ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿವಾರ್' ಹೋದರೂ ಇಲ್ಲ ನೆಮ್ಮದಿ: ಬರಲಿದೆ ಮತ್ತೊಂದು ಚಂಡಮಾರುತ 'ಬುರೆವಿ'

|
Google Oneindia Kannada News

ಚೆನ್ನೈ, ನವೆಂಬರ್ 28: ಭಾರಿ ಆತಂಕ ಸೃಷ್ಟಿಸಿದ್ದ 'ನಿವಾರ್' ಚಂಡಮಾರುತ ತಮಿಳುನಾಡು ಮತ್ತು ಪುದುಚೆರಿಗಳಲ್ಲಿ ಅಪ್ಪಳಿಸುವ ವೇಳೆ ದುರ್ಬಲಗೊಂಡಿದ್ದರಿಂದ ನಿರೀಕ್ಷಿಸಿದಷ್ಟು ಅಪಾಯ ಸೃಷ್ಟಿಸದೆ ನಿರ್ಗಮಿಸಿದೆ. ಆದರೆ ಅನೇಕ ಮರಗಳು ಧರೆಗುರುಳಿವೆ. ಗೋಡೆ ಕುಸಿತ, ಭೂಕುಸಿತ, ಮನೆಗಳಿಗೆ ನೀರು ನುಗ್ಗಿರುವುದು ಮುಂತಾದ ಹಾನಿಗಳಿಂದ ಚೇತರಿಸಿಕೊಳ್ಳಲು ಕರಾವಳಿಯ ಭಾಗಗಳಿಗೆ ಹಲವು ಸಮಯ ಬೇಕಾಗಬಹುದು. ಆದರೆ 'ನಿವಾರ್' ಹೊಡೆತದಿಂದ ಸುಧಾರಿಸಿಕೊಂಡು ನಿಟ್ಟುಸಿರು ಬಿಡುವ ಮೊದಲೇ ಮತ್ತೊಂದು ಆಪತ್ತು ಎದುರಾಗಿದೆ.

ಪುದುಚೆರಿ ಮತ್ತು ತಮಿಳುನಾಡಿನ ಕರಾವಳಿಗಳಲ್ಲಿ ನಿವಾರ್ ಅಪ್ಪಳಿಸಿದ ಮರುದಿನವೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸ್ವರೂಪದ ಬಿರುಗಾಳಿ ಸೃಷ್ಟಿಯಾಗಿದೆ. ಅದು ದೊಡ್ಡ ಮಟ್ಟಕ್ಕೆ ಬೆಳೆದರೆ ಪುನಃ ತಮಿಳುನಾಡು ಮತ್ತು ಪುದುಚೆರಿಗಳತ್ತ ಚಲಿಸಿ ಡಿಸೆಂಬರ್ 2ರ ವೇಳೆಗೆ ಅಪ್ಪಳಿಸುವ ಸಾಧ್ಯತೆ ಇದೆ.

ದುರ್ಬಲಗೊಂಡ 'ನಿವಾರ್' ಚಂಡಮಾರುತ: ಆದರೂ ರಾಜ್ಯದಲ್ಲಿ ಎರಡು ದಿನ ಮಳೆ ದುರ್ಬಲಗೊಂಡ 'ನಿವಾರ್' ಚಂಡಮಾರುತ: ಆದರೂ ರಾಜ್ಯದಲ್ಲಿ ಎರಡು ದಿನ ಮಳೆ

ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಒತ್ತಡವುಂಟಾಗಿ ಚಂಡಮಾರುತ ಸೃಷ್ಟಿಯಾಗಲಿದ್ದು, ಅದು ಕ್ರಮೇಣ ತೀವ್ರವಾಗುವ ಸಾಧ್ಯತೆ ಇದೆ ಎಂದು ತಮಿಳುನಾಡು ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಈ ಚಂಡಮಾರುತಕ್ಕೆ 'ಬುರೆವಿ' ಎಂದು ಹೆಸರಿಡಲಾಗಿದೆ. ಮುಂದೆ ಓದಿ.

ಡಿ.2ರ ವೇಳೆ ಚಂಡಮಾರುತದ ಪ್ರಭಾವ

ಡಿ.2ರ ವೇಳೆ ಚಂಡಮಾರುತದ ಪ್ರಭಾವ

'ಆಗ್ನೇಯ ಬಂಗಾಳಕೊಲ್ಲಿಯ ಮೇಲೆ ವಾಯುಭಾರ ಕುಸಿತ ಉಂಟಾಗುವ ಸಂಭವ ಹೆಚ್ಚಿದೆ. ಮುಂದಿನ 24 ಗಂಟೆಗಳಲ್ಲಿ ಭಾನುವಾರದ ವೇಳೆಗೆ ಅದು ಒತ್ತಡಕ್ಕೆ ತಿರುಗಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಬಳಿಕ ಡಿಸೆಂಬರ್ 2ರ ವೇಳೆ ತಮಿಳುನಾಡು ಮತ್ತು ಪುದುಚೆರಿ ಕರಾವಳಿಗಳಿಗೆ ತಲುಪುವ ನಿರೀಕ್ಷೆಯಿದೆ' ಎಂದು ಪ್ರಾಧಿಕಾರ ತಿಳಿಸಿದೆ.

ಡಿ. 10ರಂದು ಮತ್ತೊಂದು ಅಬ್ಬರ

ಡಿ. 10ರಂದು ಮತ್ತೊಂದು ಅಬ್ಬರ

ಇದಲ್ಲದೆ ಡಿಸೆಂಬರ್ 10ರ ವೇಳೆಗೆ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತದಿಂದ ಚಂಡಮಾರುತದ ಪ್ರಭಾವ ಉಂಟಾಗಬಹುದು. ಇದು ಡಿ. 11ರಂದು ಪುನಃ ತಮಿಳುನಾಡು ಮತ್ತು ಪುದುಚೆರಿ ಕರಾವಳಿಗಳಿಗೆ ಅಪ್ಪಳಿಸುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸುನಾಮಿಯಿಂದಾಗಿ ಆಶ್ರಯ ಪಡೆದಿದ್ದ ಪರಿಹಾರ ಕೇಂದ್ರಕ್ಕೆ ಮತ್ತೆ ಬಂದ ದಂಪತಿಸುನಾಮಿಯಿಂದಾಗಿ ಆಶ್ರಯ ಪಡೆದಿದ್ದ ಪರಿಹಾರ ಕೇಂದ್ರಕ್ಕೆ ಮತ್ತೆ ಬಂದ ದಂಪತಿ

ವ್ಯಾಪಕ ಮಳೆ ಸಾಧ್ಯತೆ

ವ್ಯಾಪಕ ಮಳೆ ಸಾಧ್ಯತೆ

ಆದರೆ ಹೊಸ ಚಂಡಮಾರುತದ ಪ್ರಭಾವ ಎಷ್ಟರಮಟ್ಟಿಗೆ ಇರಲಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ಚಂಡಮಾರುತದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅದರ ತೀವ್ರತೆ ಬಗ್ಗೆ ಇಷ್ಟು ಬೇಗ ನಿರ್ಧರಿಸುವುದು ಕಷ್ಟಕರ. ಚಂಡಮಾರುತ ದುರ್ಬಲವಾಗಿದ್ದರೂ ಡಿ. 1 ಮತ್ತು 2ರಂದು ಮುಖಜಭೂಮಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ವಾಡಿಕೆಗಿಂತ ಅಧಿಕ ಮಳೆ

ವಾಡಿಕೆಗಿಂತ ಅಧಿಕ ಮಳೆ

ನಿವಾರ್ ಚಂಡಮಾರುತ ನಿರೀಕ್ಷಿಸಿದಷ್ಟು ಅಪಾಯಕಾರಿಯಾಗದೆ ಇದ್ದರೂ ಅಕ್ಟೋಬರ್ 1ರಿಂದ ಇದುವರೆಗಿನ ಅವಧಿಯಲ್ಲಿ ವಾಡಿಕೆಗಿಂತ 36%ರಷ್ಟು ಅಧಿಕ ಮಳೆ ಸುರಿಸಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಚೆನ್ನೈನಲ್ಲಿ 590.1 ವಾಡಿಕೆ ಮಳೆಯಾಗುತ್ತದೆ. ಆದರೆ ಈ ಬಾರಿ 801.3 ಮಿಮೀ ಮಳೆ ಸುರಿದಿದೆ.

English summary
After Cyclone Nivar another storm named Burevi brews in Bay of Bengal, which may hit Tamil Nadu and Puducherry on December 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X