ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಲೂರಿನ ಮದುವೆ ಗಂಡಿಗೆ ಸಿಕ್ತು ವಿಶೇಷವಾದ ಉಡುಗೊರೆ

|
Google Oneindia Kannada News

ಕಡಲೂರ್(ತಮಿಳುನಾಡು), ಸೆಪ್ಟೆಂಬರ್ 17: ಬೆಲೆ ಏರಿಕೆಯ ದಿನಗಳಲ್ಲಿ ಅಗತ್ಯ ವಸ್ತುಗಳನ್ನು ಯಾರಾದೂ ಗಿಫ್ಟ್ ನೀಡಿದರೆ ಯಾರು ಬೇಡ ಎನ್ನುತ್ತಾರೆ. ಅದರಲ್ಲೂ ಗಗನಕ್ಕೆರುತ್ತಿರುವ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡು, ಮದುವೆ ಗಂಡಿಗೆ ಆತನ ಸ್ನೇಹಿತರು ಪೆಟ್ರೋಲ್ ಗಿಫ್ಟ್ ನೀಡಿರುವ ಘಟನೆ ವರದಿಯಾಗಿದೆ.

ಗೆಳೆಯರು ನೀಡಿದ ಉಡುಗೊರೆ ನೋಡಿ ಅಚ್ಚರಿಗೊಂಡ ನವ ದಂಪತಿ, ನಂತರ ಖುಷಿಯಿಂದ ಪೆಟ್ರೋಲ್ ಗಿಫ್ಟ್ ಸ್ವೀಕರಿಸಿದರು ಎಂದು ಪುದಿಯಾ ತಲೈಮುರೈ ತಮಿಳು ಸುದ್ದಿವಾಹಿನಿ ವರದಿ ಮಾಡಿದೆ.

ತೈಲ ಬೆಲೆ ಮತ್ತೆ ಏರಿಕೆ: ಪೆಟ್ರೋಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳತೈಲ ಬೆಲೆ ಮತ್ತೆ ಏರಿಕೆ: ಪೆಟ್ರೋಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳ

ತಮಿಳುನಾಡಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 85.15ರು ನಷ್ಟಿದೆ. ಬೆಲೆ ಇಳಿಕೆಯ ಯಾವ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ, ಪೆಟ್ರೋಲ್ ಗಿಫ್ಟ್ ನೀಡಲು ನಿರ್ಧರಿಸಿದೆವು.

Cuddalore: Groom Gets Some Fuel As Wedding Gift

ಗಿಫ್ಟ್ ಕೊಟ್ಟರೆ ಉಪಯೋಗವಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು ಎಂದು 5 ಲೀಟರ್ ಪೆಟ್ರೋಲ್ ನೀಡಿದ ಸ್ನೇಹಿತರ ಗುಂಪು ಹೇಳಿದೆ. ಸ್ನೇಹಿತರು ಗಿಫ್ಟ್ ನೀಡುವುದು, ದಂಪತಿ ಮೊದಲಿಗೆ ಗಾಬರಿಗೊಳ್ಳುವುದು, ನಂತರ ಖುಷಿಯಿಂದ ಗಿಫ್ಟ್ ಪಡೆದುಕೊಳ್ಳುವ ಕೆಲ ಸೆಕೆಂಡುಗಳ ವಿಡೀಯೋ ಕ್ಲಿಪ್ಪಿಂಗ್ ವೈರಲ್ ಆಗುತ್ತಿದೆ.

English summary
Cuddalore: Friends of groom presented him with five litres of petrol, the price of which has skyrocketed, as a "wedding gift."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X