ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಆರು ಗಂಟೆಗಳಲ್ಲಿ ಅಬ್ಬರಿಸಲಿದೆ ಸೈಕ್ಲೋನ್ 'ಫ್ಯಾನಿ'

|
Google Oneindia Kannada News

ಚೆನ್ನೈ, ಏಪ್ರಿಲ್ 29: ಮುಂದಿನ ಆರು ಗಂಟೆಗಳಲ್ಲಿ ಸೈಕ್ಲೋನ್ ಫ್ಯಾನಿ ಅಬ್ಬರಿಸಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಫ್ಯಾನಿ ಚಂಡಮಾರುತ ಅಪ್ಪಳಿಸುತ್ತಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಳ್ಳಲಿದೆ. ಮುಂದಿನ 24 ಗಂಟೆಗಳ ಕಾಲ ಇದರ ಅಬ್ಬರ ಮುಂದುವರಿಯಲಿದೆ.

ಫಾನಿ ಚಂಡಮಾರುತ ಎಫೆಕ್ಟ್:ಕರಾವಳಿ, ಹಳೆ ಮೈಸೂರು ಭಾಗದಲ್ಲಿ ಮುಂದಿನ 3 ದಿನ ಭಾರೀ ಮಳೆ ಸಂಭವಫಾನಿ ಚಂಡಮಾರುತ ಎಫೆಕ್ಟ್:ಕರಾವಳಿ, ಹಳೆ ಮೈಸೂರು ಭಾಗದಲ್ಲಿ ಮುಂದಿನ 3 ದಿನ ಭಾರೀ ಮಳೆ ಸಂಭವ

ಮೇ 29 ಮತ್ತು 30 ರಂದು ಕೇರಳ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಸೈಕ್ಲೋನ್ ಕಾರಣ ಮಳೆಯಾಗಲಿದೆ. ಅದರ ಪರಿಣಾಮ ಕರ್ನಾಟಕದಲ್ಲೂ ಅಲ್ಲಲ್ಲಿ ಕೊಂಚ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Cyclone Fani To Intensify, it may Rain in Tamil Nadu, Andhra Pradesh

ಗಂಟೆಗೆ ಸುಮಾರು 100 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಈ ಭಾಗದ ಜನರಿಗೆ ಆದಷ್ಟು ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ.

ಆದರೆ ಚೆನ್ನೈಯಲ್ಲಿ ಫ್ಯಾನಿ ಪ್ರಭಾವವಿರುವುದಿಲ್ಲ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಅದು ಹೇಳಿದೆ.

ಫ್ಯಾನಿ ಸೈಕ್ಲೋನ್ ಕುರಿತು ಅಚ್ಚರಿಯ ಮಾಹಿತಿ ನೀಡಿದ ತಮಿಳುನಾಡು ವೆದರ್‌ಮ್ಯಾನ್ಫ್ಯಾನಿ ಸೈಕ್ಲೋನ್ ಕುರಿತು ಅಚ್ಚರಿಯ ಮಾಹಿತಿ ನೀಡಿದ ತಮಿಳುನಾಡು ವೆದರ್‌ಮ್ಯಾನ್

ಮೇ 1, 2 ಮತ್ತು 3 ರಂದು ಒಡಿಶಾದ ಕರಾವಳಿ ಭಾಗಕ್ಕೆ ಈ ಚಂಡಮಾರುತ ಧಾವಿಸಲಿದ್ದು, ಅಲ್ಲಿ ಮೇ 3 ರಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಗಂಟೆಗೆ ಸುಮಾರು 175 ಕಿಮೀ ವೇಗದಲ್ಲಿ ಗಾಳಿ ಚಲಿಸಲಿದೆ.

English summary
IMD: Cyclonic storm Fani is very likely to intensify into a severe cyclonic storm during next 6 hours & into a very severe cyclonic storm during subsequent 24 hrs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X