 325 crore rupee to Reserve Bank of India for destroying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X