ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಕಾರು ಚಾಲಕನ ಅಪಘಾತ ಪ್ರಕರಣ ರೀ ಓಪನ್

|
Google Oneindia Kannada News

ಸೇಲಂ, ಅಕ್ಟೋಬರ್ 22: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತೆ ಜಯಲಲಿತಾ ಅವರ ಕಾರು ಚಾಲಕನಾಗಿದ್ದ ಕನಗರಾಜು ಅವರ ಅಪಘಾತ ಪ್ರಕರಣ ಮತ್ತೆ ತಿರುವು ಪಡೆದಿದೆ.

ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ ಪ್ರಕರಣವನ್ನು ಮತ್ತೆ ತೆರೆಯಲಾಗಿದ್ದು, ಶೀಘ್ರದಲ್ಲೇ ತನಿಖೆ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 ಅಧಿಕಾರಕ್ಕೆ ಬಂದದ್ದೇ ಆದರೆ ಜಯಲಲಿತಾ ನಿಗೂಢ ಸಾವಿನ ಪ್ರಕರಣ ಬಗೆಹರಿಸುವೆ; ಸ್ಟಾಲಿನ್ ಅಧಿಕಾರಕ್ಕೆ ಬಂದದ್ದೇ ಆದರೆ ಜಯಲಲಿತಾ ನಿಗೂಢ ಸಾವಿನ ಪ್ರಕರಣ ಬಗೆಹರಿಸುವೆ; ಸ್ಟಾಲಿನ್

2017ರ ಏಪ್ರಿಲ್ 28ರಂದು ಕನಗರಾಜು ತನ್ನ ಬೈಕ್​ನಲ್ಲಿ ಸೇಲಂ-ಚೆನ್ನೈ ಹೆದ್ದಾರಿಯನ್ನು ದಾಟುವ ವೇಳೆ ಅಪಘಾತ ಸಂಭವಿಸಿ, ಸಾವನ್ನಪ್ಪಿದ್ದನು. ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಕನಗರಾಜ್ ಮದ್ಯಸೇವಿಸಿ, ಬೈಕ್ ಚಾಲನೆ ಮಾಡುತ್ತಿದ್ದ ಕಾರಣದಿಂದ ಅಪಘಾತ ಜರುಗಿದೆ ಎಂದು ವರದಿ ನೀಡಿ, ಪ್ರಕರಣವನ್ನು ಅಂತ್ಯಗೊಳಿದ್ದರು.

Death Case Of Tamil Nadu Former CM Jayalalithaa’s Driver Reopened

ಸೇಲಂ ಜಿಲ್ಲೆಯ ಕೋರ್ಟ್ ಆದೇಶದ ಅನ್ವಯ ಈ ಪ್ರಕರಣನ್ನು ಮತ್ತೆ ತೆರೆಯಲಾಗುತ್ತದೆ. ಆದಷ್ಟು ಶೀಘ್ರದಲ್ಲೇ ತನಿಖೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ತಮಿಳುನಾಡಿನ ಸೇಲಂ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣ ರೀ ಓಪನ್ ಏಕೆ?: ಕನಗರಾಜು ಕೊಲೆ ಮತ್ತು ದರೋಡೆಯೊಂದರ ಪ್ರಮುಖ ಆರೋಪಿಯೂ ಆಗಿದ್ದನು. ಆತ ಸಾವನ್ನಪ್ಪುವ ಐದು ದಿನಗಳ ಮೊದಲು ನೀಲಗಿರಿ ಜಿಲ್ಲೆಯ ಕೊಡನಾಡ್ ಎಸ್ಟೇಟ್​​ನಲ್ಲಿ ಸೆಕ್ಯೂರಿಟಿ ಗಾರ್ಡ್​​ನ ಕೊಲೆಯೊಂದು ನಡೆದು, ಅಲ್ಲಿಂದ ಕೆಲವೊಂದು ವಸ್ತುಗಳನ್ನು ದರೋಡೆ ಮಾಡಲಾಗಿತ್ತು. ಈ ಕೊಲೆ ಮತ್ತು ದರೋಡೆಯ ಆರೋಪವೂ ಕನಗರಾಜ್ ಮೇಲಿತ್ತು.

ಈಗ ಕೊಡನಾಡ್ ಸೆಕ್ಯೂರಿಟಿ ಗಾರ್ಡ್ ಹತ್ಯೆ ಮತ್ತು ದರೋಡೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಕನಗರಾಜು ಅಪಘಾತಕ್ಕೂ ನಂಟಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ.

ಅಷ್ಟೇ ಅಲ್ಲದೇ ಇದೇ ವೇಳೆ ಕೊಡನಾಡ್ ಎಸ್ಟೇಟ್​ ಕೊಲೆ ಮತ್ತು ದರೋಡೆಯ ಮತ್ತೊಬ್ಬ ಆರೋಪಿಯಾದ ಸಯಾನ್ ಎಂಬಾತನಿಗೂ ಅಪಘಾತವಾಗಿ ಆತ ತನ್ನ ಪತ್ನಿ ಮತ್ತು ಮಗಳನ್ನು ಕಳೆದುಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಕನಗರಾಜ್ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದರು.

ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಮಾಜಿ ಕಾರು ಚಾಲಕ ಕನಕರಾಜು ಎಂಬುವರು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ.

ಸಾಲೆಂ ಜಿಲ್ಲೆ ಅತ್ತೂರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕನಗರಾಜು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಇದು ಅಪಘಾತವಲ್ಲ ಕೊಲೆ ಎಂದು ಭಾವಿಸಲಾಗಿದೆ.

ಕನಗರಾಜು ಜಯಲಲಿತಾ ಅವರ ಬಳಿ ಕಾರು ಚಾಲಕನಾಗಿದ್ದ. ಹಿಂದೆ ಜಯಲಲಿತಾ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪವಿತ್ತು. ಹೀಗಾಗಿ ಜಯಲಲಿತಾ ಅವರೇ ಆತನನ್ನು 2012 ರಲ್ಲಿ ಕೆಲಸದಿಂದ ತೆಗೆದುಹಾಕಿದ್ದರಂತೆ.

ಕಳೆದ 24 ರಂದು ಜಯಲಲಿತಾ ಎಸ್ಟೇಟ್ ಕಾವಲುಗಾರ ಓಂಕಾರ ಹತ್ಯೆ ಹಿಂದೆ ಕನಗರಾಜು ಕೈವಾಡವಿದೆ ಎನ್ನಲಾಗಿದೆ. ಪೊಲೀಸರು ಕನಗರಾಜುಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಆತ ಅಪಘಾತದಲ್ಲಿ ಸಾವನ್ನಪ್ಪಿದ್ದ.

ಸುಮಾರು ಐದು ವರ್ಷಗಳ ಬಳಿಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ದತ್ತುಪುತ್ರ ಸುಧಾಕರನ್ ಅ.16ರಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಐದು ವರ್ಷಗಳ ಜೈಲು ಶಿಕ್ಷೆಯ ನಂತರ ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಸುಧಾಕರನ್ ರಿಲೀಸ್​ ಆಗುತ್ತಿದ್ದಂತೆ ಬೆಂಬಲಿಗರು ಸುಧಾಕರನ್ ಪರವಾಗಿ ಘೋಷಣೆ ಕೂಗಿ ಬರಮಾಡಿಕೊಂಡಿದ್ದಾರೆ. ಇನ್ನು ಜೈಲಿನಿಂದ ಬಿಡುಗಡೆಗೊಂಡ ಸುಧಾಕರನ್ ಸ್ವಾಗತಕ್ಕಾಗಿ ಬೆಂಬಲಿಗರು ತಮಿಳುನಾಡಿನಿಂದ ಆಗಮಿಸಿದ್ದರು.

ಚಿನ್ನಮ್ಮ ಶಶಿಕಲಾ ನಟರಾಜನ್​ ಜೊತೆಯೇ ಸುಧಾಕರನ್ ಬಿಡುಗಡೆ ಆಗಬೇಕಿತ್ತು. ಆದರೆ ದಂಡ ಕಟ್ಟೋಕೆ‌ ಆಗದ ಹಿನ್ನೆಲೆ ಒಂದು ವರ್ಷ ಹೆಚ್ಚು ಕಾಲ ಜೈಲು ವಾಸವನ್ನು ಅನುಭವಿಸಬೇಕಾಯಿತು.

ಅಕ್ರಮ ಆಸ್ತಿ ಸಂಪಾದಿಸದ್ದ ಆರೋಪದ ಮೇಲೆ ಶಶಿಕಲಾ ನಟರಾಜನ್​ಗೆ ಜೈಲು ವಾಸ ನೀಡಲಾಗಿತ್ತು. ಸುಮಾರು ನಾಲ್ಕು ವರ್ಷಗಳ ನಂತರ ಅಂದರೆ ಇದೇ ವರ್ಷ ಜನವರಿ 27ಕ್ಕೆ ಇವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಲಾಗಿತ್ತು. ಶಶಿಕಲಾ ರಿಲೀಸ್ ಆದ ದಿನವೇ ಜಯಲಲಿತಾ ದತ್ತುಪುತ್ರ ಸುಧಾಕರನ್ ಬಿಡುಗಡೆಯಾಗಬೇಕಿತ್ತು. ಆದರೆ ದಂಡ ಕಟ್ಟದ ಕಾರಣ ಬಿಡುಗಡೆಯಾಗಿರಲಿಲ್ಲ.

ಇನ್ನು ಸುಧಾಕರನ್ ಆಸ್ತಿಗೆ ಸರ್ಕಾರ ಮುಟ್ಟುಗೋಲು ಹಾಕಿತ್ತು. 2017ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರ ಫೆಬ್ರವರಿ 10ಕ್ಕೆ ಸುಧಾಕರನ್ ಆಸ್ತಿಗೆ ಮುಟ್ಟುಗೋಲು ಹಾಕಿತ್ತು.

English summary
The Salem Rural police have reopened the road accident case of late Chief Minister J Jayalalithaa’s car driver, Kanagaraj, who died five days after the April 2017 heist at the Kodanad estate in Nilgiris district, which was used by the former AIADMK supremo as a retreat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X