• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಲ್ಲಿ ನಿವಾರ್ ಚಂಡಮಾರುತ ಅಬ್ಬರಕ್ಕೆ ಮೂವರು ಬಲಿ

|

ಚೆನ್ನೈ, ನ. 26: ನಿರೀಕ್ಷಿತ ಮಟ್ಟದಲ್ಲಿ ನಿವಾರ್ ಚಂಡಮಾರುತ ಅಬ್ಬರ ಮಾಡದಿದ್ದರೂ ಗಾಳಿ ಮಳೆ ಆರ್ಭಟಕ್ಕೆ ಮೂವರು ಮೃತಪಟ್ಟಿರುವ ವರದಿ ಬಂದಿದೆ. ತಮಿಳುನಾಡಿನಲ್ಲಿ ಇಲ್ಲಿ ತನಕ ಆಗಿರುವ ಸಾವು ನೋವಿನ ಅಂದಾಜು ವಿವರವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತುಲ್ಯ ಮಿಶ್ರಾ ನೀಡಿದ್ದಾರೆ.

ಚಂಡಮಾರುತ ಕಾರಣ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ

ತಮಿಳುನಾಡಿನಲ್ಲಿ ಒಟ್ಟು ಮೂವರು ಮೃತರಾಗಿದ್ದು, ಮೂವರು ಗಾಯಗೊಂಡಿದ್ದಾರೆ. 101 ಗುಡಿಸಲು ನಾಶವಾಗಿವೆ. 380ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ.

ಗ್ರೇಟರ್ ಚೆನ್ನೈ ಕಾರ್ಪೊರೇಷನ್ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 223 ರಸ್ತೆಗಳಲ್ಲಿ ನೆಲಕ್ಕುರುಳಿದ ಮರಗಳನ್ನು ಪಕ್ಕಕ್ಕೆ ಸರಿಸಿ, ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಸುಮಾರು 68 ಸಂತ್ರಸ್ತ ಪರಿಹಾರ ಕೇಂದ್ರಗಳಲ್ಲಿ 3,738 ನಾಗರಿಕರನ್ನು ರಕ್ಷಿಸಿ ಇರಿಸಲಾಗಿದ್ದು, ಅಗತ್ಯ ಆಹಾರ, ವೈದ್ಯಕೀಯ ಉಪಚಾರ ನೀಡಲಾಗಿದೆ. ಒಟ್ಟಾರೆ, 2,27,317 ಮಂದಿ ಸಂತ್ರಸ್ತರನ್ನು ವಿಚಾರಿಸಲಾಗಿದೆ.

ಚೆನ್ನೈನಗರದಲ್ಲಿ 19 ಎಲೆಕ್ಟ್ರಿಕಲ್ ಕಂಬ ಉರುಳಿದ್ದು, ಹಲವೆಡೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ. ಪ್ರವಾಹದ ನೀರು ಸುಮಾರು 40,000 ಮನೆಗಳಿಗೆ ನುಗ್ಗಿದೆ.

   IND vs AUS 1st ODI Preview:Team India ಮಾರ್ಚ್ ತಿಂಗಳ ನಂತರ ಇದೇ ಮೊದಲು ನಾಳಿನ ಪಂದ್ಯದಲ್ಲಿ |Oneindia Kannada

   ಕಡಲೂರು, ಅರಿಯಾಲೂರು, ರಾಣಿಪೇಟ್, ತಿರುವಾರೂರ್, ತಂಜಾವೂರ್ ಹಾಗೂ ಕೊಯಮತ್ತೂರು ಮುಂತಾದ ಪ್ರದೇಶಗಳಿಗೆ ಸಹಾಯವಾಣಿಯನ್ನು ಪ್ರಕಟಿಸಲಾಗಿದೆ.

   English summary
   Three deaths, three people injured, 101 huts damaged, and 380 fallen trees removed. Essential services have been restored, says Atulya Mishra, Additional Chief Secretary, Tamil Nadu.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X