ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನವಿಡೀ ಫ್ರೀಜರ್ ಪೆಟ್ಟಿಗೆಯಲ್ಲಿದ್ದರೂ ಬದುಕಿ ಬಂದ 'ಮೃತ' ವೃದ್ಧ! ಅಚ್ಚರಿಯ ಘಟನೆ

|
Google Oneindia Kannada News

ಚೆನ್ನೈ, ಅಕ್ಟೋಬರ್ 14: ಮೃತಪಟ್ಟಿದ್ದಾನೆ ಎಂದು ನಂಬಲಾಗಿದ್ದ 74 ವರ್ಷದ ವೃದ್ಧನೊಬ್ಬನ ದೇಹವನ್ನು ರಾತ್ರಿಯಿಡೀ ಫ್ರೀಜರ್ ಪೆಟ್ಟಿಗೆಯಲ್ಲಿ ಇರಿಸಿದ್ದರೂ ಮರುದಿನ ಆತ ಬದುಕಿರುವ ವಿಚಿತ್ರ ಹಾಗೂ ಅಚ್ಚರಿಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಸೇಲಂ ಜಿಲ್ಲೆಯ ಕಂಧಂಪಟ್ಟಿಯ ಬಾಲಸುಬ್ರಮಣಿಯ ಎಂಬ ವೃದ್ಧ ಮೃತಪಟ್ಟಿದ್ದಾರೆ ಎಂದು ನಂಬಿದ್ದ ಸಂಬಂಧಿಕರು ಸೋಮವಾರ 'ಮೃತದೇಹ'ವನ್ನು ಕೆಡದಂತೆ ತಡೆಯಲು ಫ್ರೀಜರ್ ಪೆಟ್ಟಿಗೆಯೊಂದರಲ್ಲಿ ಇರಿಸಿದ್ದರು. ಆದರೆ ಫ್ರೀಜರ್ ಕಂಪೆನಿಯ ತಯಾರಕರು ಆ ವ್ಯಕ್ತಿ ಇನ್ನೂ ಬದುಕಿದ್ದಾರೆ ಎಂದು ಪೊಲೀಸರಿಗೆ ಮಂಗಳವಾರ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಈಗ ವೃದ್ಧನನ್ನು ಚಿಕಿತ್ಸೆಗಾಗಿ ಸೇಲಂನ ಆಸ್ಪತ್ರೆಗೆ ದಾಖಲಿಸಲಾಗಿದೆ.

ತನಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ತನ್ನೊಂದಿಗೇ ದಹಿಸಿದ ಮಹಿಳೆತನಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ತನ್ನೊಂದಿಗೇ ದಹಿಸಿದ ಮಹಿಳೆ

74 ವರ್ಷದ ಬಾಲಸುಬ್ರಮಣಿಯ ಕುಮಾರ್, ತನ್ನ 70 ವರ್ಷದ ಸಹೋದರ ಸರವಣನ್ ಮತ್ತು ಸಹೋದರಿಯ ಮಗಳು ಗೀತಾ ಜತೆ ವಾಸಿಸುತ್ತಿದ್ದು, ಎರಡು ತಿಂಗಳಿಂದ ಹಾಸಿಗೆ ಹಿಡಿದಿದ್ದರು.

ಅಕ್ಟೋಬರ್ 12ರಂದು ಸುಬ್ರಮಣಿಯ ಅವರ ದೇಹದಲ್ಲಿ ಯಾವುದೇ ಚಲನೆ ಕಂಡುಬಾರದೆ ಇದ್ದಾಗ ಅವರು ಮೃತಪಟ್ಟಿದ್ದಾರೆ ಎಂದು ಭಾವಿಸಿ ದೇಹವನ್ನು ಇರಿಸಲು ಫ್ರೀಜರ್ ಬಾಕ್ಸ್ ತರಿಸಿದ್ದಾಗಿ ಸರವಣನ್ ತಿಳಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಅವರ ಸಂಬಂಧಿಕರು ಕೂಡ ಮನೆಗೆ ಆಗಮಿಸಿದ್ದರು. ಮುಂದೆ ಓದಿ.

ಉಸಿರಾಡುತ್ತಿದ್ದ ವ್ಯಕ್ತಿ

ಉಸಿರಾಡುತ್ತಿದ್ದ ವ್ಯಕ್ತಿ

ಪೆಟ್ಟಿಗೆ ವಾಪಸ್ ಪಡೆದುಕೊಳ್ಳಲು ಫ್ರೀಜರ್ ಕಂಪೆನಿಯ ಸಿಬ್ಬಂದಿ ಮನೆಗೆ ಬಂದಿದ್ದರು. ಆದರೆ ಪೆಟ್ಟಿಗೆ ಒಳಗಿದ್ದ ವ್ಯಕ್ತಿ ಇನ್ನೂ ಉಸಿರಾಡುತ್ತಿದ್ದದ್ದನ್ನು ಕಂಡು ಅವರು ಬೆಚ್ಚಿಬಿದ್ದರು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಸುಬ್ರಮಣಿಯ ಅವರನ್ನು ರಕ್ಷಿಸಲಾಯಿತು.

ಪೆಟ್ಟಿಗೆ ತರಿಸಿಕೊಂಡಿದ್ದ ಕುಟುಂಬದವರು

ಪೆಟ್ಟಿಗೆ ತರಿಸಿಕೊಂಡಿದ್ದ ಕುಟುಂಬದವರು

ಬಾಲಸುಬ್ರಮಣಿಯ ಅವರು ಸೋಮವಾರ ಮೃತಪಟ್ಟಿದ್ದು, ಶೈತ್ಯ ಪೆಟ್ಟಿಗೆ ಬೇಕೆಂದು ಅವರ ಸಂಬಂಧಿಕರು ಕಂಪೆನಿಗೆ ಕರೆ ಮಾಡಿ ಪೆಟ್ಟಿಗೆ ತರಿಸಿಕೊಂಡಿದ್ದರು ಎಂದು ಸೂರಮಂಗಲಂ ಸಬ್ ಇನ್‌ಸ್ಪೆಕ್ಟರ್ ರಾಜಶೇಖರನ್ ತಿಳಿಸಿದ್ದಾರೆ.

ಪೊಲೀಸರ ಅನುಮಾನ

ಪೊಲೀಸರ ಅನುಮಾನ

'ಸೋಮವಾರ ಪೆಟ್ಟಿಗೆ ತಂದುಕೊಟ್ಟಿದ್ದ ಕಂಪೆನಿ ಸಿಬ್ಬಂದಿ, ಮರುದಿನ ಸಂಜೆ 7-8 ಗಂಟೆ ಸುಮಾರಿಗೆ ಪೆಟ್ಟಿಗೆಯನ್ನು ವಾಪಸ್ ಕೊಂಡೊಯ್ಯಲು ತೆರಳಿದ್ದರು. ಆಗ ಆ ವ್ಯಕ್ತಿ ಇನ್ನೂ ಬದುಕಿರುವುದು ಕಂಡುಬಂದಿದೆ. ಅಲ್ಲಿ ವಾಸ್ತವವಾಗಿ ನಡೆದಿದ್ದೇನೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಮನೆಯಲ್ಲಿ ಆ ಫ್ರೀಜರ್ ಪೆಟ್ಟಿಗೆ ಇದ್ದಷ್ಟೂ ಸಮಯ ವ್ಯಕ್ತಿಯನ್ನು ಅದರೊಳಗೆ ಇರಿಸಿರಲು ಸಾಧ್ಯವೇ ಇಲ್ಲ' ಎಂದು ಅವರು ಹೇಳಿದ್ದಾರೆ.

ಕುಟುಂಬದವರ ವಿರುದ್ಧ ಪ್ರಕರಣ

ಕುಟುಂಬದವರ ವಿರುದ್ಧ ಪ್ರಕರಣ

ಮನೆಯವರ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಬಾಲಸುಬ್ರಮಣಿಯ ಕುಟುಂಬದ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 287 (ಮಾನವನ ಜೀವಕ್ಕೆ ಅಪಾಯ ತಂದೊಡ್ಡುವ ನಿರ್ಲಕ್ಷ್ಯದ ವರ್ತನೆ) ಮತ್ತು 336 (ಜೀವಕ್ಕೆ ಮಾರಕವಾದ ಕ್ರಿಯೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯ) ಅಡಿ ಪ್ರಕರಣ ದಾಖಲಿಸಲಾಗಿದೆ.

English summary
Tamil Nadu police rescued a man, presumed dead by his relatives was kept in a freezer box overnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X