ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು; ಒಂದೇ ದಿನ 3,509 ಹೊಸ ಕೋವಿಡ್ ಪ್ರಕರಣ!

|
Google Oneindia Kannada News

ಚೆನ್ನೈ, ಜೂನ್ 25 : ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕು ಆರ್ಭಟಿಸಿದೆ. ಗುರುವಾರ ಒಂದೇ ದಿನ 3,509 ಹೊಸ ಪ್ರಕರಣಗಳು ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಚೆನ್ನೈ ನಗರವೊಂದರಲ್ಲಿಯೇ ಸಕ್ರಿಯ ಪ್ರಕರಣಗಳ ಸಂಖ್ಯೆ 18,969.

Recommended Video

ಜನಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ | Oneindia Kannada

ಬುಧವಾರ ರಾಜ್ಯದಲ್ಲಿ 2865 ಪ್ರಕರಣ ದಾಖಲಾಗಿತ್ತು. ಕಳೆದ 24 ಗಂಟೆಯಲ್ಲಿ 32,543 ಪರೀಕ್ಷೆಗಳನ್ನು ನಡೆಸಲಾಗಿದೆ. ಗುರುವಾರ ರಾಜ್ಯದಲ್ಲಿ 3,509 ಹೊಸ ಪ್ರಕರಣ ದಾಖಲಾಗಿದೆ. ಒಂದೇ ದಿನ ಇಷ್ಟು ಪ್ರಕರಣ ದಾಖಲಾಗಿದ್ದು, ಇದೇ ಮೊದಲು.

ಕೊರೊನಾವೈರಸ್ ತಪಾಸಣೆಯಲ್ಲಿ ದಾಖಲೆ ಬರೆದ ತಮಿಳುನಾಡು! ಕೊರೊನಾವೈರಸ್ ತಪಾಸಣೆಯಲ್ಲಿ ದಾಖಲೆ ಬರೆದ ತಮಿಳುನಾಡು!

COVID 19 Tamil Nadu Reported Highest Single Day Spike

ತಮಿಳುನಾಡಿನಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 70,977ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 30,064. ಗುರುವಾರ ರಾಜಧಾನಿ ಚೆನ್ನೈನಲ್ಲಿ 1843 ಹೊಸ ಪ್ರಕರಣ ದಾಖಲಾಗಿದ್ದು, ನಗರದಲ್ಲಿನ ಒಟ್ಟು ಪ್ರಕರಣದ ಸಂಖ್ಯೆ 47,650ಕ್ಕೆ ಏರಿಕೆಯಾಗಿದೆ.

ಸದ್ಯಕ್ಕೆ ರಾಜ್ಯಕ್ಕೆ ದೇಶಿಯ ವಿಮಾನ ಸೇವೆ ಬೇಡ ಎಂದ ತಮಿಳುನಾಡು ಸದ್ಯಕ್ಕೆ ರಾಜ್ಯಕ್ಕೆ ದೇಶಿಯ ವಿಮಾನ ಸೇವೆ ಬೇಡ ಎಂದ ತಮಿಳುನಾಡು

ಚೆನ್ನೈ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಜಾರಿಗೂ ಮುನ್ನ ಜನರು ಬೇರೆ-ಬೇರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಇದರಿಂದಾಗಿ ಬೇರೆ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಕೊರೊನಾ ವಿರುದ್ಧ ಹೋರಾಟ: ಬೆಂಗಳೂರಿನಿಂದ ಚೆನ್ನೈ ಕಲಿಯಬೇಕಾದ 6 ಸಂಗತಿಕೊರೊನಾ ವಿರುದ್ಧ ಹೋರಾಟ: ಬೆಂಗಳೂರಿನಿಂದ ಚೆನ್ನೈ ಕಲಿಯಬೇಕಾದ 6 ಸಂಗತಿ

ತಮಿಳುನಾಡು ಸರ್ಕಾರ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಿರುವ ಚೆನ್ನೈ ಸೇರಿದಂತೆ 4 ಜಿಲ್ಲೆಗಳಲ್ಲಿ ಜೂನ್ 30ರ ತನಕ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಘೋಷಣೆ ಮಾಡಿದೆ.

ರಾಜ್ಯದ ಪಶ್ಚಿಮ ಭಾಗದಲ್ಲಿ 50ಕ್ಕೂ ಕಡಿಮೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿ ನಾನ್ ಹಾಟ್‌ ಸ್ಪಾಟ್‌ ಝೋನ್ ಆಗಿತ್ತು. ಬೇರೆ ಜಿಲ್ಲೆಗಳ ಜನರು ಆಗಮಿಸಲು ಅವಕಾಶ ನೀಡಿದ ಬಳಿಕ ಮಧುರೈ, ತಿರುನಲ್ವೇಲಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿದೆ.

English summary
Tamil Nadu reported highest single-day spike of COVID-19 number on June 25, 2020 with 3,509 cases. Total numbers of the state spiked to 70,977. State's capital Chennai alone reported 47,650 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X