ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾಳೆ ಬಾ': ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಕೇಳಿದವರಿಗೆ ಇದೇ ಉತ್ತರ!

|
Google Oneindia Kannada News

ಚೆನ್ನೈ, ಏಪ್ರಿಲ್ 19: ತಮಿಳುನಾಡಿನಲ್ಲಿ ಕೊರೊನಾವೈರಸ್ ಸೋಂಕಿನ ಏರಿಕೆ ನಡುವೆ ಮುಂದಿನ ಮೂರು ದಿನಗಳಲ್ಲಿ ಕೊವಿಡ್-19 ಲಸಿಕೆ ಖಾಲಿ ಆಗಲಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕೊವಿಡ್-19 ಸೋಂಕಿನ ಭೀತಿ ನಡುವೆ ಇದೀಗ ಲಸಿಕೆ ಕೊರತೆ ಎದುರಾಗಿದೆ. ಏಪ್ರಿಲ್ 13ರ ವೇಳೆಗೆ 11.5 ಲಕ್ಷ ಡೋಸ್ ಕೊರೊನಾವೈರಸ್ ಲಸಿಕೆ ಬಾಕಿ ಉಳಿದಿದ್ದು, ಭಾನುವಾರ ಈ ಸಂಖ್ಯೆ 4.33 ಲಕ್ಷಕ್ಕೆ ಇಳಿಕೆಯಾಗಿದೆ.

ತಮಿಳುನಾಡಿನಲ್ಲಿ ಪ್ರತಿನಿತ್ಯ ರಾತ್ರಿ ಕರ್ಫ್ಯೂ ಜೊತೆ ಭಾನುವಾರದ ಲಾಕ್‌ಡೌನ್ತಮಿಳುನಾಡಿನಲ್ಲಿ ಪ್ರತಿನಿತ್ಯ ರಾತ್ರಿ ಕರ್ಫ್ಯೂ ಜೊತೆ ಭಾನುವಾರದ ಲಾಕ್‌ಡೌನ್

ಏಪ್ರಿಲ್ 15ರಂದು 2.17 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದ್ದು, ಏಪ್ರಿಲ್ 16ರಂದು 2.01 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಕಳೆದ ಮೂರು ದಿನಗಳಲ್ಲಿ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಸಂಗ್ರಹಿಸಿದ್ದ ಲಸಿಕೆ ಖಾಲಿಯಾಗುತ್ತಿದ್ದು, ಸಾಧ್ಯವಾದಷ್ಟು ಬೇಗ ಲಸಿಕೆ ಪೂರೈಸಬೇಕಾದ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Coronavirus Vaccine Shortage in Tamil Nadu; Other Side Demand Rises For Vaccine

ಲಸಿಕೆ ಇಲ್ಲ ನಾಳೆ ಬನ್ನಿ ಅನ್ನೋ ಪರಿಸ್ಥಿತಿ:

ಮಹಾನಗರ ಪಾಲಿಕೆ ಕೊರೊನಾವೈರಸ್ ಲಸಿಕೆ ಕೇಂದ್ರ ಮತ್ತು ಆಸ್ಪತ್ರೆಗಳಿಗೆ ತೆರಳುವ ಫಲಾನುಭವಿಗಳಿಗೆ ಲಸಿಕೆ ಸಿಗುತ್ತಿಲ್ಲ. ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಪಡೆದುಕೊಳ್ಳಲು ಲಸಿಕೆ ಲಭ್ಯವಿಲ್ಲ. "ಕಳೆದ ಮಾರ್ಚ್ 16ರಂದು ನಾನು ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದೆ. ಎರಡನೇ ಡೋಸ್ ಪಡೆದುಕೊಳ್ಳಲು ಎದುರು ನೋಡುತ್ತಿದ್ದೇನೆ. ಆದರೆ ಆಸ್ಪತ್ರೆಯ ಸಿಬ್ಬಂದಿಯು ಲಸಿಕೆ ಖಾಲಿಯಾಗಿದ್ದು, ಎರಡು ದಿನ ಬಿಟ್ಟು ಬರುವಂತೆ ಹೇಳುತ್ತಿದ್ದಾರೆ ಎಂದು 49 ವರ್ಷದ ಫಲಾನುಭವಿಯೊಬ್ಬರು ತಿಳಿಸಿದ್ದಾರೆ.

ಲಸಿಕೆ ಕೊರತೆ ಬಗ್ಗೆ ಅಧಿಕಾರಿಗಳ ಸ್ಪಷ್ಟನೆ:

ತಮಿಳುನಾಡಿನಲ್ಲಿ ಕೊವ್ಯಾಕ್ಸಿನ್ ಲಸಿಕೆ ಲಭ್ಯತೆ ವಿರಳವಾಗಿದ್ದು, ಕೊವಿಶೀಲ್ಡ್ ಲಸಿಕೆಗೆ ಯಾವುದೇ ಕೊರತೆಯಿಲ್ಲ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಶೇ.6ರಷ್ಟು ಕೊವಿಶೀಲ್ಡ್ ಲಸಿಕೆಯಿದ್ದರೆ ಈ ಪೈಕಿ ಶೇ.1ರಷ್ಟು ಕೊವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಮುಂದಿನ 24 ಗಂಟೆಗಳಲ್ಲಿ ಲಸಿಕೆ ತರಿಸಿಕೊಳ್ಳಲಾಗುತ್ತಿದ್ದು, ಎಷ್ಟು ಪ್ರಮಾಣವೆಂದು ಖಚಿತವಾಗಿ ಹೇಳಲಾಗದು ಎಂದು ಹೇಳಿದ್ದಾರೆ.

English summary
Coronavirus Vaccine Shortage in Tamil Nadu; Other Side Demand Rises For Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X