ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿ 2.0 ಬಿಡುಗಡೆ ದಿನವೇ ಲೀಕ್ ಮಾಡಿದ ತಮಿಳ್ ರಾಕರ್ಸ್

|
Google Oneindia Kannada News

ಚೆನ್ನೈ, ನವೆಂಬರ್ 29 : ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರವನ್ನು ಆನ್ ಲೈನ್ ನಲ್ಲಿ ಅಕ್ರಮವಾಗಿ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡದಂತೆ ಮದ್ರಾಸ್ ಹೈಕೋರ್ಟ್ ನೀಡಿದ ನಿರ್ಬಂಧಕ್ಕೆ ಬೆಲೆ ಇಲ್ಲದ್ದಂತಾಗಿದೆ. 2.0 ಚಿತ್ರವನ್ನು ತಮಿಳ್ ರಾಕರ್ಸ್ ಟೊರೆಂಟ್ ವೆಬ್ ತಾಣವು ಲೀಕ್ ಮಾಡಿದೆ.

ಸರಿ ಸುಮಾರು 37ಕ್ಕೂ ಅಧಿಕ ಇಂಟರ್ ನೆಟ್ ಸೇವಾ ಸಂಸ್ಥೆ( ಐಎಸ್ ಪಿ) ಗಳಿಗೆ 12,000ಕ್ಕೂ ಅಧಿಕ ವೆಬ್ ತಾಣಗಳನ್ನು ಬ್ಲಾಕ್ ಮಾಡಿ, 2.0 ಚಿತ್ರವನ್ನು ಪ್ರದರ್ಶಿಸದಂತೆ ತಡೆಯೊಡ್ಡುವಂತೆ ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಎಂ ಸುಂದರ್ ಆದೇಶ ನೀಡಿದ್ದರು.

Court orders 12,000 pirated websites blocks,Tamilrockers leaks 2.0 movie online

'2.O' ವಿಮರ್ಶೆ: ಗ್ರಾಫಿಕ್ಸ್ ಅಬ್ಬರ, ಶಂಕರ್ ಜಾದುಗಾರ

ಆದರೆ, ಪೈರಸಿ ಭೂತಕ್ಕೆ ಮತ್ತೊಮ್ಮೆ ರಜನಿ ಚಿತ್ರ ಬಲಿಯಾಗಿದೆ. ತಮಿಳ್ ರಾಕರ್ಸ್ ತನ್ನ ಒಡೆತನದ 2 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳಲ್ಲಿ ಚಿತ್ರವನ್ನು ಹಾಕಿದೆ.

ಸೂಪರ್ ಸ್ಟಾರ್ ರಜನಿ ಸಿನ್ಮಾ ವಿರುದ್ಧ ತಿರುಗಿಬಿದ್ದ ಟೆಲಿಕಾಂ ಆಪರೇಟರ್ಸ್ಸೂಪರ್ ಸ್ಟಾರ್ ರಜನಿ ಸಿನ್ಮಾ ವಿರುದ್ಧ ತಿರುಗಿಬಿದ್ದ ಟೆಲಿಕಾಂ ಆಪರೇಟರ್ಸ್

ಲೈಕಾ ಪ್ರೊಡೆಕ್ಷನ್ಸ್ ಪ್ರೈ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಸುಂದರ್ ಅವರು, ಅರ್ಜಿಯಲ್ಲಿ ನಮೂದಿಸಿದ್ದ 12,564ಕ್ಕೂ ಅಧಿಕ ಅಕ್ರಮ ವೆಬ್ ಸೈಟ್ ಗಳನ್ನು ನಿರ್ಬಂಧಿಸಲು ಸೂಚಿಸಿದ್ದರು.

ಬೆಂಗಳೂರಿನಲ್ಲಿ ಪರಭಾಷಾ ಹಾವಳಿ, ರೋಬೋಗೆ 900 ಸ್ಕ್ರೀನ್ ಬಳುವಳಿಬೆಂಗಳೂರಿನಲ್ಲಿ ಪರಭಾಷಾ ಹಾವಳಿ, ರೋಬೋಗೆ 900 ಸ್ಕ್ರೀನ್ ಬಳುವಳಿ

ರಜನಿಕಾಂತ್, ಅಕ್ಷಯ್ ಕುಮಾರ್, ಏಮಿ ಜಾಕ್ಸನ್ ಅಭಿನಯದ, ಎಸ್ ಶಂಕರ್ ನಿರ್ದೇಶನದ 2.0 ಚಿತ್ರವು ಗುರುವಾರದಂದು 7,000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಂಡಿದೆ.ಚೀನಾ, ಮ್ಯಾಂಡ್ರಿನ್ ಸೇರಿದಂತೆ ಐದು ಭಾಷೆಗಳಲ್ಲಿ ಪ್ರದರ್ಶನಗೊಂಡಿದೆ. ಚಿತ್ರದ ಟ್ರೇಲರ್ 1 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

English summary
Rajinikanth and Akshay Kumar starrer 2.0 was on Thursday leaked online by Tamilrockers, the notorious torrent website that hosts pirated copies of films.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X