ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರೆವಿ ಚಂಡಮಾರುತ: ಕೆಲವೇ ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಪ್ರವಾಹದಂಥಾ ಮಳೆ

|
Google Oneindia Kannada News

ಚೆನ್ನೈ, ಡಿಸೆಂಬರ್ 04: ಮುಂದಿನ ಕೆಲವೇ ಕೆಲವು ಗಂಟೆಗಳಲ್ಲಿ ಬುರೆವಿ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಪ್ರವಾಹದಂಥಾ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡು ಹಾಗೂ ಪುದುಚೆರಿಯಲ್ಲಿ ಭಾರಿ ಮಳೆಯಾಗಲಿದೆ. ಬುರೆವಿ ಚಂಡಮಾರುತ ತಮಿಳುನಾಡು ಕರಾವಳಿಗೆ ಸಮೀಪದಿಸಿದೆ. ಗಾಳಿಯು 50-60 ಕೆಎಂಪಿಎಚ್ ವೇಗದಲ್ಲಿ ಬೀಸುತ್ತಿದೆ.

'ಬುರೇವಿ' ಚಂಡಮಾರುತ; ತಮಿಳುನಾಡು, ಕೇರಳದಲ್ಲಿ ಹೈ ಅಲರ್ಟ್'ಬುರೇವಿ' ಚಂಡಮಾರುತ; ತಮಿಳುನಾಡು, ಕೇರಳದಲ್ಲಿ ಹೈ ಅಲರ್ಟ್

ಮುಂದಿನ 12 ಗಂಟೆಯೊಳಗಾಗಿ ಮತ್ತಷ್ಟು ವಾಯುಭಾರ ಕುಸಿತ ಉಂಟಾಗಲಿದ್ದು, ಅದರ ಪ್ರಭಾವ ತಮಿಳುನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಐಎಂಟಿ ಡಿಜಿ ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.

ಕೇರಳದಲ್ಲೂ ಮಳೆ

ಕೇರಳದಲ್ಲೂ ಮಳೆ

ಇಂದು ಹಾಗೂ ನಾಳೆ ಕೇರಳದಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬುರೆವಿ ಚಂಡಮಾರುತದ ಹಿನ್ನೆಲೆಯಲ್ಲಿ ಶುಕ್ರವಾರ ಐದು ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆಯನ್ನು ಕೇರಳ ಸರ್ಕಾರ ಘೋಷಿಸಿದೆ. ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಅಲ್ಫುಜಾ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರಜೆಯನ್ನು ಘೋಷಿಸಲಾಗಿದೆ.
ಬುರೆವಿ ಚಂಡಮಾರುತದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಟ್ಯುಟಿಕೋರಿನ್ ವಿಮಾನ ನಿಲ್ದಾಣವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಚ್ಚಲಾಗಿದೆ. ಮಧ್ಯಾಹ್ನದ ನಂತರ ನಾಲ್ಕು ದೇಶಿಯ ವಿಮಾನಗಳು ಸೇವೆ ಕಲ್ಪಿಸಲಿವೆ.

ತಮಿಳುನಾಡು ಪ್ರವೇಶಿಸಲಿರುವ ಚಂಡಮಾರುತ

ತಮಿಳುನಾಡು ಪ್ರವೇಶಿಸಲಿರುವ ಚಂಡಮಾರುತ

ಪಂಬನ್ ಸಮೀಪದಲ್ಲಿರುವ ಬುರೆವಿ ಚಂಡಮಾರುತ ಗಂಟೆಗೆ 9 ಕಿಲೋ ಮೀಟರ್ ವೇಗದಲ್ಲಿ ಪಶ್ಚಿಮದತ್ತ ಚಲಿಸುತ್ತಿದ್ದು, ಪಂಬನ್‌ನಿಂದ ನೈರುತ್ಯಕ್ಕೆ 20 ಕಿ.ಮೀ ಮತ್ತು ಕನ್ಯಾಕುಮಾರಿಯ ಪೂರ್ವ-ಈಶಾನ್ಯಕ್ಕೆ 210 ಕಿ.ಮೀ ದೂರದಲ್ಲಿರುವ ರಾಮನಾಥಪುರಂ ಕರಾವಳಿಯ ಸಮೀಪದಲ್ಲಿದೆ.

ಶುಕ್ರವಾರ ರಾತ್ರಿ 50-60 ರಿಂದ 70 ಕಿಲೋ ಮೀಟರ್ ವೇಗದ ಗಾಳಿಯೊಂದಿಗೆ ರಾಮನಾಥಪುರಂ ಮತ್ತು ತುತುಕೂಡಿಯನ್ನು ದಾಟಲಿದೆ. ಇದು ಶುಕ್ರವಾರ ಮುಂಜಾನೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಸೈಕ್ಲೋನ್ ವಾರ್ನಿಂಗ್ ಸೆಂಟರ್ ನಿರ್ದೇಶಕ ಎನ್. ಪುವಿಯಾರಸನ್ ಹೇಳಿದ್ದಾರೆ.
ಎಲ್ಲಿ ಹೆಚ್ಚು ಮಳೆ

ಎಲ್ಲಿ ಹೆಚ್ಚು ಮಳೆ

ರಾಮನಾಥಪುರಂ, ತುತುಕೂಡಿ, ತಿರುನೆಲ್ವೇಲಿ,ಕನ್ಯಾಕುಮಾರಿ, ತೆಂಕಸಿ, ವಿರುಧುನಗರ, ಮಧುರೈ, ಮತ್ತು ಶಿವಗಂಗೈ ಜಿಲ್ಲೆಗಳಲ್ಲಿ ಶನಿವಾರದವರೆಗೂ ಭಾರೀ ಮಳೆ ಮುಂದುವರೆಯಲಿದೆ.

ತೀವ್ರ ಸ್ವರೂಪ ಪಡೆದ ಚಂಡಮಾರುತ

ತೀವ್ರ ಸ್ವರೂಪ ಪಡೆದ ಚಂಡಮಾರುತ

ಬುರೆವಿ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದೆ ಮತ್ತು ಶುಕ್ರವಾರ ತಮಿಳುನಾಡು ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ವೇಗವಾಗಿ ಬೀಸುತ್ತಿರುವ ಗಾಳಿಯು ರಾಮೇಶ್ವರಂಗೆ ಅಪ್ಪಳಿಸಿ ಸಮುದ್ರವನ್ನು ಒರಟಾಗಿ ತಿರುಗಿಸಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

English summary
Cyclone Burevi lays over Gulf of Mannar near south Tamil Nadu coast. Wind speed is 50-60 kmph. It has remained stationary for past 12 hours. It'll further weaken into depression while moving westward across south Tamil Nadu coast during next 12 hrs: IMD DG Mrutyunjay Mohapatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X