ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿಯಿಂದಾಗಿ ಆಶ್ರಯ ಪಡೆದಿದ್ದ ಪರಿಹಾರ ಕೇಂದ್ರಕ್ಕೆ ಮತ್ತೆ ಬಂದ ದಂಪತಿ

|
Google Oneindia Kannada News

ಚೆನ್ನೈ, ನವೆಂಬರ್ 26: ಎಂಥಾ ವಿಪರ್ಯಾಸ ನೋಡಿ, ಈ ದಂಪತಿಗೆ 16 ವರ್ಷಗಳ ಕೆಳಗೆ ಸುನಾಮಿಯಿಂದಾಗಿ ರಕ್ಷಣೆ ಪಡೆದಿದ್ದ ಪರಿಹಾರ ಕೇಂದ್ರದಲ್ಲೇ ಈಗ ಚಂಡಮಾರುತದಿಂದ ರಕ್ಷಣೆ ಪಡೆಯುವಂತಾಗಿದೆ.

ಹೌದು 2004ರಲ್ಲಿ ಸುನಾಮಿಯು ತಮಿಳುನಾಡಿನ ಕರಾವಳಿ ಪ್ರದೇಶ ಪುದುಚೆರಿಗೆ ಅಬ್ಬರಿಸಿತ್ತು. ಅಂದು ಕಾಲಾಪೇಟೆಯಲ್ಲಿರುವ ಪರಿಹಾರ ಕೇಂದ್ರಕ್ಕೆ ಉಪಾರಾಣಿ ಮತ್ತು ಮಕ್ಕಳು ತೆರಳಿದ್ದರು.

ಪುದುಚೆರಿಯಲ್ಲಿ ಅಪ್ಪಳಿಸಿದ ನಿವಾರ್: ಚಂಡಮಾರುತ ಕೊಂಚ ದುರ್ಬಲಪುದುಚೆರಿಯಲ್ಲಿ ಅಪ್ಪಳಿಸಿದ ನಿವಾರ್: ಚಂಡಮಾರುತ ಕೊಂಚ ದುರ್ಬಲ

ಶಿವಲಿಂಗಮ್ ಮಾತನಾಡಿ, ಅಂದಿನ ಘಟನೆಗಳನ್ನು ಮೆಲುಕು ಹಾಕುತ್ತಾ, ನನಗೆ ಈಗಲೂ ನೆನಪಿದೆ ಎಲ್ಲಿ ನೋಡಿದರೂ ಹೆಣದ ರಾಶಿ ಕಾಣುತ್ತಿತ್ತು. ಈಗ ಎಲ್ಲರ ಮನೆಯಲ್ಲೂ ಟಿವಿ ಇದೆ, ಮೊಬೈಲ್‌ಗಳಿವೆ, ಸುನಾಮಿ ಇರಲಿ, ಚಂಡಮಾರುತವಿರಲಿ ಅದರ ಬಗ್ಗೆ ಮಾಹಿತಿ ಅತಿ ವೇಗವಾಗಿ ತಲುಪುತ್ತದೆ.

Couple, Who Survived Tsunami, Facing Cyclone Nivar In The Same Relief Center

ಅಧಿಕಾರಿಗಳು ಇಲ್ಲಿಂದ ಮನೆ ಖಾಲಿ ಮಾಡುವಂತೆ ತಿಳಿಸಿದಾಕ್ಷಣೆ ಇದೀಗ ಅಲ್ಲಿಂದ ಹೊರಟು ಬಂದಿದ್ದೇವೆ. ಶಿವಲಿಂಗಮ್ ಹಾಗೂ ಅವರ 65 ವರ್ಷದ ಪತ್ನಿಗೆ ರಕ್ತದೊತ್ತಡ ಹಾಗೂ ಮಧುಮೇಹವಿದೆ. ಸರ್ಕಾರ ನೀಡುವ ಆಹಾರಕ್ಕಾಗಿ ಶಾಲೆಯಲ್ಲಿ ಕಾಯಬೇಕಾಗಿದೆ.

ಬುಧವಾರ ಸಂಜೆ ಮತ್ತೆ 20 ಮಂದಿ ಈ ಪರಿಹಾರ ಕೇಂದ್ರಕ್ಕೆ ಬಂದಿದ್ದಾರೆ. ಕರಾವಳಿ ಪ್ರದೇಶದಲ್ಲಿ ಅತಿಯಾದ ಮಳೆ, ಗಾಳಿ ಬೀಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಭಾರತದಲ್ಲಿ ಬಹುತೇಕ ಕಡೆ ನಡುಕ ಹುಟ್ಟಿಸಿರುವ 'ನಿವಾರ್' ಚಂಡಮಾರುತ ಪುದುಚೆರಿಗೆ ಅಪ್ಪಳಿಸಿದೆ. ಬುಧವಾರ ರಾತ್ರಿ 11.30ರ ಸುಮಾರಿಗೆ ಪುದುಚೆರಿ ಸಮೀಪದ ಕರಾವಳಿಯನ್ನು ಹಾದುಹೋದ ಚಂಡಮಾರುತ ಗುರುವಾರ ನಸುಕಿನ 2.30ರ ಸುಮಾರಿಗೆ ಧರೆಗೆ ಅಪ್ಪಳಿಸಿದೆ. ಆದರೆ ಅತಿ ತೀವ್ರ ಚಂಡಮಾರುತದ ಬಿರುಗಾಳಿಯು ದುರ್ಬಲಗೊಂಡಿದ್ದು, ತೀವ್ರ ಚಂಡಮಾರುತದ ಬಿರುಗಾಳಿಯಾಗಿ ಬದಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪುದುಚೆರಿಯ 30 ಕಿಮೀ ಉತ್ತರಕ್ಕೆ ಹಾಗೂ ಚೆನ್ನೈನಿಂದ 115 ಕಿಮೀ ದಕ್ಷಿಣದಲ್ಲಿ ಮರಕ್ಕಣಂ ಕೇಂದ್ರದಲ್ಲಿ ಚಂಡಮಾರುತ ಅಪ್ಪಳಿಸಿದೆ.

ಇದರಿಂದ ಚಂಡಮಾರುತದ ರಭಸಕ್ಕೆ ಉಂಟಾಗುವ ಹಾನಿಯ ಪ್ರಮಾಣ ಕೊಂಚ ತಗ್ಗುವ ನಿರೀಕ್ಷೆಯಿದೆ. ಪುದುಚೆರಿಯ ಈಶಾನ್ಯ ವಲಯದಲ್ಲಿ ಬೀಸುತ್ತಿರುವ ಗಾಳಿ ಮೂರು ಗಂಟೆಗಳಲ್ಲಿ ಕ್ರಮೇಣ 65-75 ಕಿಮೀ ವೇಗಕ್ಕೆ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
Sixteen years later, ahead of the landfall of Cyclone Nivar, fate brought the couple, who survived Tsunami, to the same relief center, which is a government higher secondary school for girls, along with seven others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X