ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀ ಮುಂದೆ....ನಾ ನಿನ್ನ ಹಿಂದೆ: ತಮಿಳುನಾಡು-ಗುಜರಾತ್ ಜಂಟಿ ಪಯಣ

|
Google Oneindia Kannada News

ಚೆನ್ನೈ, ಮೇ 18: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 96 ಸಾವಿರ ಗಡಿದಾಟಿದೆ. ಮಹಾರಾಷ್ಟ್ರ ದೇಶದ ಪ್ರಮುಖ ಹಾಟ್‌ಸ್ಪಾಟ್‌ ರಾಜ್ಯವಾಗಿದೆ. ಸುಮಾರು 33 ಸಾವಿರ ಕೇಸ್‌ಗಳು ಮಹಾ ರಾಜ್ಯದಲ್ಲಿ ವರದಿಯಾಗಿದೆ.

ಮಹಾರಾಷ್ಟ್ರ ಬಿಟ್ಟರೆ ಗುಜರಾತ್, ತಮಿಳುನಾಡು ಹಾಗೂ ದೆಹಲಿಯಲ್ಲಿ ಅತಿ ಹೆಚ್ಚು ಕೇಸ್‌ಗಳು ದಾಖಲಾಗಿದೆ. ಕೊರೊನಾ ಸೋಂಕಿನ ವಿಚಾರದಲ್ಲಿ ಗುಜರಾತ್ ಮತ್ತು ತಮಿಳುನಾಡು ಅವಳಿ ರಾಜ್ಯಗಳಂತೆ ಕಂಡು ಬರುತ್ತಿದೆ.

Breaking: ಒಂದೇ ದಿನ 5242 ಕೇಸ್ ಪತ್ತೆ, ಒಟ್ಟು 3029 ಮಂದಿ ಸಾವುBreaking: ಒಂದೇ ದಿನ 5242 ಕೇಸ್ ಪತ್ತೆ, ಒಟ್ಟು 3029 ಮಂದಿ ಸಾವು

'ನೀ ಮುಂದೆ....ನಾನು ನಿನ್ನ ಹಿಂದೆ' ಎಂಬಂತೆ ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳ ಜಂಟಿಯಾಗಿ ಹೆಜ್ಜೆ ಇಡುತ್ತಿದೆ. ಹೊಸ ಕೇಸ್, ಆಕ್ಟಿವ್ ಪ್ರಕರಣ, ಚೇತರಿಕೆ ಸಂಖ್ಯೆಯಲ್ಲಿ ಬಹುತೇಕ ಸಾಮ್ಯತೆ ಹೊಂದಿದೆ. ಸಾವಿನ ಸಂಖ್ಯೆಯಲ್ಲಿ ಮಾತ್ರ ಎರಡು ರಾಜ್ಯಗಳ ನಡುವೆ ವ್ಯತ್ಯಾಸ ಕಾಣಬಹುದು. ಏನಿದು ಗುಜರಾತ್ ಮತ್ತು ತಮಿಳುನಾಡಿನ ಅಂಕಿ ಅಂಶ? ಮುಂದೆ ಓದಿ....

ಕೊರೊನಾ ದೋಣಿಯಲ್ಲಿ ಜಂಟಿ ಪಯಣ

ಕೊರೊನಾ ದೋಣಿಯಲ್ಲಿ ಜಂಟಿ ಪಯಣ

ಕೊರೊನಾ ಕೇಸ್‌ಗಳ ವಿಚಾರದಲ್ಲಿ ಗುಜರಾತ್ ಮತ್ತು ತಮಿಳುನಾಡು ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ. ಗುಜರಾತ್‌ ಒಟ್ಟು ಸೋಂಕಿತರ ಸಂಖ್ಯೆ ಮತ್ತು ತಮಿಳುನಾಡು ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಸಾಮ್ಯತೆ ಕಾಣುತ್ತಿದೆ. ಗುಜರಾತ್‌ನಲ್ಲಿ 11,380 ಕೇಸ್ ದಾಖಲಾಗಿದೆ. ಈ ಕಡೆ ತಮಿಳುನಾಡಿನಲ್ಲಿ 11,224 ಕೇಸ್ ವರದಿಯಾಗಿದೆ. ಈ ಎರಡು ರಾಜ್ಯಗಳ ನಡುವಿನ ವ್ಯತ್ಯಾಸ ಕೇವಲ 156 ಮಾತ್ರ.

ಸಕ್ರಿಯ ಕೇಸ್‌ನಲ್ಲೂ ಅನುಕರಣೆ

ಸಕ್ರಿಯ ಕೇಸ್‌ನಲ್ಲೂ ಅನುಕರಣೆ

ಒಟ್ಟು ಕೇಸ್‌ಗಳಲ್ಲಿ ಮಾತ್ರವಲ್ಲ ಪ್ರಸ್ತುತ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಗುಜರಾತ್ ಮತ್ತು ತಮಿಳುನಾಡಿನ ನಡುವೆ ಹತ್ತಿರದ ಸಂಬಂಧ ಇದೆ. ಗುಜರಾತ್‌ನಲ್ಲಿ 6222 ಕೇಸ್ ಸಕ್ರಿಯವಾಗಿದೆ. ತಮಿಳುನಾಡಿನಲ್ಲಿ 6973 ಕೇಸ್ ಆಕ್ಟಿವ್ ಆಗಿದೆ. ಎರಡು ರಾಜ್ಯಗಳ ನಡುವೆ 751 ಕೇಸ್ ಅಂತರವಿದೆ.

ರಜನಿಕಾಂತ್ ಹಿಡಿಶಾಪದ ಟ್ವೀಟ್ ವೈರಲ್: ಆದರೆ, ತಮಿಳುನಾಡು ಸರಕಾರ ಡೋಂಟ್ ಕೇರ್?ರಜನಿಕಾಂತ್ ಹಿಡಿಶಾಪದ ಟ್ವೀಟ್ ವೈರಲ್: ಆದರೆ, ತಮಿಳುನಾಡು ಸರಕಾರ ಡೋಂಟ್ ಕೇರ್?

ಚೇತರಿಕೆ ಸಂಖ್ಯೆಯಲ್ಲೂ ಹತ್ತಿರದ ನಂಟು

ಚೇತರಿಕೆ ಸಂಖ್ಯೆಯಲ್ಲೂ ಹತ್ತಿರದ ನಂಟು

ಕೊರೊನಾ ಸೋಂಕಿನಿಂದ ಚೇತರಿಕೆ ಕಂಡಿರುವವರ ಸಂಖ್ಯೆಯಲ್ಲೂ ಎರಡು ರಾಜ್ಯ ನಂಟು ಹೊಂದಿದೆ. ಗುಜರಾತ್‌ನಲ್ಲಿ 4499 ಜನರು ಡಿಸ್ಚಾರ್ಜ್ ಆಗಿದ್ದಾರೆ. ತಮಿಳುನಾಡಿನಲ್ಲಿ 4172 ಜನರು ಸೋಂಕಿನಿಂದ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.

ಸಾವಿನಲ್ಲಿ ಭಾರಿ ಅಂತರ

ಸಾವಿನಲ್ಲಿ ಭಾರಿ ಅಂತರ

ಒಟ್ಟು ಕೇಸ್, ಸಕ್ರಿಯ ಕೇಸ್, ಚೇತರಿಕೆ ಸಂಖ್ಯೆಯಲ್ಲಿ ಗುಜರಾತ್ ಮತ್ತು ತಮಿಳುನಾಡು ಅವಳಿ ರಾಜ್ಯಗಳಂತೆ ಬಿಂಬಿತವಾಗಿದೆ. ಆದರೆ, ಸಾವಿನ ಸಂಖ್ಯೆಯಲ್ಲಿ ಎರಡು ರಾಜ್ಯಗಳು ದೊಡ್ಡ ಅಂತರ ಕಾಯ್ದುಕೊಂಡಿದೆ. ಗುಜರಾತ್‌ನಲ್ಲಿ ಹೆಚ್ಚು ಸಾವು ಸಂಭವಿಸಿದೆ. 659 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಕೇವಲ 79 ಜನರು ಮಾತ್ರ ಕೊರೊನಾಗೆ ಬಲಿಯಾಗಿದ್ದಾರೆ.

English summary
Curious case of Gujarat Vs TamilNadu: Same number of confirmed/active/recovery cases, but vast difference in deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X