ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ, ಡಿಎಂಡಿಕೆ ಪಕ್ಷದ ಅಧ್ಯಕ್ಷ ವಿಜಯಕಾಂತ್ ಆಸ್ಪತ್ರೆಗೆ ದಾಖಲು

|
Google Oneindia Kannada News

ಚೆನ್ನೈ, ಅ.7: ತಮಿಳು ಚಿತ್ರರಂಗದ ನಟ, ಡಿಎಂಡಿಕೆ ಪಕ್ಷದ ಅಧ್ಯಕ್ಷ ವಿಜಯಕಾಂತ್ ಅವರು ಮಂಗಳವಾರ ರಾತ್ರಿ ಚೆನ್ನೈನ ಎಂಐಒಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಆಸ್ಪತ್ರೆಗೆ ಸೆಪ್ಟೆಂಬರ್ 22 ರಂದು ಕೋವಿಡ್ -19 ಸೋಂಕಿಗಾಗಿ ಚಿಕಿತ್ಸೆ ಪಡೆದುಕೊಂಡಿದ್ದ ವಿಜಯಕಾಂತ್ ಸುಮಾರು ಹತ್ತು ದಿನಗಳ ಬಳಿಕ ಆಸ್ಪತ್ರೆಯಿಂದ ಹೊರ ಬಂದಿದ್ದರು.

ವಿಜಯ್ ಕಾಂತ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ ಎಂಬ ಸುದ್ದಿಯನ್ನು ನಂಬಬೇಡಿ, ಅವರು ಆರೋಗ್ಯದಿಂದಿದ್ದಾರೆ. ಮತ್ತೊಮ್ಮೆ ಕೊವಿಡ್ 19 ತಗುಲಿರುವ ಬಗ್ಗೆ ಆಸ್ಪತ್ರೆಯಿಂದ ದೃಢವಾದ ವರದಿ ಬಂದಿಲ್ಲ. ಆರೋಗ್ಯ ಸ್ಥಿತಿಯ ಬಗೆಗಿನ ವದಂತಿಗಳನ್ನು ಹಬ್ಬಿಸಬೇಡಿ ಎಂದು ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಪ್ರಕಟಣೆ ಹೊರಡಿಸಿದೆ.

Covid-19: DMDK leader Vijayakanth admitted to hospital again

ವೈದ್ಯಕೀಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದ ವಿಜಯ್ ಕಾಂತ್ ಅವರನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಅವರನ್ನು ಬಿಡುಗಡೆ ಮಾಡಲಾಗುವುದು ಅಂತ ಎಂಐಒಟಿ ಆಸ್ಪತ್ರೆ ತಕ್ಷಣದ ಮಾಹಿತಿ ನೀಡಿದೆ.

ಸೆಪ್ಟೆಂಬರ್ 22 ರಂದು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದ ವಿಜಯಕಾಂತ್ ನಂತರ ಅವರ ಪತ್ನಿ ಪ್ರೇಮಲತಾ ವಿಜಯಕಾಂತ್ ಕೂಡ ಕೋವಿಡ್ ಸೋಂಕಿನಿಂದ ಬಳಲಿದ್ದರು. ಇಬ್ಬರೂ ಅಕ್ಟೋಬರ್ 2ರಂದು ಚೇತರಿಕೆ ಹೊಂದಿ ಮನೆಗೆ ತೆರಳಿದ್ದರು. ಇಬ್ಬರಿಗೂ ಪರೀಕ್ಷಾ ವರದಿ ಮತ್ತೊಮ್ಮೆ ನೆಗಟಿವ್ ಬರುವ ತನಕ ಐಸೋಲೇಷನ್ ನಲ್ಲಿರಲು ವೈದ್ಯರು ಸೂಚಿಸಿದ್ದರು.

Covid-19: DMDK leader Vijayakanth admitted to hospital again

ವಿಜಯ್ ಕಾಂತ್ ಅವರು ತಮ್ಮ ಪುತ್ರ ಷಣ್ಮುಗ ಪಾಂಡಿಯನ್ ಅವರ ಚೊಚ್ಚಲ ಚಿತ್ರ ಸಂಗಪ್ತಂನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

English summary
Actor-politician Vijayakanth, who tested positive for the novel coronavirus on September 22, has been admitted to a private hospital in Chennai again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X