ಚಂಡಮಾರುತ ಕಾರಣ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ
ಚೆನ್ನೈ, ನ. 26: ತಮಿಳುನಾಡಿನಿಂದ ಕೇರಳ, ಕರ್ನಾಟಕ ಮಾರ್ಗವಾಗಿ ಸಂಚರಿಸುತ್ತಿದ್ದ 12ಕ್ಕೂ ಅಧಿಕ ವಿಶೇಷ ರೈಲುಗಳ ಸಂಚಾರವನ್ನು ನವೆಂಬರ್ 26ರಂದು ಕೂಡಾ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ದಕ್ಷಿಣ ವಿಭಾಗ ಪ್ರಕಟಿಸಿದೆ.
ತಮಿಳುನಾಡು ಹಾಗೂ ಕೇರಳ ನಡುವಿನ 6 ವಿಶೇಷ ರೈಲು ರದ್ದುಗೊಳಿಸಿರುವ ಬಗ್ಗೆ ಸೋಮವಾರವೇ ಪ್ರಕಟಿಸಲಾಗಿತ್ತು. ಇ ಟಿಕೆಟ್ ಮಾಡಿದವರಿಗೆ ಆಟೋಮ್ಯಾಟಿಕ್ ಆಗಿ ರೀಫಂಡ್ ಮಾಡಲಾಗುತ್ತದೆ. ರೈಲ್ವೆ ಕೌಂಟರ್ ಗಳಲ್ಲಿ ಟಿಕೆಟ್ ಪಡೆದವರು ಮುಂದಿನ 15 ದಿನಗಳಲ್ಲಿ ಸ್ಟೇಷನ್ ಗಳಲ್ಲಿ ರೀಫಂಡ್ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ರೀಫಂಡ್ ಪಡೆಯಲು 3 ದಿನಗಳನ್ನು ನೀಡಲಾಗುತ್ತದೆ, ಸೈಕ್ಲೋನ್ ದೆಸೆಯಿಂದ ಈ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
* ರೈಲು ಸಂಖ್ಯೆ 02675 / 02676 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೊಯಮತ್ತೂರು- ವಿಶೇಷ ರೈಲು
* ರೈಲು ಸಂಖ್ಯೆ 06027 / 06028 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಎಸ್ ಆರ್ ಬೆಂಗಳೂರು- ವಿಶೇಷ ರೈಲು
* ರೈಲು ಸಂಖ್ಯೆ 02680 / 02679 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೊಯಮತ್ತೂರು- ವಿಶೇಷ ರೈಲು
* ರೈಲು ಸಂಖ್ಯೆ 02608 / 02607 ಕೆಎಸ್ ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ವಿಶೇಷ ರೈಲು
* ರೈಲು ಸಂಖ್ಯೆ 06057/06008 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ತಿರುಪತಿ ವಿಶೇಷ ರೈಲು
* ರೈಲು ಸಂಖ್ಯೆ 02634 ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಪ್ರತಿ ದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 02633 ಚೆನ್ನೈ ಎಗ್ಮೋರ್-ಕನ್ಯಾಕುಮಾರಿ ಪ್ರತಿ ದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 06724/06723 ಚೆನ್ನೈ ಎಗ್ಮೋರ್(ಅನಂತಪುರಿ) <=>ಕೊಲ್ಲಂ ಪ್ರತಿ ದಿನ ಎಕ್ಸ್ ಪ್ರೆಸ್ ಸ್ಪೆಷಲ್.
* ರೈಲು ಸಂಖ್ಯೆ 06102/06101 ಕೊಲ್ಲಂ<=>ಚೆನ್ನೈ ಎಗ್ಮೋರ್ ಎಕ್ಸ್ ಪ್ರೆಸ್ ವಯಾ ಸೆಂಗೊಟ್ಟೈ, ಮದುರೈ ಜಂಕ್ಷನ್.
****
ವಿಳಂಬ ಅಥವಾ ಸಂಪೂರ್ಣ ರದ್ದಾಗದ ಮಾರ್ಗಗಳು
* ರೈಲು ಸಂಖ್ಯೆ 06231 ಮೈಯಿಲದುರೈ-ಮೈಸೂರು ಸ್ಪೆಷಲ್. ಮೈಯಿಲದುರೈ-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 06187 ಕಾರೈಕಲ್-ಎರ್ನಾಕುಲಂ ಸ್ಪೆಷಲ್. ಕಾರೈಕಲ್-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 02084/ 02083 ಕೊಯಮತ್ತೂರು <=>ಮೈಯಿಲದುರೈ ಜನ್ ಶತಾಬ್ದಿ ಸ್ಪೆಷಲ್. ಮೈಯಿಲದುರೈ-ತಿರುಚುನಾಪಳ್ಳಿ ತನಕ ರದ್ದು
* ರೈಲು ಸಂಖ್ಯೆ 02897 ಪುದುಚೇರಿ-ಭುವನೇಶ್ವರ್ ಸ್ಪೆಷಲ್. ಪುದುಚೇರಿಯಿಂದ ಚೆನ್ನೈ ಎಗ್ಮೋರ್ ತನಕ ರದ್ದು.
* ರೈಲು ಸಂಖ್ಯೆ 02868 ಪುದುಚೇರಿ-ಹೌರಾ ಸೂಪರ್ ಫಾಸ್ಟ್. ಪುದುಚೇರಿಯಿಂದ ವಿಳ್ಳುಪುರಂ ತನಕ ರದ್ದು.