ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಅಮೆರಿಕ ಸಂವಿಧಾನದ ಬಗ್ಗೆ ಚರ್ಚಾ ಸ್ಪರ್ಧೆ, ಮ್ಯಾಕ್ ಬುಕ್ ಪ್ರೋ ಬಹುಮಾನ

By ಅನಿಲ್ ಆಚಾರ್
|
Google Oneindia Kannada News

ಚೆನ್ನೈ, ಜುಲೈ 10: ಚೆನ್ನೈನಲ್ಲಿ ಇರುವ ಅಮೆರಿಕ ರಾಯಭಾರ ಕಚೇರಿಯಿಂದ ಹದಿನೆಂಟರಿಂದ ಇಪ್ಪತ್ತೈದು ವರ್ಷದೊಳಗಿನವರಿಗಾಗಿ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ. ಅಮೆರಿಕ ಹಾಗೂ ಭಾರತೀಯ ಸಾಂವಿಧಾನಿಕ ಕಾನೂನು ಎಂಬುದು ಚರ್ಚಾ ಸ್ಪರ್ಧೆಯ ವಿಷಯ. ಜುಲೈ 26ರಿಂದ ಸೆಪ್ಟೆಂಬರ್ 14ರ ಮಧ್ಯೆ ಕೊಚ್ಚಿ, ಬೆಂಗಳೂರು, ತಿರುಚಿರಾಪಳ್ಳಿ ಹಾಗೂ ಚೆನ್ನೈನ ಕ್ಯಾಂಪಸ್ ಗಳಲ್ಲಿ ಲಯೋಲಾ ಕಾಲೇಜು ಸಹಯೋಗದೊಂದಿಗೆ ಸ್ಪರ್ಧೆ ಆಯೋಜಿಸಲಾಗುತ್ತಿದೆ.

ಈ ಚರ್ಚಾ ಸ್ಪರ್ಧೆಯ ಸಂಪೂರ್ಣ ವಿವರಗಳನ್ನು ಅಮೆರಿಕ ರಾಯಭಾರ ಕಚೇರಿ ಚೆನ್ನೈನ ಫೇಸ್ ಬುಕ್ ಪುಟದಲ್ಲಿ ನೋಡಬಹುದು. ಚರ್ಚಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದವರಿಗೆ ಮ್ಯಾಕ್ ಬುಕ್ ಪ್ರೋ ಇದೆ. ಕಾನೂನು ಡೇಟಾಬೇಸ್ ಚಂದಾ ಹಾಗೂ ಟ್ರೋಫಿಗಳನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ.

ವಿದ್ಯಾರ್ಥಿಗಳ ವಯೋಮಿತಿ ಹದಿನೆಂಟರಿಂದ ಇಪ್ಪತ್ತೈದರ ಮಧ್ಯೆ ಇರಬೇಕು. ಚರ್ಚಾ ಸ್ಪರ್ಧೆಯು ಇಂಗ್ಲಿಷ್ ನಲ್ಲಿ ಇರುತ್ತದೆ. ಪ್ರವೇಶ ಉಚಿತ ಇರುತ್ತದೆ. ಸ್ಪರ್ಧೆಯ ದಿನಾಂಕ, ಸ್ಥಳ, ನೋಂದಣಿ ಮಾಡಿಕೊಳ್ಳಬೇಕಾದ ವ್ಯಕ್ತಿಗಳ ವಿವರ ಹೀಗಿದೆ.

Debate competition for students on U.S. and India constitutions

ಜುಲೈ 26- ಕೊಚ್ಚಿ- ದ ನ್ಯಾಷನಲ್ ಯೂನಿವರ್ಸಿಟಿ ಆಫ್ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್- ಡಾ.ಎಸ್.ಮಿನಿ

ಆಗಸ್ಟ್ 2- ಬೆಂಗಳೂರು- ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ- ಪದ್ಮಾವತಿ

ಆಗಸ್ಟ್ 9- ತಿರುಚಿರಾಪಳ್ಳಿ- ದ ತಮಿಳುನಾಡು ಲಾ ಯೂನಿವರ್ಸಿಟಿ- ಅಮಿಷಾ ತ್ರಿಪಾಠಿ

ಆಗಸ್ಟ್ 19- ಚೆನ್ನೈ, ದ ತಮಿಳುನಾಡು ಡಾ. ಅಂಬೇಡ್ಕರ್ ಲಾ ಯೂನಿವರ್ಸಿಟಿ- ಪ್ರೊ.ರಂಜಿತ್

English summary
The U.S. Consulate General in Chennai is seeking students, ages 18-25 years old, to participate in a debate competition on U.S. and Indian constitutional law to be held across university campuses in Kochi, Bengaluru, Tiruchirappalli, and Chennai between July 26 – September 14, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X